ಹೆದ್ದಾರಿ ಟು ಜೆಡಿಎಸ್ ಸಭೆ ಎಲ್ಲೆಲ್ಲೂ ಮೋದಿ ಹವಾ- ಸಿಎಂ ಕುಮಾರಸ್ವಾಮಿ ರವರಿಗೆ ಭಾರಿ ಮುಜುಗರ

ಇತ್ತೀಚೆಗೆ ನರೇಂದ್ರ ಮೋದಿ ರವರ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚುತ್ತಿದೆ ಇಷ್ಟು ದಿವಸ ಕೇವಲ ಬಿಜೆಪಿ ಪಕ್ಷದ ಬೆಂಬಲಿಗರು ನರೇಂದ್ರ ಮೋದಿ ರವರ ಭಕ್ತರಾಗಿ ಗುರುತಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಮೈತ್ರಿಯನ್ನು ಮಾಡಿಕೊಂಡಿರುವ ಕಾರಣ ಇಷ್ಟು ದಿವಸ ಬದ್ಧ ವೈರಿಗಳಂತೆ ಕಾದಾಡುತ್ತಿದ್ದ ಪಕ್ಷಗಳ ಕಾರ್ಯಕರ್ತರ ಜೊತೆ ಮೈತ್ರಿ ಮಾಡಿಕೊಳ್ಳಲು ತಯಾರಿಲ್ಲದ ಕಾರ್ಯಕರ್ತರು ಸಹ ನರೇಂದ್ರ ಮೋದಿರವರ ಭಕ್ತರಾಗಿ ಬದಲಾವಣೆಗೊಳ್ಳುತ್ತಿದ್ದಾರೆ. ಯಾವೊಬ್ಬ ರಾಜಕೀಯ ನಾಯಕರು ಬಂದರೆ ಸಾಕು ನರೇಂದ್ರ ಮೋದಿ ರವರ ಭಕ್ತರು ಮೋದಿ ಮೋದಿ ಎಂಬ ಘೋಷಣೆಗಳ ಮೂಲಕ ನಾಯಕರಿಗೆ ಬಾರಿ ಮುಜುಗರವನ್ನು ಉಂಟು ಮಾಡುತ್ತಿದ್ದರು.

ಎಲ್ಲಿ ಹೋದರೂ ನರೇಂದ್ರ ಮೋದಿ ರವರ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎಂಬುದು ತಿಳಿದಿರುವ ವಿಷಯ. ಆದ ಕಾರಣಕ್ಕಾಗಿ ರಾಜಕೀಯ ನಾಯಕರು ಮೋದಿ ಮೋದಿ ಎಂಬ ಘೋಷಣೆಗಳು ಕೇಳಿದ ತಕ್ಷಣ ಸ್ಥಳದಿಂದ ಪಲಾಯನ ಗೊಳ್ಳುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಇದರ ಬಿಸಿ ನೇರವಾಗಿ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಗಳಗಿರುವ ರಾಹುಲ್ ಗಾಂಧಿ ಅವರನ್ನು ಸಹ ತಟ್ಟಿದೆ. ಇತ್ತೀಚೆಗೆ ಬೆಂಗಳೂರಿನ ಐಟಿ ಪಾರ್ಕ್ ನಲ್ಲಿ ಪ್ರಚಾರ ಕಾರ್ಯಕ್ರಮ ನಡೆಸಲು ಹೋಗಿದ್ದ ರಾಹುಲ್ ಗಾಂಧಿ ರವರಿಗೆ ಮೋದಿ ಮೋದಿ ಎಂಬ ಘೋಷಣೆಗಳು ಕೇಳಿ ಬಂದಿದ್ದವು.

ಅದೇ ರೀತಿ ಇದೀಗ ಕುಮಾರಸ್ವಾಮಿ ರವರಿಗೆ ಜೆಡಿಎಸ್ ಪಕ್ಷದ ಸಭೆಯಲ್ಲಿಯೇ ಮೋದಿ ಮೋದಿ ಎಂಬ ಘೋಷಣೆಗಳು ಕೇಳಿ ಬಂದಿದ್ದು ಬಾರಿ ಮುಜುಗರಕ್ಕೆ ಕುಮಾರಸ್ವಾಮಿಯವರು ಉಂಟಾಗಿದ್ದರೆ. ಕರಾವಳಿಯ ಜನತೆಗೆ ಬುದ್ಧಿ ಇಲ್ಲ ಆದ ಕಾರಣಕ್ಕಾಗಿ ಅವರು ಬಿಜೆಪಿಗೆ ಮತ ನೀಡುತ್ತಾರೆ ಎಂದು ಹೇಳಿಕೆ ನೀಡಿದ್ದ ನಂತರ ಕರಾವಳಿಯ ಜೆಡಿಎಸ್ ಕಾರ್ಯಕರ್ತರು ಸಹ ಕುಮಾರಸ್ವಾಮಿ ರವರ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಇದೇ ನಿಟ್ಟಿನಲ್ಲಿ ಕುಮಾರಸ್ವಾಮಿ ರವರು ಕುಂದಾಪುರದಲ್ಲಿ ನಡೆದ ಜೆಡಿಎಸ್ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿದ್ದರು, ನೂರಾರು ಯುವಕರು ಹೆದ್ದಾರಿಯಲ್ಲಿ ಮೋದಿ ಮೋದಿ ಎಂಬ ಘೋಷಣೆಗಳ ಮೂಲಕ ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದರು ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಸಭೆ ನಡೆಸಲು ಮುಂದಾದರು, ಸಭೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಒಳನುಸುಳಲು ಬಿಡಲಿಲ್ಲ ಆದರೆ ಒಳಗಿದ್ದ ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ರವರ ಕೆಲವು ಹೇಳಿಕೆಗಳಿಗೆ ಬೇಸತ್ತು ಮೋದಿ ಮೋದಿ ಎಂದು ಘೋಷಣೆಗಳನ್ನು ಕೂಗಿ ಹೊರನಡೆದಿರುವ ವಿಷಯ ತಡವಾಗಿ ಹೊರಗೆ ಬಂದಿದೆ. ಇದೀಗ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.