ಬಿಗ್ ಬ್ರೇಕಿಂಗ್: 150 ಕೋಟಿ ಖರ್ಚು ತಪ್ಪೊಪ್ಪಿಕೊಂಡ ಜೆಡಿಎಸ್ ನಾಯಕರು, ಭಾರಿ ಅಕ್ರೋಶ

ಇಡೀ ಕರ್ನಾಟಕದಲ್ಲಿ ಗೆ ಮಂಡ್ಯ ಜಿಲ್ಲೆಯ ಹೈ ವೋಲ್ಟೇಜ್ ಕ್ಷೇತ್ರದ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಎನಿಸಿಕೊಂಡಿರುವ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ರವರು ಮಂಡ್ಯ ಜಿಲ್ಲೆಯ ಮಾಜಿ ಸಂಸದ ಅಂಬರೀಶ್ ರವರ ಧರ್ಮಪತ್ನಿ ಯಾಗಿರುವ ಸುಮಲತಾ ರವರನ್ನು ಚುನಾವಣೆಯಲ್ಲಿ ಎದುರಿಸುತ್ತಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸುಮ್ಮನೆ ಅವರಿಗೆ ಈಗಾಗಲೇ ಮೂರು ಪಕ್ಷದ ನಾಯಕರ ಬೆಂಬಲಗಳು ದೊರಕಿವೆ. ಈ ರೀತಿ ಭಾರಿ ಜನ ಬೆಂಬಲದೊಂದಿಗೆ ಮುನ್ನುಗ್ಗುತ್ತಿರುವ ಸುಮಲತಾ ರವರು ಮೊದಲು ಆರೋಪ ಮಾಡಿದಂತೆ ಮಂಡ್ಯ ಜಿಲ್ಲೆಯಲ್ಲಿ ಭಾರೀ ಹಣ ಹರಿದಾಡುತ್ತಿದೆ ಎಂಬ ಶಾಕಿಂಗ್ ವರದಿ ಹೊರಬಿದ್ದಿದೆ.

ಹಲವೆಡೆ ಸುಮಲತಾ ರವರ ಪ್ರಚಾರ ಕಾರ್ಯಕ್ರಮದಲ್ಲಿ ಜೆಡಿಎಸ್ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಬಾವುಟಗಳು ರಾರಾಜಿಸುತ್ತವೆ. ಪರಿಸ್ಥಿತಿ ಹೀಗಿರುವಾಗ ಜೆಡಿಎಸ್ ಪಕ್ಷದ ಮುಖಂಡರು ಇತ್ತೀಚೆಗೆ ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು. ಮಂಡ್ಯ ಜಿಲ್ಲೆಯ ಹಾಲಿ ಸಂಸದರಾಗಿರುವ ಶಿವರಾಮೇಗೌಡ ರವರ ಪುತ್ರ ಜೆಡಿಎಸ್ ಪಕ್ಷದ ಮಾಜಿ ಕಾರ್ಯಕರ್ತರೊಂದಿಗೆ ಚುನಾವಣಾ ಕರ್ಚಿಗಾಗಿ ಬರೋಬ್ಬರಿ 150 ಕೋಟಿ ಹಣ ಬಳಕೆಯಾಗುತ್ತದೆ, ಹಾಗೂ ಈ ಮೂಲಕ ಮಂಡ್ಯ ಜಿಲ್ಲೆಯ ಮತದಾರರನ್ನು ಆಮಿಷಕ್ಕೆ ಒಳಪಡಿಸಲು ಪ್ರಯತ್ನಿಸುತ್ತಾರೆ ಎಂಬ ಆಡಿಯೋ ಹೊರಬಿದ್ದಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ.

ಇನ್ನು ಈ ಮಾಹಿತಿಯನ್ನು ಕನ್ನಡದ ಪ್ರತಿಷ್ಠಿತ ನ್ಯೂ ಸಂಸ್ಥೆಯಾದ ಟಿವಿ9 ಹೊರಹಾಕಿದ್ದು ಮೇಲಿನ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿ ಇದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕರು ಹಾಗೂ ಜನಸಾಮಾನ್ಯರು ಮಂಡ್ಯ ಜಿಲ್ಲೆಯಲ್ಲಿ ಬಾರಿ ಹಣ ಹರಿದಾಡುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ, ದಯವಿಟ್ಟು ಚುನಾವಣಾ ಆಯೋಗವು ಈ ಕೂಡಲೇ ಕ್ರಮವನ್ನು ತೆಗೆದುಕೊಂಡು ಹಣದ ಆಮಿಷ ಒಡ್ಡುತ್ತಿರುವ ನಾಯಕರನ್ನು ಬಂಧನ ಮಾಡಿ ಚುನಾವಣೆಯನ್ನು ಮುಂದೂಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.