ಭಿನ್ನಮತ ಸ್ಪೋಟ- ಹೊರಬಿತ್ತು ಮೈತ್ರಿ ಜಗಳ! ಸಿದ್ದುಗೆ ಕಡಕ್ ವಾರ್ನಿಂಗ್ ಕೊಟ್ಟ ದೇವೇಗೌಡರು ! ಸರ್ಕಾರ ಉಳಿಯುವುದು ಅನುಮಾನ

ಇಷ್ಟು ದಿವಸ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಕೆಲವು ಶಾಸಕರು ಹಾಗೂ ನಾಯಕರು ಹೇಳಿಕೆ ನೀಡುತ್ತಿದ್ದರು. ಆದರೆ ಎರಡು ಪಕ್ಷಗಳ ಹಿರಿಯ ನಾಯಕರು ನಮ್ಮ ಮಧ್ಯೆ ಯಾವುದೇ ಗೊಂದಲಗಳಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಜನರಲ್ಲಿ ಆತ್ಮವಿಶ್ವಾಸ ತುಂಬಲು ಪ್ರಯತ್ನ ಪಡುತ್ತಿದ್ದರು. ಆದರೆ ಇದೀಗ ಎರಡು ಪಕ್ಷಗಳ ಹಿರಿಯ ನಾಯಕರ ನಡುವೆ ವಾಗ್ವಾದ ತಾರಕಕ್ಕೇರಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದೇವೇಗೌಡರ ಹಾಗೂ ಸಿದ್ದರಾಮಯ್ಯನವರ ನಡುವಿನ ಕಾಳಗ ರಾಹುಲ್ಗಾಂಧಿ ರವರ ಮಟ್ಟಕ್ಕೆ ತಲುಪಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಇದ್ಯಾವುದಕ್ಕೂ ಅಧಿಕೃತ ಹೇಳಿಕೆ ಯಾವುದೇ ನಾಯಕರಿಂದ ಹೊರ ಬಿದ್ದಿರಲಿಲ್ಲ. ಆದರೆ ಇದೀಗ ಭಿನ್ನಮತ ವಿರುವುದನ್ನು ಖಚಿತಪಡಿಸಿರುವ ದೇವೇಗೌಡರು ಸಿದ್ದರಾಮಯ್ಯನವರ ವಿರುದ್ಧ ಹರಿಹಾಯ್ದಿದ್ದಾರೆ, ಹಾಗೂ ಸರ್ಕಾರ ಉರುಳಿಸುವ ಬೆದರಿಕೆ ಒಡ್ಡಿದ್ದಾರೆ.

ಹೌದು, ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಸೋತ ಅಭ್ಯರ್ಥಿಗಳ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡರು ಈಗಾಗಲೇ ಮೈತ್ರಿ ಮಧ್ಯೆ ಮುನಿಸುಂಟಾಗಿದೆ, ಸಿದ್ದರಾಮಯ್ಯರವರು ಜೆಡಿಎಸ್ ಪಕ್ಷದ ವಿರುದ್ಧ ರಾಹುಲ್ ಗಾಂಧಿ ರವರಿಗೆ ದೂರು ಕೊಟ್ಟಿದ್ದಾರೆ, ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರ ನಡೆಸುವ ಮನಸ್ಸು ಇದೆಯೋ ಇಲ್ಲವೋ ತಿಳಿದಿಲ್ಲ. ಸರ್ಕಾರ ಉಳಿಯಬೇಕು ಎಂದರೆ ಸಿದ್ದರಾಮಯ್ಯರವರು ಒಡಕಿನ ಮಾತುಗಳನ್ನು ಮಾಡುವುದನ್ನು ನಿಲ್ಲಿಸಬೇಕು ಆಗಮಾತ್ರ ಮೈತ್ರಿ ಸರ್ಕಾರವು ನಾಲ್ಕು ವರ್ಷಗಳ ಕಾಲ ಸುಭದ್ರವಾಗಿರುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಸಿದ್ದರಾಮಯ್ಯರವರ ಮಾತುಗಳಿಂದ ಸರ್ಕಾರಕ್ಕೆ ಸಂಕಷ್ಟ ಎದುರಾಗುತ್ತಿದೆ ಸರ್ಕಾರದ ಅಸ್ಥಿರತೆಗೆ ಸಿದ್ದರಾಮಯ್ಯರವರ ಕಾರಣ ಎಂಬ ಧಾಟಿಯಲ್ಲಿ ಸಿದ್ದರಾಮಯ್ಯನವರ ವಿರುದ್ಧ ಗುಡುಗಿದ್ದಾರೆ. ಒಟ್ಟಿನಲ್ಲಿ ಇದೀಗ ದೋಸ್ತಿಗಳ ನಡುವಿನ ತಿಕ್ಕಾಟ, ಹಿರಿಯ ನಾಯಕರ ಬಾಯಿಂದ ಹೊರ ಬಿದ್ದಿದ್ದು ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ ವಾಗಿದೆ.