ಮತ್ತೊಮ್ಮೆ ಭಯೋತ್ಪಾದನೆ ಪರ ನಿಂತ ರಾಹುಲ್, ತಿರುಗೇಟು ನೀಡಿ ಸವಾಲೆಸೆದ ಸುಷ್ಮಾ ಸ್ವರಾಜ್ !

ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಮನ ಬಂದಂತೆ ಹೇಳಿಕೆಗಳನ್ನು ನೀಡುವುದರಲ್ಲಿಯೇ ಪ್ರಸಿದ್ಧರು. ಹಲವಾರು ಬಾರಿ ಹೇಳಿಕೆಗಳು ವಿವಾದವನ್ನು ಸೃಷ್ಟಿಸಿವೆ, ಇನ್ನು ಕೆಲವು ಬಾರಿ ತಮಾಷೆಯಾಗಿ ಬದಲಾಗಿ ರಾಹುಲ್ ಗಾಂಧಿ ರವರನ್ನು ಪಪ್ಪು ಎಂದು ಕರೆಯುವಂತೆ ಮಾಡಿವೆ. ಇದೀಗ ಮತ್ತೊಮ್ಮೆ ಭಯೋತ್ಪಾದನೆಯ ಪರ ನಿಂತುಕೊಳ್ಳುವಂತೆ ಮಾತನಾಡಿರುವ ರಾಹುಲ್ ಗಾಂಧಿ ರವರಿಗೆ ಸುಷ್ಮಸ್ವರಾಜ್ ರವರು ತಕ್ಕ ತಿರುಗೇಟು ನೀಡಿದ್ದಾರೆ ಹಾಗೂ ಬಹಿರಂಗ ಸವಾಲ್ ಎಸೆದಿದ್ದಾರೆ.

ಕೆಲವು ತಿಂಗಳುಗಳ ಹಿಂದಷ್ಟೇ ಉದ್ಯೋಗ ಇಲ್ಲದೆ ಯುವಕರು ಭಯೋತ್ಪಾದನೆಯ ಸಂಘಟನೆಗಳನ್ನು ಸೇರುತ್ತಿದ್ದಾರೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ರಾಹುಲ್ ಗಾಂಧಿ ಅವರು ಈಗ ಮತ್ತೊಮ್ಮೆ ಉದ್ಯೋಗ ಪ್ರಮುಖ ವಿಷಯ ಭಯೋತ್ಪಾದನೆ ದೇಶದ ಪ್ರಮುಖ ವಿಷಯವಲ್ಲ ಎಂದು ಅಭಿಪ್ರಾಯ ಹೊರಗಿದ್ದಾರೆ. ಈ ಹೇಳಿಕೆ ದೇಶದ ಎಲ್ಲೆಡೆ ಭಾರಿ ವಿವಾದವನ್ನು ಸೃಷ್ಟಿಸಿದ್ದು ದೇಶದ ಭದ್ರತೆಯ ವಿಚಾರದಲ್ಲಿ ಭಯೋತ್ಪಾದನೆ ಪ್ರಮುಖ ವಿಷಯ ಎಂಬುದು ಸಾಮಾನ್ಯ ನಾಗರಿಕರಿಗೂ ತಿಳಿದಿದೆ ಆದರೆ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಗೆ ಈ ಬಗ್ಗೆ ತಿಳಿದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಹತ್ಯೆಯಾದ ನಂತರ ನಿಮ್ಮ ಸಂಪೂರ್ಣ ಕುಟುಂಬಕ್ಕೆ ಎಸ್ ಪಿ ಜಿ ಕಮಾಂಡೋಗಳು ಭದ್ರತೆಯನ್ನು ನೀಡುತ್ತ ಬಂದಿದ್ದಾರೆ. ಭಯೋತ್ಪಾದನೆ ಒಂದು ಪ್ರಮುಖ ವಿಷಯ ಅಲ್ಲ ಮತ್ತು ದೇಶದಲ್ಲಿ ಭಯೋತ್ಪಾದನೆ ಇಲ್ಲ ಎಂಬ ಅಭಿಪ್ರಾಯ ನಿಮ್ಮದಾಗಿದ್ದರೆ ದಯವಿಟ್ಟು ಕೇಂದ್ರ ಸರ್ಕಾರಕ್ಕೆ ಈ ಕೂಡಲೇ ನನಗೆ ಭದ್ರತೆ ಬೇಡ ಎಂದು ಲಿಖಿತವಾಗಿ ಮನವಿ ನೀಡಿ ಎಂದು ತಿಳಿಸಿದ್ದಾರೆ.

ವಿರೋಧ ಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ರವರ ಮೇಲಾಗಲಿ ಅಥವಾ ಸೈನಿಕರ ಮೇಲಾಗಲಿ ನಂಬಿಕೆ ಇಲ್ಲ. ಬಾಲ ಕೋಟ್ ದಾಳಿಯ ಕುರಿತು ಪಾಕಿಸ್ತಾನದ ಪ್ರಧಾನಿ ನಂಬಿ ಇಮ್ರಾನ್ ಖಾನ್ ರವರು ನೀಡಿದ ಹೇಳಿಕೆಗಳನ್ನು ಆಧಾರವನ್ನಾಗಿ ಪರಿಗಣಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಇದೇ ಸಮಯದಲ್ಲಿ ಸುಷ್ಮಸ್ವರಾಜ್ ರವರು ತಿಳಿಸಿದ್ದಾರೆ. ಇನ್ನು ಜಗತ್ತಿನ ಅನೇಕ ದೇಶಗಳ ನಾಯಕರು ನನಗೆ ಕರೆ ಮಾಡಿ ಭಾರತವು ಭಯೋತ್ಪಾದನೆಯ ವಿರುದ್ಧ ತೆಗೆದುಕೊಂಡಿರುವ ನಿಲುವನ್ನು ಶ್ಲಾಘನೆ ಮಾಡುತ್ತಿದ್ದಾರೆ ಆದರೆ ವಿರೋಧ ಪಕ್ಷಗಳು ಮಾತ್ರ ಸಾಕ್ಷಿ ಕೇಳಿ ದೇಶವನ್ನು ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.