ಯು ಪಿ: ಬಿಜೆಪಿಗೆ ಭರ್ಜರಿ ಗೆಲುವು, 80 ರಲ್ಲಿ ಎಷ್ಟು ಕ್ಷೇತ್ರಗಳು ಗೊತ್ತಾ??

ದೇಶದ ರಾಜಕಾರಣದಲ್ಲಿ ಅತಿ ಹೆಚ್ಚು ಪ್ರಭಾವವನ್ನು ಬೀರುವ ಉತ್ತರ ಪ್ರದೇಶ ರಾಜ್ಯದ ಹಲವಾರು ದಿನಗಳಿಂದಲೂ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಯೋಗಿ ಆದಿತ್ಯನಾಥ್ ರವರ ಅಲೆಯನ್ನು ತಡೆಯಲು ಬಲವಿಲ್ಲದ ಮೈತ್ರಿ ಎಂದು ಹೆಸರಾದ ಅಖಿಲೇಶ್ ಹಾಗೂ ಮಾಯಾವತಿ ಪಕ್ಷಗಳು ಮೈತ್ರಿ ರಚಿಸಿಕೊಂಡು ಬಿಜೆಪಿ ಪಕ್ಷವನ್ನು ಎದುರಿಸಲು ಸಿದ್ಧರಾಗಿದ್ದರು.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಡೀ ದೇಶದಲ್ಲಿ ನಾವು ಮೋದಿಯವರ ಅಲೆಯನ್ನು ಕಾಣುತ್ತಿದ್ದೇವೆ ಆದರೆ ಉತ್ತರ ಪ್ರದೇಶದಲ್ಲಿ ಮೋದಿ ರವರ ಅಲೆಯ ಜೊತೆ ಯೋಗಿ ಆದಿತ್ಯನಾಥ್ ರವರ ಭರ್ಜರಿ ವರ್ಚಸ್ಸು ಸೇರಿಕೊಂಡು ಬಿಜೆಪಿ ಪಕ್ಷಕ್ಕೆ ಉತ್ತರ ಪ್ರದೇಶದಲ್ಲಿ ಭರ್ಜರಿ ಗೆಲುವು ಸಿಗುವುದು ಖಚಿತವಾಗಿದೆ. ಕಳೆದ ಬಾರಿ 80 ಲೋಕಸಭಾ ಕ್ಷೇತ್ರಗಳಲ್ಲಿ 73 ಲೋಕಸಭಾ ಕ್ಷೇತ್ರಗಳನ್ನು ಜಯಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಪಕ್ಷಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.

ಅಷ್ಟಕ್ಕೂ ವಿಷಯದ ಮೂಲವೇನು ಗೊತ್ತಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಂದು ಚುನಾವಣೆಗೂ ಮುನ್ನ ಬಿಜೆಪಿ ಪಕ್ಷವು ತನ್ನ ಆಂತರಿಕ ಸಮೀಕ್ಷೆಯನ್ನು ನಡೆಸುತ್ತದೆ ಅದರಂತೆಯೇ ಈ ಬಾರಿಯೂ ಸಹ ಮುಂದಿನ ಲೋಕಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಜನರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳುತ್ತಾ ಆಂತರಿಕ ಸಮೀಕ್ಷೆ ನಡೆಸಿದಾಗ ಶಾಕಿಂಗ್ ವರದಿಯೊಂದು ಹೊರಬಿದ್ದಿದೆ.

ಈ ವರದಿಯ ಪ್ರಕಾರ ಬಿಎಸ್ಪಿ ಹಾಗೂ ಎಸ್ಪಿ ಮೈತ್ರಿಯ ಹೊರತಾಗಿಯೂ ಬಿಜೆಪಿ ಪಕ್ಷವು ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ 74 ಸ್ಥಾನಗಳನ್ನು ಗೆಲ್ಲಲಿದೆ ಎಂದು ಕೇಂದ್ರ ಸಚಿವರಾಗಿರುವ ಜೆಪಿ ನಡ್ಡಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಒಂದು ಹೆಚ್ಚು ಸ್ಥಾನ ಗಳಿಸಲಿದೆ ಎಂದು ಇದೇ ವೇಳೆಯಲ್ಲಿ ಸಚಿವರು ಬಹಿರಂಗ ಪಡಿಸಿದ್ದಾರೆ. ಈ ಮೂಲಕ ಮೈತ್ರಿ ಪಕ್ಷಗಳಿಗೆ ಬಿಗ್ ಶಾಕ್ ಎದುರಾಗಿದ್ದು ಮುಂದೇನು ಎಂಬ ಚಿಂತೆ ಈಗಾಗಲೇ ಕಾಣತೊಡಗಿದೆ. ಅಷ್ಟೇ ಅಲ್ಲದೆ ಇಡೀ ಉತ್ತರ ಪ್ರದೇಶದ ಶೇಕಡ ಐವತ್ತಕ್ಕೂ ಹೆಚ್ಚು ಮತಗಳು ಬಿಜೆಪಿ ಪಕ್ಷಕ್ಕೆ ಬೀಳಲಿದೆ ಎಂದು ತಿಳಿಸಿದ್ದಾರೆ.