ದಿನೇ ದಿನೇ ಮೋದಿ ಅಲೆಗೆ ಕೊಚ್ಚಿಹೋಗುತ್ತಿರುವ ಆಮ್ ಆದ್ಮಿ ಪಾರ್ಟಿ- ಬಿತ್ತು ಆಪ್ ನ ಮತ್ತೊಂದು ವಿಕೆಟ್

ಆಮ್ ಆದ್ಮಿ ಪಾರ್ಟಿಯ ಮುಖ್ಯಸ್ಥ ಹಾಗೂ ದೆಹಲಿಯ ಮುಖ್ಯಮಂತ್ರಿ ಗಳಾಗಿರುವ ಅರವಿಂದ ಕೇಜ್ರಿವಾಲ್ ರವರಿಗೆ ದಿನಕ್ಕೊಂದು ಶಾಕ್ಗಳು ಎದುರಾಗುತ್ತಿವೆ. ನರೇಂದ್ರ ಮೋದಿ ರವರ ಅಲೆಯ ಬಗ್ಗೆ ಭಾರಿ ತಲೆಕೆಡಿಸಿಕೊಂಡಿರುವ ಅರವಿಂದ ಕೇಜ್ರಿವಾಲ್ ಅವರು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದರು. ಶೇಕಡ 95ಕ್ಕೂ ಹೆಚ್ಚು ಶಾಸಕರನ್ನು ಹೊಂದಿದ್ದರೂ ಸಹ ದೆಹಲಿಯ 7 ಲೋಕ ಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಎಂದು ಹಠಹಿಡಿದಿದ್ದ ಅರವಿಂದ ಕೇಜ್ರಿವಾಲ್ ರವರನ್ನು ಕಾಂಗ್ರೆಸ್ ಪಕ್ಷವು ದೂರ ಇಟ್ಟು ಸ್ವತಂತ್ರವಾಗಿ ಚುನಾವಣೆ ಎದುರಿಸಲು ಸಿದ್ಧವಾಗಿದ್ದು ನಿಮಗೆ ಎಲ್ಲರಿಗೂ ತಿಳಿದೇ ಇದೆ.

ಅಷ್ಟೆಲ್ಲಾ ಶಾಸಕರ ಬೆಂಬಲವನ್ನು ಹೊಂದಿರುವ ಆಮ್ ಆದ್ಮಿ ಪಾರ್ಟಿಯು ದಿನೇದಿನೇ ಕುಸಿಯತೊಡಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈ ಮಾತುಗಳಿಗೆ ಪೂರಕವೆಂಬಂತೆ ಅರವಿಂದ ಕೇಜ್ರಿವಾಲ್ ಅವರು ಮೊದಲಿನಿಂದಲೂ ನರೇಂದ್ರ ಮೋದಿ ರವರು ಆಮ್ ಆದ್ಮಿ ಪಕ್ಷವನ್ನು ಮುಗಿಸಲು ಪ್ರಯತ್ನ ಪಡುತ್ತಿದ್ದಾರೆ. ಆದರೆ ನರೇಂದ್ರ ಮೋದಿ ರವರ ಕೈಯಲ್ಲಿ ಅದು ಸಾಧ್ಯವಾಗುವುದಿಲ್ಲ ನಮ್ಮ ಶಾಸಕರು ಆಮ್ ಆದ್ಮಿ ಪಾರ್ಟಿಯನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ ಎಂದು ಬಿಜೆಪಿ ಪಕ್ಷಕ್ಕೆ ಬಹಿರಂಗ ಸವಾಲನ್ನು ಎಸೆದು ತಾಕತ್ತಿದ್ದರೆ ಒಬ್ಬ ಶಾಸಕರನ್ನು ಕರೆದುಕೊಂಡು ಹೋಗಿ ಎಂದು ಹೇಳಿಕೆ ನೀಡಿದ್ದರು.

ಇದಾದ ಕೇವಲ 24 ಗಂಟೆಗಳಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಅನಿಲ ವಾಜಪೇಯಿ ರವರು ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರಿ ಅರವಿಂದ ಕೇಜ್ರಿವಾಲ್ ಅವರಿಗೆ ದೊಡ್ಡ ಶಾಕ್ ನೀಡಿದ್ದರು. ಈ ಘಟನೆ ಮರೆಮಾಚುವ ಮುನ್ನವೇ ಆಮ್ ಆದ್ಮಿ ಪಕ್ಷದ ಪ್ರಭಾವಿ ನಾಯಕ ಹಾಗೂ ಶಾಸಕ ದೇವೇಂದ್ರ ಕುಮಾರ್ ರವರು ಇಂದು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಆಮ್ ಆದ್ಮಿ ಪಕ್ಷದ ವಿರುದ್ಧ ಹರಿಹಾಯ್ದಿರುವ ದೇವೇಂದ್ರ ಕುಮಾರ್ ರವರು, ಅನಿಲ್ ಅವರಂತೆ ಪಕ್ಷದ ದೇಣಿಗೆ ಕುರಿತು ಧ್ವನಿ ಎತ್ತಿದ್ದು ಹಣ ಹೊಂದಿಸಲು ಯಾವ ಶಾಸಕರ ಕೈಯಲ್ಲೂ ಸಾಧ್ಯವಿಲ್ಲ. ಅರವಿಂದ ಕೇಜ್ರಿವಾಲ್ ರವರಿಗೆ ದೇಣಿಗೆ ನೀಡಿ ನೀಡಿ ಸಾಕಾಗಿದೆ ಎಂಬ ಆರೋಪವನ್ನು ಮಾಡಿದ್ದಾರೆ.

ಈ ಮೂಲಕ ಆಮ್ ಆದ್ಮಿ ಪಾರ್ಟಿಯ ಎರಡನೇ ವಿಕೆಟ್ ಪತನವಾಗಿದ್ದು, ಇನ್ನು ಕೆಲವು ಮೂಲಗಳ ಪ್ರಕಾರ ಹತ್ತಕ್ಕೂ ಹೆಚ್ಚು ಆಮ್ ಆದ್ಮಿ ಪಕ್ಷದ ಶಾಸಕರು ಬಿಜೆಪಿ ಪಕ್ಷದ ಪರ ಒಲವು ಹೊಂದಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಇನ್ನೇನು ಲೋಕಸಭಾ ಚುನಾವಣೆಗೆ ಕೆಲವೇ ಕೆಲವು ದಿನಗಳು ಇರುವ ಕಾರಣ ಪಕ್ಷಾಂತರ ಗಳು ಬಾರಿ ಮಹತ್ವವನ್ನು ಪಡೆದುಕೊಳ್ಳುತ್ತಿದ್ದು, ದಿನೇದಿನೇ ಆಮ್ ಆದ್ಮಿ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷದ ಕಡೆ ವಲಸೆ ಹೋಗುತ್ತಿದ್ದಾರೆ. ಒಂದು ವೇಳೆ ಇದೇ ಛಾಪು ಮುಂದುವರೆದಲ್ಲಿ ಅಧಿಕಾರದಲ್ಲಿ ಇರುವ ಪಕ್ಷವನ್ನು ಬಿಜೆಪಿ ಪಕ್ಷವು ಬಹಳ ಸುಲಭವಾಗಿ ಸೋಲಿಸಲಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.