ಮಧ್ಯಪ್ರದೇಶದಲ್ಲಿ ಮತ್ತೊಂದು ಹಗರಣ ಬಯಲು, ಕಾಂಗ್ರೆಸ್ ಗೆ ಭಾರಿ ಮುಖಭಂಗ

ಇತ್ತೀಚೆಗಷ್ಟೇ ಕೇವಲ 3 ರಾಜ್ಯಗಳನ್ನು ಗೆದ್ದು ನರೇಂದ್ರ ಮೋದಿ ಅವರನ್ನು ಸೋಲಿಸುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗ ಎದುರಾಗಿದೆ. ತನ್ನ ಅಧಿಕಾರ ಸ್ಥಾಪಿಸಿರುವ ಮಧ್ಯಪ್ರದೇಶದಲ್ಲಿ ಹಗರಣಗಳ ಸರಮಾಲೆಯನ್ನು ಕಾಂಗ್ರೆಸ್ ಸರ್ಕಾರ ಆರಂಭಿಸಿದೆ.

ಮೊದಲು ರೈತರಿಗೆ ನೀಡಬೇಕಿದ್ದ ಯೂರಿಯಾನ ಬೆಲೆ ಹೆಚ್ಚು ಮಾಡಿ ರೈತರಿಗೆ ಮೊದಲ ಶಾಕ್ ನೀಡಿ ಇಡೀ ದೇಶದ ಮುಂದೆ ಬೆತ್ತಲಾಗಿ ನಿಂತಿದ್ದ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರದ ಮತ್ತೊಂದು ಹಗರಣ ಹೊರಬಂದಿದ್ದು ಭಾರಿ ಮುಖಭಂಗ ಉಂಟಾಗಿದೆ.

ರೈತರಿಗೆ ಸಾಲ ಮನ್ನದ ಆಸೆ ತೋರಿಸಿ, ರಾಜ್ಯ ನಡೆಸಲು ಬಜೆಟ್ ಇಲ್ಲದಂತೆ ಮಾಡಿಕೊಂಡು ಸಾಲ ಮನ್ನಾ ಮಾಡಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಕಾಂಗ್ರೆಸ್ ನ ನೈಜ ಮುಖವಾಡ ದಿನೇದಿನೇ ಕಳಚಿ ಹೊರಬರುತ್ತಿದೆ. ಇಂದು ಮತ್ತೊಂದು ಹಗರಣ ಹೊರಬಿದ್ದಿದ್ದು  ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗ ಎದುರಾಗಿದೆ.

ಅಷ್ಟಕ್ಕೂ ಹಗರಣದ ಯಾವುದು ಗೊತ್ತಾ?

ಮಧ್ಯಪ್ರದೇಶದಲ್ಲಿ ಬಜೆಟ್ ನ ಹಣವನ್ನು ರೈತರ ಸಾಲ ಮನ್ನಾಗೆ ಬಳಸಿದ ಕಾರಣ ಸರ್ಕಾರವನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಯಾವುದೇ ಹೊಸ ಯೋಜನೆ ಯಲ್ಲಿ ಹಣ ಬರದೇ ಇದ್ದಾಗ ಕಾಂಗ್ರೆಸ್ ಸರಕಾರವು ರೈತರ ಸಾಲ ಮನ್ನಾ ಯೋಜನೆಯಲ್ಲಿ ಹಣ ಹೊಡೆಯಲು  ಪ್ರಯತ್ನಿಸುತ್ತಿದೆ ಎಂಬ ಅಂಶ ಬಯಲಾಗಿದೆ. ಸಾಲಮನ್ನಾ ಯೋಜನೆಯ ಅಡಿಯಲ್ಲಿ ರೈತರ ಹೆಸರಿನಲ್ಲಿ 120 ಕೋಟಿ ಅಕ್ರಮ ಎಸೆದಿರುವುದು ಸಾಬೀತಾಗಿದೆ. ನಕಲಿ ರೈತರ ಹೆಸರಿನಲ್ಲಿ 120 ಕೋಟಿ ಯಾರ ಜೇಬಿಗೆ ಹೋಗಿದೆ ಎಂಬುದು ತಿಳಿಯುತ್ತಿಲ್ಲ.

ದಾಖಲೆಗಳನ್ನು ತೆಗೆದು ನೋಡಿದಾಗ ಸಾಲ ಮನ್ನಾ ಮಾಡಿದ ಹೆಸರಿನಲ್ಲಿ ಯಾವುದೇ ರೈತರು ಇಲ್ಲ ಎಂಬುದು ಬಯಲಾಗಿದೆ. ಈ ಅಂಶ ಬಯಲಾದ ಕೂಡಲೇ ಕಾಂಗ್ರೆಸ್ ಪಕ್ಷಕ್ಕೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹೊಸ ಯೋಜನೆಯನ್ನು ರೂಪಿಸಿ ಹಣ ಪಡೆಯಲು ಸಾಧ್ಯವಾಗದೆ ಇದ್ದಾಗ ಹಳೆಯ ಯೋಜನೆಯಲ್ಲಿ ಹಗರಣ ಮಾಡಲು ಕಾಂಗ್ರೆಸ್ ಪಕ್ಷವು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿದೆ. ಇಲ್ಲದ ರೈತರ ಸಾಲ ಮನ್ನ ಮಾಡಿದ್ದೇನೆ ಎಂದು ದಾಖಲೆಗಳನ್ನು ತೋರಿಸಿ ಹಗರಣ ನಡೆಸುತ್ತಿದೆ ಎಂದು ಜನರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.