ಸಾಧ್ವಿ ಪ್ರಜ್ಞಾ ಸಿಂಗ್ ರವರಿಗೆ ಟಿಕೆಟ್ ನೀಡಲು ಮೋದಿ ಕೊಟ್ಟ ಕಾರಣವೇನು ಗೊತ್ತಾ??

ಇಡೀ ದೇಶದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ರವರಿಗೆ ಬಿಜೆಪಿ ಪಕ್ಷದ ಟಿಕೆಟ್ ನೀಡಿರುವ ವಿಷಯ ಭಾರಿ ಸದ್ದು ಮಾಡುತ್ತಿದೆ. ಬಾರಿ ಕಿರುಕುಳಕ್ಕೆ ಒಳಗಾಗಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ರವರನ್ನು ಬಿಜೆಪಿ ಪಕ್ಷವು ದೇಶದ ಅಭಿವೃದ್ದಿಯ ಪಥವನ್ನು ನಿರ್ಧರಿಸುವ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪಕ್ಷಕ್ಕೆ ಆಹ್ವಾನಿಸಿ ಟಿಕೆಟ್ ನೀಡಲಾಗಿದೆ. ಈ ವಿಷಯ ಘೋಷಣೆಯಾದ ತಕ್ಷಣ ವಿರೋಧ ಪಕ್ಷಗಳಿಂದ ಭಾರಿ ವಿರೋಧ ಕೇಳಿ ಬಂದಿದೆ, ಆದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಬಿಜೆಪಿ ಪಕ್ಷವು ತನ್ನ ನಿರ್ಧಾರವನ್ನು ಮೊದಲಿನಿಂದಲೂ ಸಮರ್ಥಿಸಿಕೊಳ್ಳುತ್ತಾ ಬಂದಿದೆ. ಇದೀಗ ಗುದ್ದು ನರೇಂದ್ರ ಮೋದಿ ಅವರು ಈ ಪ್ರಶ್ನೆಗೆ ಉತ್ತರ ನೀಡಿದ್ದು ಇನ್ನಾದರೂ ವಿರೋಧಿಗಳು ಸುಮ್ಮನಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇತ್ತೀಚೆಗೆ ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿರುವ ನರೇಂದ್ರ ಮೋದಿರವರು ಈ ಚುನಾವಣೆ ಯಾವ ವ್ಯಕ್ತಿ ಆಧಾರಿತ ಅಲ್ಲ, ಯಾವ ಕುಟುಂಬದ ವಿರುದ್ಧ ನಡೆಯುತ್ತಿರುವ ಚುನಾವಣೆ ಅಲ್ಲವೇ ಅಲ್ಲ, ಇದು ದೇಶದ ಭದ್ರತೆ ಹಾಗೂ ಅಭಿವೃದ್ಧಿ ಸೇರಿದಂತೆ ಬಿಜೆಪಿ ಪಕ್ಷವು ಕಳೆದ ಐದು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಮಾನದಂಡಗಳ ಮೇಲೆ ನಡೆಯುತ್ತಿರುವ ಕಾರಣ ಇಡೀ ವಿಶ್ವವೇ ಇಂದು ಭಾರತದ ಚುನಾವಣೆಯತ್ತ ಗಮನ ಹರಿಸಿ ಕಾದು ಕುಳಿತಿದೆ ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ಪ್ರಜ್ಞಾ ಸಿಂಗ್ ರವರಿಗೆ ಯಾಕೆ ಟಿಕೆಟ್ ನೀಡಿದ್ದೀರಿ ಎಂದು ಪ್ರಶ್ನಿಸಿದಾಗ ನರೇಂದ್ರ ಮೋದಿ ಅವರ ಉತ್ತರ ಹೀಗಿತ್ತು.

ಮೊದಲಿನಿಂದಲೂ ಕಾಂಗ್ರೆಸ್ ಪಕ್ಷವು ಹಿಂದೂ ಭಯೋತ್ಪಾದನೆ ಹಾಗೂ ಕೇಸರಿ ಭಯೋತ್ಪಾದನೆ ಎಂದು ಹೇಳುತ್ತಾ ಎಲ್ಲರನ್ನೂ ವಿರೋಧಿಸುತ್ತಾ ಬಂದಿತ್ತು. ಸಾಧ್ವಿ ಪ್ರಜ್ಞಾ ಸಿಂಗ್ ರವರಿಗೆ ಟಿಕೆಟ್ ನೀಡುವಾಗ ಹಲವಾರು ಬಾರಿ ಆಲೋಚಿಸಿ ಪಕ್ಷದವರು ಹಾಗೂ ನಾವು ತೀರ್ಮಾನವನ್ನು ಕೈಗೊಂಡಿದ್ದೇವೆ. ದೇಶದಲ್ಲಿ ಹಿಂದೂಗಳನ್ನು ಭಯೋತ್ಪಾದಕರು ಹಾಗೂ ಕೇಸರಿ ಭಯೋತ್ಪಾದಕರು ಎಂದು ಟೀಕೆ ಮಾಡಿ ಎಲ್ಲರನ್ನೂ ಅವಮಾನಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ತಿರುಗೇಟು ನೀಡಲು ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗಿದೆ ಎಂದು ಉತ್ತರ ನೀಡಿದ್ದಾರೆ.

ಮೊದಲಿನಿಂದಲೂ ದೇಶಾದ್ಯಂತ ಸಿಖ್ ಸಮುದಾಯದ ಮೇಲೆ ಮಾರಣಹೋಮಗಳು ನಡೆಯುತ್ತಿವೆ, ಸಾವಿರಾರು ಕುಟುಂಬಗಳು ನ್ಯಾಯ ಸಿಗದೆ ಸಂತ್ರಸ್ತರಾಗಿದ್ದಾರೆ. ಈ ಘಟನೆಯಲ್ಲಿ ಅನೇಕ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರೂ ಸಹ ಯಾರು ಅವರನ್ನು ವಿಚಾರಣೆ ಮಾಡುವ ಧೈರ್ಯ ಮಾಡಲಿಲ್ಲ, ವ್ಯವಸ್ಥಿತವಾಗಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ, ಅಟಲ್ ಬಿಹಾರಿ ವಾಜಪೇಯಿ ರವರು ಅಧಿಕಾರಕ್ಕೆ ಬಂದ ತಕ್ಷಣ ಪ್ರಕರಣವನ್ನು ತನಿಖೆಗೆ ಆದೇಶಿಸಿದರು, ಅದೇ ಕಾರಣವಾಗಿ ಸಜ್ಜನ್ ಕುಮಾರ್ ಎಂಬ ಆರೋಪಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಎಲ್ಲಾ ತಪ್ಪುಗಳಿಗೂ ಶಿಕ್ಷೆ ನೀಡುವ ಕೆಲಸ ನಾನು ಮಾಡುತ್ತೇನೆ ಮತ್ತೊಮ್ಮೆ ಪ್ರಧಾನಿಯಾಗಿ ದುಷ್ಟರನ್ನು ಜೈಲಿಗೆ ಅಟ್ಟುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.