ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಬಂಧನ ವಾರಂಟ್

ಗೋದಾವರಿ ನದಿಗೆ ಅಡ್ಡಲಾಗಿ ಬಬ್ಲಿ ಯೋಜನೆ ವಿರುದ್ಧ 2010 ರಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ನಡೆಸಿದ ಆಂದೋಲನದ ಕುರಿತು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ರಾಜ್ಯ ನೀರಾವರಿ ಸಚಿವ ಮತ್ತು 14 ಮಂದಿ ವಿರುದ್ಧ ಸ್ಥಳೀಯ ಮಹಾರಾಷ್ಟ್ರ ನ್ಯಾಯಾಲಯ ಬಂಧನ ವಾರಂಟ್ ಜಾರಿ ಮಾಡಿದೆ.

ನಾಂದೇಡ್ ಜಿಲ್ಲೆಯ ಧರ್ಮಾಬಾದ್ನ ನ್ಯಾಯಾಂಗ ಪ್ರಥಮ ದರ್ಜೆಯ ಮ್ಯಾಜಿಸ್ಟ್ರೇಟ್ ಎನ್.ಆರ್. ಗಜ್ಬಿಯಾ ಅವರು ಎಲ್ಲಾ ಆರೋಪಿಗಳನ್ನು ಬಂಧಿಸಲು ಮತ್ತು ಅವರನ್ನು ಸೆಪ್ಟೆಂಬರ್ 21 ರೊಳಗೆ ನ್ಯಾಯಾಲಯದಲ್ಲಿ ಹಾಜರಿರುವಂತೆ ನಿರ್ದೇಶನ ನೀಡಿದ್ದಾರೆ.

ಇದರ ನಡುವೆ, ನ್ಯಾಯಾಲಯದ ಬಂಧನ ವಾರಂಟ್ಗೆ ಪ್ರತಿಕ್ರಿಯಿಸಿದ ಟಿಡಿಪಿ ವಕ್ತಾರ ಲಾನ್ಲಾ ದಿನಕರ ಅವರು, ಬಿಜೆಪಿ ಇಂದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಪಕ್ಷವನ್ನು ದುರ್ಬಳಕೆ ಮಾಡುವ ಪಿತೂರಿ ಎಂದು ಹೇಳಿದ್ದಾರೆ. “ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು  ನಾಯ್ಡು ವಿರುದ್ಧ ಬಂಧನ ವಾರಂಟ್ ನೀಡಲಾಗಿದೆ.  ಇದು  ದುರದೃಷ್ಟಕರವಾಗಿದೆ.ಇದರಲ್ಲಿ  ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ  ಅಮಿತ್ ಶಾ ಅವರ ಕೆಲವು ಪಿತೂರಿಗಳಿವೆ ಎಂದು ಕಂಡುಬರುತ್ತದೆ.” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

2010 ರಲ್ಲಿ, ನಾಯ್ಡು ಯುನೈಟೆಡ್ ಆಂಧ್ರ ಪ್ರದೇಶದ ವಿರೋಧ ಪಕ್ಷದಲ್ಲಿದ್ದರು. ಅವರು ಮತ್ತು ಇತರರನ್ನು ಮಹಾರಾಷ್ಟ್ರದ ಬಾಬ್ಲಿ ಯೋಜನೆಯ ಸಮೀಪದಲ್ಲಿ ನಡೆಸಿದ ಆಂದೋಲನಕ್ಕೆ ಸಂಬಂಧಿಸಿದಂತೆ ಪುಣೆಯಲ್ಲಿ ಬಂಧಿಸಲಾಯಿತು. ನಾಯ್ಡು ಅವರ ಟಿಡಿಪಿಯು ಈ ಯೋಜನೆಯಿಂದ ಜನರಿಗೆ ತೊಂದರೆ ಆಗುತ್ತದೆ ಎಂದು ವಿರೋಧಿ ಪ್ರತಿಭಟನೆ ನಡೆಸಿದ್ದರು. ಜಾಮೀನು ಗೆ ಕೋರಿಲ್ಲವಾದರೂ ಕೊನೆಗೆ ಎಲ್ಲರನ್ನು ಬಿಡುಗಡೆ ಮಾಡಲಾಗಿತ್ತು.

ಏನೇ ಆಗಲಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು ಎನ್ನುವುದು ನಮ್ಮೆಲ್ಲರ ಆಶಯ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಮೋದಿ ಹಾಗು ಬಿಜೆಪಿ ಮೇಲೆ ಹಾಕಿದ ಈ ಮಹಾಘಾಟಿಬಂದನ್ ಬಿಜೆಪಿ ನ್ಯಾಯಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದ್ದಾರೆ.

Comments (0)
Add Comment