ಬಹುಮತ ಬಿಜೆಪಿಗೆ ಅಧಿಕಾರ ಕಾಂಗ್ರೆಸ್ಸಿಗೆ- ಈ ವಿಷಯದಲ್ಲಿ ಮೀಸಲಾತಿ ಬೇಕೇ?

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ನಿರ್ಧಾರಕ್ಕೆ ಒತ್ತು ನೀಡಬೇಕು ಎಂದು ಚುನಾವಣೆಯ ಫಲಿತಾಂಶದ ಆಧಾರದ ಮೇಲೆ ಅಧಿಕಾರದ ಗದ್ದುಗೆ ಏರಲು ಅವಕಾಶ ನೀಡುತ್ತಾರೆ. ಆದರೆ ಇಲ್ಲಿ ಒಂದು ವಿಚಿತ್ರ ನಿರ್ಧಾರದಿಂದ  ಬಿಜೆಪಿ ಪಕ್ಷವೂ ಸ್ಪಷ್ಟ ಬಹುಮತ ಪಡೆದಿದ್ದರು ಅಧಿಕಾರದ ಗದ್ದುಗೆ ಇರುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.

ಭಾರತದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಮೀಸಲಾತಿಯು ಕಡ್ಡಾಯವಾಗಿರುತ್ತದೆ, ಆದರೆ ಮತ ನೀಡಲು  ಯಾವುದೇ ಮೀಸಲಾತಿ ಗಳು ಇರುವುದಿಲ್ಲ, ಆಶ್ಚರ್ಯವೆಂಬಂತೆ ಮತ ನೀಡಿದ ಮೇಲೆ ಅಧಿಕಾರದ ಗದ್ದುಗೆ ಏರಲು ಮಾತ್ರ ಮೀಸಲಾತಿಗಳು ಅಡ್ಡ ಬರುತ್ತದೆ

ಇಷ್ಟಕ್ಕೂ ಈಗ ಆ ವಿಷಯದ ಮೂಲವೇನು?

ಕುಂದಾಪುರ- ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವೂ ಸ್ಪಷ್ಟ ಬಹುಮತ ಪಡೆದುಕೊಂಡು  ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿತ್ತು. ಒಟ್ಟು ಪುರಸಭೆಯ 23 ಸ್ಥಾನಗಳಲ್ಲಿ 14 ಸ್ಥಾನಗಳನ್ನು  ಬಿಜೆಪಿ ಪಕ್ಷವು ಗೆದ್ದು ಗೆಲುವಿನ ನಗೆ ಬೀರಿತ್ತು.

ಈ ಸಂದರ್ಭ ಪುರಸಭೆಯ ಅಧ್ಯಕ್ಷ ಸ್ಥಾನದ ಮೀಸಲಾತಿ ಸಾಮಾನ್ಯ ಮಹಿಳೆಯ ಪಾಲಾಗಿತ್ತು. ಬಿಜೆಪಿ ಬಹುಮತ ಪಡೆದುಕೊಂಡ ಬೆನ್ನಿಗೇ ಕಸರತ್ತು ನಡೆಸಿದ ಸ್ಥಳೀಯ ಕಾಂಗ್ರೆಸ್ ನಾಯಕರು ಮೀಸಲಾತಿ ಬದಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿಂದೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾತಿ ದೊರಕಿತ್ತು. ಹಾಗಾಗಿ ಬಹುಮತ ಪಡೆದಿದ್ದ ಬಿಜೆಪಿಯಲ್ಲಿ ಮೀಸಲಾತಿ ಅರ್ಹತೆಯ ಐದು ಜನ ಸದಸ್ಯೆಯರಿದ್ದು, ಅವರೊಳಗೆ ಅಧ್ಯಕ್ಷ ಗಾದಿಗೆ ಪೈಪೋಟಿ ನಡೆದಿತ್ತು. ಇದ್ದಕ್ಕಿದ್ದಂತೆ ಕುಂದಾಪುರ ಪುರಸಭೆಯ ಅಧ್ಯಕ್ಷ ಸ್ಥಾನ ಪ್ರವರ್ಗ 3 ಬಿ ಮಹಿಳೆಗೆ ಲಭಿಸಿದ್ದು, ಇಡೀ ಕುಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿ ಒಂದೇ ಸದಸ್ಯೆ ಇದ್ದು, ಅದು ಕಾಂಗ್ರೆಸ್‌ನ ಪ್ರಭಾವತಿ ಶೆಡ್ತಿ ಎನ್ನುವವರ ಪಾಲಾಗಿದೆ. ಹೀಗಾಗಿ ಬಿಜೆಪಿ ಮಾಡಿದ ರಣತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ ಹೂಡುವ ಮೂಲಕ ಅಧಿಕಾರದ ಗದ್ದುಗೇರುವಲ್ಲಿ ಯಶಸ್ವಿಯಾಗಿದೆ.

ಇದನ್ನು ನೋಡಿದಾಗ ನಮಗೆ ಮತದಾರರಿಗೆ ಯಾವುದೇ ಮೀಸಲಾತಿ ಇರುವುದಿಲ್ಲ, ಎಲ್ಲರೂ ಮತ ಚಲಾಯಿಸುತ್ತಾರೆ. ಆದರೆ ಮತದಾರನೇ ಗೆಲ್ಲಿಸಿ ಇಂಥವರು ನಮ್ಮ ನಾಯಕರು ಆಗಬೇಕು ಎಂದು ಆಸೆಪಟ್ಟಿದ್ದರೆ ಅದಕ್ಕೆ ಮೀಸಲಾತಿ ಅಡ್ಡ ಬರುತ್ತಿದೆ. ಮೀಸಲಾತಿ ಇರಬೇಕು ಆದರೆ ಕೆಲವು ವಿಷಯಗಳಿಂದ ಅದನ್ನು ಹೊರಗಿಡಬೇಕು ಎಂಬುದು ನಮ್ಮ ಅಭಿಪ್ರಾಯ.

Comments (0)
Add Comment