ಕಳಚಿತು ಮತ್ತೊಂದು ಕೊಂಡಿ: ಮಹಾಘಟಬಂಧನ ಮತ್ತೊಂದು ವಿಕೆಟ್ ಪತನ

ಮಹಾಘಟಬಂಧನ್, ನರೇಂದ್ರ ಮೋದಿ ಅವರನ್ನು ಪ್ರತ್ಯೇಕವಾಗಿ ಎದುರಿಸಲು ಸಾಧ್ಯವಾಗದೆ ವಿರೋಧ ಪಕ್ಷಗಳು ಒಟ್ಟುಗೂಡಿ ಮಹಾಘಟಬಂಧನ್ ಎಂಬ ಹೆಸರು ಇಟ್ಟುಕೊಂಡು ನರೇಂದ್ರ ಮೋದಿ ಅವರನ್ನು ಸೋಲಿಸುವ ಕನಸು ಕಾಣುತ್ತಿದ್ದಾರೆ. ಆದರೆ ದಿನೇ ದಿನೇ ಮಹಾಘಟಬಂಧನ್ ಗೆ ಹೊಸ ಹೊಸ ಹೊಡೆತಗಳು ಬೀಳುತ್ತಿವೆ. ಇದು ಇದೇ ರೀತಿ ಮುಂದುವರೆದಲ್ಲಿ ಚುನಾವಣೆಗೂ ಮುನ್ನವೇ ಮಹಾಘಟಬಂಧನ್ ಟುಸ್ ಆಗಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾಯಾವತಿ ಹಾಗೂ ಅಖಿಲೇಶ್ ಯಾದವ್ ರವರು ಮೊದಲ ಶಾಕ್ ನೀಡಿದ್ದರು. ತದನಂತರ ಚಂದ್ರಬಾಬು ನಾಯ್ಡುರವರ ಜೊತೆಗೆ ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ಮೈತ್ರಿ ಯನ್ನು ಮಾಡಿಕೊಳ್ಳುವುದಿಲ್ಲ ಎಂಬ ಅಂಶ ಬಯಲಾಗಿತ್ತು, ಇದರಿಂದ ಎರಡನೇ ವಿಕೆಟ್ ಪತನ ಆಗಿತ್ತು. ಇನ್ನು ಮಹಾಘಟಬಂಧನ ಪ್ರಮುಖ ನಾಯಕಿ ಎಂದು ಗುರುತಿಸಿಕೊಂಡಿದ್ದ ಮಮತಾ ಬ್ಯಾನರ್ಜಿ ರವರ ಪಕ್ಷಿಮ ಬಂಗಾಳ ದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ದೂರವಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದರು.

ಇದೀಗ ಮುಂಬರುವ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷವು ಮತ್ತೊಂದು ಕೊಂಡಿಯನ್ನು ಕಳೆದುಕೊಂಡಂತಾಗಿದೆ. ಬಹುತೇಕ ಪಕ್ಷಗಳು ಕಾಂಗ್ರೆಸ್ ಪಕ್ಷದಿಂದ ದೂರ ಸರಿಯುತ್ತಿದ್ದರೆ, ಆದರೆ ಇಲ್ಲಿ ಕಾಂಗ್ರೆಸ್ ಹಾಗೂ ಆಮ್ ಆದ್ಮಿಯ ನಡುವಿನ ಹಗ್ಗ ಜಗ್ಗಾಟ ಜೋರಾಗಿ ಕೊನೆಗೆ ಕಾಂಗ್ರೆಸ್ ಪಕ್ಷವು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದೆ.

ಹೌದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿಯ ಜೊತೆ ಯಾವುದೇ ಚುನಾವಣೆ ಮೈತ್ರಿ ಇರುವುದಿಲ್ಲ ಎಂದು ಸ್ಪಷ್ಟವಾಗಿ ಕಾಂಗ್ರೆಸ್ ಪಕ್ಷ ತಿಳಿಸಿದೆ. ಇತ್ತೀಚೆಗೆ ಕೇಜ್ರಿವಾಲ್ ರವರು ಸಹ ಮೈತ್ರಿ ಮುನ್ಸೂಚನೆ ನೀಡಿದರು. ಆದರೆ ಎಲ್ಲಾ ಬಾಗಿಲು ಮುಚ್ಚಿವೆ, ಆದ್ದರಿಂದ ನಾನು ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಇದೀಗ ಘೋಷಿಸಿದ್ದಾರೆ.ಈ ಮೂಲಕ ಮಹಾ ಘಟಬಂಧನ ಮತ್ತೊಂದು ವಿಕೆಟ್ ಪತನ ವಾಗಿದ್ದು ಚುನಾವಣೆಗೂ ಮುನ್ನವೇ ಮಹಾಘಟಬಂಧನ್ ಟುಸ್ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.