ಜೆಡಿಎಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡು ರೇವಣ್ಣನವರಿಗೆ ಸವಾಲೆಸೆದ ಪ್ರೀತಂ ಗೌಡ!

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಕಾಡೆ ಮಲಗಿವೆ. ಬಿಜೆಪಿ ಪಕ್ಷದ ಅಲೆಯನ್ನು ತಡೆಯುವಲ್ಲಿ ದೋಸ್ತಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇನ್ನು ದೋಸ್ತಿಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ ಬಳಿಕ, ಹಲವಾರು ಸವಾಲುಗಳನ್ನು ಎದುರಿಸಿದರೂ ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸೋಣ ಆ ಮೂಲಕ ಬಿಜೆಪಿ ಪಕ್ಷವನ್ನು ಒಂದಂಕಿಗೆ ತಂದು ನಿಲ್ಲಿಸೋಣ ಎಂದು ನಿರ್ಧಾರ ಮಾಡಿದ್ದರು. ಇಷ್ಟು ವಿಶ್ವಾಸ ಸಾಲದು ಎಂಬಂತೆ ಎಚ್ ಡಿ ರೇವಣ್ಣ ರವರು ಕೊಂಚಮಟ್ಟಿನ ಹೆಚ್ಚಿನ ವಿಶ್ವಾಸವನ್ನು ದೋಸ್ತಿ ಪಕ್ಷಗಳ ಮೇಲೆ ಹಿಟ್ಟು ಒಂದು ವೇಳೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾದರೆ ರಾಜಕೀಯ ಸನ್ಯಾಸತ್ವವನ್ನು ಪಡೆದು ರಾಜೀನಾಮೆ ನೀಡುತ್ತೇನೆ ಎಂದು ಹೇಳಿಕೆ ನೀಡಿದರು. ಇನ್ನು ಪ್ರಜ್ವಲ್ ರೇವಣ್ಣ ರವರು ತಾತನಿಗಾಗಿ ತಮ್ಮ ಸಂಸದ ಸ್ಥಾನವನ್ನು ಬಿಟ್ಟು ಕೊಡುತ್ತೇನೆ ಎಂದು ಹೇಳಿಕೆ ನೀಡಿದ್ದರು.

ಎರಡು ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಪ್ರೀತಂ ಗೌಡ ರವರು ಪ್ರಜ್ವಲ್ ಮಾಧ್ಯಮದ ಮುಂದೆ ಬಂದು ರಾಜೀನಾಮೆ ಮಾತನಾಡುತ್ತಾರೆ, ಆದರೆ ಅದಕ್ಕೂ ಮೊದಲು ಪ್ರಮಾಣವಚನ ಸ್ವೀಕಾರ ಮಾಡಬೇಕು ಎಂಬುದು ಸಹ ಅವರಿಗೆ ತಿಳಿದಿಲ್ಲ. ದೇವೇಗೌಡ ರವರು ಹಾಸನ ಜಿಲ್ಲೆಯ ಧ್ವನಿಯಾಗಬೇಕು ಎನ್ನುವುದು ಇಲ್ಲಿನ ಜನರ ಆಸೆಯಾಗಿತ್ತು. ಆದರೆ ಜೆಡಿಎಸ್ ಪಕ್ಷದ ಕುಟುಂಬ ರಾಜಕಾರಣ ಬಂದು ಕ್ಯಾಬಿನೆಟ್ ವಿಚಾರವನ್ನು ತಮ್ಮ ಅಡುಗೆಮನೆಯಲ್ಲಿ ತೀರ್ಮಾನಿಸಿದ್ದಾರೆ. ನಾವು ನಿಂಬೆಹಣ್ಣು ಇಟ್ಟುಕೊಂಡು ಶಾಸ್ತ್ರ ಹೇಳಲ್ಲ, ಮೋದಿ ಗೆದ್ದರೆ ರಾಜಕೀಯ ಸನ್ಯಾಸ ಪಡೆಯುತ್ತೇನೆ ಎಂದಿದ್ದ ರೇವಣ್ಣ ರವರು ಇದೀಗ ಎಲ್ಲಿದ್ದಾರೆ, ಅವರು ನೀಡಿದ ಮಾತಿಗೆ ಬದ್ಧರಾಗಿರುತ್ತಾರೆಯೇ ಎಂದು ಸವಾಲೆಸೆದಿದ್ದಾರೆ. ಮೋದಿ ರವರನ್ನು ಟೀಕಿಸಿದ ಯಾರು ಉಳಿದಿಲ್ಲ, ಮಂಡ್ಯ ಜಿಲ್ಲೆಯಲ್ಲಿ ರೇವಣ್ಣ ಅವರ ಹೇಳಿಕೆಯಿಂದ ನಿಖಿಲ್ ಅವರಿಗೆ ಹಿನ್ನಡೆಯಾಗಿದೆ ತಮ್ಮ ಕ್ಷೇತ್ರಗಳನ್ನು ಬಿಟ್ಟು ದೇಶದ ಕ್ಷೇತ್ರಗಳ ಬಗ್ಗೆ ಮಾತನಾಡುವ ರೇವಣ್ಣನವರಿಗೆ ಯಾರು ಅಭ್ಯರ್ಥಿಗಳು ಇದ್ದಾರೆ ಎಂಬುದೇ ತಿಳಿದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.