ಕಾಂಗ್ರೆಸ್ ಗೆ ಭಾರಿ ಮುಖಭಂಗ, ವಾಯು ದಾಳಿ ಸಾಕ್ಷಿ ಕೇಳಿದ್ದಕ್ಕೆ ಈ ನಾಯಕ ಮಾಡಿದ್ದೇನು ಗೊತ್ತಾ??

ಭಾರತೀಯ ವಾಯುಪಡೆಯು ಪುಲ್ವಾಮ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ಮೇಲೆ ದಾಳಿ ಮಾಡಿ 300 ಕ್ಕೂ ಹೆಚ್ಚು ಉಗ್ರರನ್ನು ನರಕಕ್ಕೆ ಕಳುಹಿಸಿತ್ತು. ದಾಳಿ ನಡೆದ ಕೆಲವೇ ಕೆಲವು ಗಂಟೆಗಳ ನಂತರ ಪ್ರತಿಯೊಬ್ಬ ರಾಜಕಾರಣಿಗಳು ಎಲ್ಲರೂ ಸೇನೆಯನ್ನು ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸೇನೆಯ ಪರಾಕ್ರಮಕ್ಕೆ ಶಹಭಾಷ್ ಎಂದಿದ್ದರು. ಆದರೆ ಕೆಲವೇ ಕೆಲವು ದಿನಗಳ ನಂತರ ತಮ್ಮ ರಾಜಕೀಯ ಲಾಭಕ್ಕಾಗಿ ಸೇನೆಯನ್ನು ಎಳೆದು ತರಲು ಸಾಕ್ಷಿ ಕೇಳಿ ಸೇನೆಯ ಮೇಲೆ ಅನುಮಾನ ಪಟ್ಟಿದ್ದರು. ಇದರಿಂದ ಹಲವಾರು ವಿವಾದಗಳು ರಾಜಕೀಯ ನಾಯಕರ ಮೇಲೆ ಸೃಷ್ಟಿಯಾಗಿದ್ದವು. ಇದಕ್ಕೆ ಖುದ್ದು ವಾಯುಪಡೆಯ ಮುಖ್ಯಸ್ಥ ಉತ್ತರ ನೀಡಿದರು, ರಾಜಕೀಯ ನಾಯರು ಒಪ್ಪಿಕೊಂಡಿರಲಿಲ್ಲ. ರಹಸ್ಯ ಮಾಹಿತಿಗಳನ್ನು ಹೇಗೆ ಬಿಟ್ಟು ಕೊಡಲು ಸಾಧ್ಯ ನೀವೇ ಹೇಳಿ

ಹಲವಾರು ಕಾಂಗ್ರೆಸ್ ನಾಯಕರು ತಾವು ರಾಜಕೀಯ ಲಾಭಕ್ಕಾಗಿ ಸೇನೆಯನ್ನು ಬಳಸಿಕೊಳ್ಳಲು ಎಷ್ಟು ಉಗ್ರರು ಸತ್ತಿದ್ದಾರೆ, ನಮಗೆ ಸಾಕ್ಷಿ ಕೊಡಿ, ಹೇಗೆ ದಾಳಿಯಾಯಿತು ಎಂಬುದು ನಮಗೆ ತಿಳಿಯಬೇಕು ಎಂದು ಮೋದಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ಸೇನೆಯನ್ನು ಅವಮಾನಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರಿಂದ ಎಲ್ಲಾ ದೇಶಭಕ್ತರ ಕೆಂಗಣ್ಣಿಗೆ ಗುರಿಯಾದ ಕಾಂಗ್ರೆಸ್ ನಾಯಕರಿಗೆ ಈಗ ಮತ್ತೊಂದು ಭಾರಿ ಮುಖಭಂಗ ಉಂಟಾಗಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಬಿಹಾರದ ಇಂದಿನ ಕಾಂಗ್ರೆಸ್ ವಕ್ತಾರ ವಿನೋದ್ ಶರ್ಮಾ ರವರು ರಾಹುಲ್ ಗಾಂಧಿ ಸೇರಿದಂತೆ ಹಲವಾರು ನಾಯಕರು ಸೈನಿಕರ ಪರ ಮಾತನಾಡದೆ ಸಾಕ್ಷಿ ಕೇಳಿದ್ದಕ್ಕಾಗಿ ರಾಜಿನಾಮೆ ನೀಡುತ್ತಿದ್ದೇನೆ ಎಂದು ತಮ್ಮ ಸಂಪೂರ್ಣ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಸೈನಿಕರ ಶೌರ್ಯವನ್ನು ಪ್ರಶ್ನೆ ಮಾಡುವ ಮೂಲಕ ಪಕ್ಷದ ನಾಯಕರು ಸೈನಿಕರ ಆತ್ಮಸ್ಥೈರ್ಯವನ್ನು ಕುಂದಿಸುವ ಕೆಲಸ ಮಾಡಿದ್ದಾರೆ ಎಂದು ವಿನೋದ ಶರ್ಮಾ ರವರು ತಿಳಿಸಿದ್ದಾರೆ.