ಶಿವಮೊಗ್ಗ- ಮೈತ್ರಿ ಅಭ್ಯರ್ಥಿ ಗೆ ಮತ್ತೊಂದು ಬಿಗ್ ಶಾಕ್, ಬಿಜೆಪಿಗೆ ಬೆಂಬಲ ನೀಡಿದ ಮತ್ತೊಬ್ಬ ನಾಯಕ

ಕರ್ನಾಟಕದ ಎರಡನೇ ಹಂತದ ಚುನಾವಣೆಗೆ ಇನ್ನು ಕೇವಲ 48 ಗಂಟೆಗಳು ಮಾತ್ರ ಬಾಕಿ ಇದೆ. ಇದೀಗ ಎರಡನೇ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ, ನಾಳೆ ಒಂದು ದಿನ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತದಾರರನ್ನು ಓಲೈಸುವ ಕೆಲಸ ಮಾಡಲಿದ್ದಾರೆ. ಲೋಕಸಭಾ ಚುನಾವಣೆಯ ಕಣ ರಂಗೇರುತ್ತಿದೆ, ಈ ಸಂದರ್ಭದಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿಯೂ ಸಹ ಪ್ರಚಾರ ಕಾರ್ಯಕ್ರಮಗಳು ಬಾರಿ ಭರದಿಂದ ಸಾಗುತ್ತಿವೆ. ಇನ್ನು ಈಗಾಗಲೇ ಭಾರೀ ಕುತೂಹಲವನ್ನು ಕೆರಳಿಸಿರುವ ಎರಡನೇ ಹಂತದ ಚುನಾವಣೆಗೆ 48 ಗಂಟೆಗಳು ಇರುವಾಗ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಮೈತ್ರಿಯಿಂದ ಕಣಕ್ಕೆ ಇಳಿದಿರುವ ಮಧು ಬಂಗಾರಪ್ಪ ನವರಿಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ.

ಒಟ್ಟಿನಲ್ಲಿ ಯಾಕೋ ಮಧು ಬಂಗಾರಪ್ಪನವರ ಅದೃಷ್ಟ ಚೆನ್ನಾಗಿ ಇದ್ದಂತೆ ಕಾಣುತ್ತಿಲ್ಲ, ಬಿಜೆಪಿ ಪಕ್ಷದ ರಾಜ್ಯ ಅಧ್ಯಕ್ಷರ ಭದ್ರಕೋಟೆ ಯಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಬಿಎಸ್ವೈ ರವರ ಪುತ್ರ ರಾಘವೇಂದ್ರ ಅವರನ್ನು ಎದುರಿಸುತ್ತಿರುವ ಮಧು ಬಂಗಾರಪ್ಪ ನವರಿಗೆ ಇದೀಗ ರಾಜ್ಯದ ರೈತರ ಸಂಘದ ಹಿರಿಯ ಕಾರ್ಯಾಧ್ಯಕ್ಷ ಶಾಕ್ ನೀಡಿದ್ದಾರೆ. ಇತ್ತೀಚೆಗಷ್ಟೇ ಮಧು ಬಂಗಾರಪ್ಪನವರು ಇದೇ ನಾಯಕನ ಮನೆಗೆ ತೆರಳಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಕೋರಿ ಕೊಂಡಿದ್ದರು. ಆದರೆ ಮೈತ್ರಿಕೂಟಕ್ಕೆ ಬೆಂಬಲ ನೀಡಲು ನಾನು ಯೋಚಿಸಬೇಕು ಎಂದು ಸ್ವಲ್ಪ ಸಮಯ ಕೇಳಿಕೊಂಡಿದ್ದ ಕಾರ್ಯಾಧ್ಯಕ್ಷರು ಇದೀಗ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಯಡಿಯೂರಪ್ಪನವರು ಇಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ರಾಗಿರುವ ಎಚ್ ಆರ್ ಬಸವರಾಜಪ್ಪ ನವರನ್ನು ಭೇಟಿ ಮಾಡಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರರಾದ ರಾಘವೇಂದ್ರ ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು. ಯಡಿಯೂರಪ್ಪನವರ ಭೇಟಿಯ ನಂತರ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಲು ಒಪ್ಪಿಕೊಂಡ ಎಚ್ ಆರ್ ಬಸವ ರಾಜಪ್ಪನವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ.

ಈ ಮೂಲಕ ಈಗಾಗಲೇ ಬಾರಿ ಬೆಂಬಲದೊಂದಿಗೆ ಮುನ್ನುಗ್ಗುತ್ತಿರುವ ರಾಘವೇಂದ್ರ ರವರಿಗೆ ಮತ್ತಷ್ಟು ಬಲ ಬಂದಂತಾಗಿದ್ದು ಇತ್ತ ಬಿಜೆಪಿ ಪಕ್ಷದ ಭದ್ರಕೋಟೆಯನ್ನು ಜಯಿಸಲು ಕನಸು ಕಾಣುತ್ತಿದ್ದ ಮಧು ಬಂಗಾರಪ್ಪ ನವರಿಗೆ ಕೊಂಚ ಹಿನ್ನಡೆಯಾಗಿದೆ. ಒಟ್ಟಿನಲ್ಲಿ ಮುಂದಿನ ಲೋಕಸಭಾ ಚುನಾವಣೆ ಕ್ಷಣಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಯಾವ ಸಮಯದಲ್ಲಿ ಏನು ಆಗುತ್ತದೆ ಎಂಬುದು ಯಾರೂ ಊಹಿಸದ ರೀತಿಯಲ್ಲಿ ಮುಂದೆ ಹೋಗುತ್ತಿದೆ. ಇನ್ನು ಚುನಾವಣೆಗೆ ಕೇವಲ 48 ಗಂಟೆಗಳು ಬಾಕಿ ಉಳಿದಿವೆ, ದಯವಿಟ್ಟು ಎಲ್ಲರೂ ಮತಚಲಾಯಿಸಿ ಪ್ರಜಾಪ್ರಭುತ್ವ ವನ್ನು ಉಳಿಸಿ.