ಕೊನೆಗೂ ತನ್ನ ಕ್ಷೇತ್ರ ನಿರ್ಧರಿಸಿದ ಮೋದಿ ! ರಂಗೇರಿದ ಚುನಾವಣೆ

2014ರಲ್ಲಿ ನರೇಂದ್ರ ಮೋದಿ ಅವರು ಕೇವಲ ತಮ್ಮ ಅಲೆಯೊಂದಿಗೆ ಸ್ಪಷ್ಟ ಬಹುಮತ ಸಾಧಿಸಿ ಅಧಿಕಾರದ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದ್ದರು. ಬಿಜೆಪಿ ಪಕ್ಷ ಸ್ಪಷ್ಟ ಬಹುಮತ ಸಾಧಿಸುವಲ್ಲಿ ನರೇಂದ್ರ ಮೋದಿರವರ ವರ್ಚಸ್ಸು ಬಹಳ ಪ್ರಮುಖವಾದ ಪಾತ್ರವನ್ನು ವಹಿಸಿತ್ತು, ಅಂದು ಗುಜರಾತ್ ನ ಒಂದು ಕ್ಷೇತ್ರದಿಂದ ಸ್ಪರ್ಧಿಸಿ ಮತ್ತು ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿ 2ರಲ್ಲಿ ಗೆಲುವು ಸಾಧಿಸಿದ ನರೇಂದ್ರ ಮೋದಿರವರು ನಂತರ ಗುಜರಾತಿನ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ವಾರಣಾಸಿಯ ಸಂಸದರಾಗಿ 5 ವರ್ಷ ಕೆಲಸ ನಿರ್ವಹಿಸಿದ್ದಾರೆ.  ಇನ್ನೇನು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರತಿ ನಾಯಕರಂತೆ ನರೇಂದ್ರ ಮೋದಿ ಅವರು ಸಹ ತಮ್ಮ ಕ್ಷೇತ್ರಗಳ ಹುಡುಕಾಟದಲ್ಲಿ ತೊಡಗಿ ಕೊಂಡಿದ್ದಾರೆ.ತಾನು ದೇಶ ಸೇವೆಯಲ್ಲಿ ನಿರವಾಗಿದ್ದರು ಸಹ ಎಂದು ವಾರಣಾಸಿಯ ಜನರಿಗೆ ಯಾವುದೇ ತೊದರೆಯಾಗದಂತೆ ನರೇಂದ್ರ ಮೋದಿ ರವರು ಸಕಲ ಸೌಲಭ್ಯಗಳನ್ನು ನೀಡಿ ಜನರ ಮನಗೆಲ್ಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಹಿಂದೆಂದೂ ಕಾಣದಂತಹ ಅಭಿವೃದ್ಧಿಯನ್ನು ವಾರಣಾಸಿ ಕ್ಷೇತ್ರವು ನರೇಂದ್ರ ಮೋದಿ ರವರ 5 ವರ್ಷದಲ್ಲಿ ಕಂಡಿದೆ. ಆದ ಕಾರಣದಿಂದಲೇ ಅಭಿವೃದ್ಧಿಯನ್ನು ಮಾನದಂಡವನ್ನಾಗಿ ಮಾಡಿಕೊಂಡಿರುವ ನರೇಂದ್ರ ಮೋದಿ ಅವರು ಮತ್ತೊಮ್ಮೆ ವಾರಣಾಸಿಯಿಂದ ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಕಳೆದ ಬಾರಿ ಅರವಿಂದ ಕೇಜ್ರಿವಾಲ್ ಅವರನ್ನು ಸೋಲಿಸಿ ಭರ್ಜರಿಯಾಗಿ ಗೆದ್ದ ನರೇಂದ್ರ ಮೋದಿರವರು ಮತ್ತೊಮ್ಮೆ ವಾರಣಾಸಿಯಿಂದ ಕಣಕ್ಕಿಳಿಯಲಿದ್ದಾರೆ. ವಾರಣಾಸಿಯನ್ನು ಹೊರತುಪಡಿಸಿ ಮತ್ತೊಂದು ಕ್ಷೇತ್ರದಲ್ಲಿ ನರೇಂದ್ರ ಮೋದಿ ಅವರು ಸ್ಪರ್ಧಿಸುವ ಎಲ್ಲಾ ಸಾಧ್ಯತೆಗಳು ಇವೆ ಆದ ಕಾರಣದಿಂದ ಈಗ ಮತ್ತೊಂದು ಕ್ಷೇತ್ರದ ಹುಡುಕಾಟದಲ್ಲಿ ನರೇಂದ್ರ ಮೋದಿ ಅವರು ತೊಡಗಿಕೊಂಡಿದ್ದಾರೆ. ಇನ್ನು ಮತ್ತೊಂದು ಕ್ಷೇತ್ರ ಕರ್ನಾಟಕ ದಿಂದ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈಗ ವಾರಣಾಸಿಯ ನಂತರ ಇಡೀ ದೇಶದ ಗಮನ ಕರ್ನಾಟಕದತ್ತ ನೆಟ್ಟಿದೆ