ತೈಲ ಬೆಲೆ ಇಳಿಕೆ ಮಾಡಿದ ಮತ್ತೊಂದು ಬಿಜೆಪಿ ನೇತೃತ್ವದ ರಾಜ್ಯ- ಬೇರೆ ರಾಜ್ಯಗಳು ಏನು ಮಾಡುತ್ತಿದ್ದೀರಾ?

ಭಾರತದಲ್ಲಿ ನಡೆಯುತ್ತಿರುವ ಭಾರತ್ ಬಂದ್ ಒಂದು ಅರ್ಥಪೂರ್ಣ ವಿಲ್ಲದ ಬಂದ್ ಎಂದು ಈಗಾಗಲೇ ಸಾಬೀತಾಗಿದೆ. ಕೆಲಸಕ್ಕೆ ಬಾರದ ವಿಷಯವನ್ನು ಹಿಡಿದುಕೊಂಡು ಕೆಲಸಕ್ಕೆ ಬಾರದವರು ಮಾಡುತ್ತಿರುವ ಬಂದು ಎಂದೇ ಪ್ರಸಿದ್ಧವಾಗಿದೆ.ಈ ಬಂದ್ ಗೆ ಕಾಂಗ್ರೆಸ್ ನಲ್ಲಿಯೇ ಹಲವಾರು ವಿರೋಧಗಳು ಇರುವುದು  ಗಮನಿಸಬೇಕಾದ ವಿಷಯ.

ಇವರು ನಡೆಸುತ್ತಿರುವ ಬಂದು ತೈಲಬೆಲೆ ಕುರಿತಾಗಿಯೇ ಅಥವಾ ಮೋದಿರವರ ಜನಪ್ರಿಯತೆಯನ್ನು ಕುಗ್ಗಿಸಲು ಮಾಡುತ್ತಿದ್ದಾರೆಯೇ  ಎಂಬ  ಶಂಕೆಗಳು ವ್ಯಕ್ತವಾಗುತ್ತಿವೆ. ಇಂತಹ ಸಮಯದಲ್ಲಿ ಕೆಲವು ಗಂಟೆಗಳ ಹಿಂದಷ್ಟೇ ಮಹಾರಾಷ್ಟ್ರ ಸರ್ಕಾರ ಜನಸಾಮಾನ್ಯರ ಮೇಲೆ ಹೊರೆಯನ್ನು ತಗ್ಗಿಸಲು ತೈಲ ಬೆಲೆಯನ್ನು ಇಳಿಕೆ ಮಾಡಿತ್ತು. ಈಗ ಮತ್ತೊಂದು ಬಿಜೆಪಿ ನೇತೃತ್ವದ ಸರ್ಕಾರ ತೈಲ ಬೆಲೆ ಇಳಿಕೆ ಮಾಡಿ ಜನಸಾಮಾನ್ಯರಿಗೆ ಸಿಹಿ ಸುದ್ದಿಯನ್ನು ನೀಡಿದೆ.

ತೈಲದ ಮೇಲೆ ತೆರಿಗೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು 2 ಏರುತ್ತವೆ, ಈಗಾಗಲೇ ಕೇಂದ್ರ ಸರ್ಕಾರವು   ನನ್ನ ತೆರಿಗೆಯನ್ನು ಆದಷ್ಟು ಕಡಿಮೆ  ಜನಸಾಮಾನ್ಯರ ಮೇಲೆ ಕೊಂಚ ಹೊರೆಯನ್ನು ತಗ್ಗಿಸಿದೆ. ಇನ್ನುಳಿದ ತೆರಿಗೆಯನ್ನು ರಾಜ್ಯ ಸರ್ಕಾರಗಳು ಕಡಿಮೆ ಮಾಡಬೇಕಿದೆ.

ಇದನ್ನು ಅರಿತಿರುವ ರಾಜಸ್ಥಾನ ಸರ್ಕಾರವು ತೈಲದ ಮೇಲಿನ ತೆರಿಗೆಯಲ್ಲಿ ಶೇಕಡ ನಾಲ್ಕರಷ್ಟು ನ್ನು ಕಡಿಮೆ ಮಾಡಿ ಜನರಿಗೆ ಇಂದಿನ ದರದ ಪ್ರಕಾರ 2.5 ರುಪಾಯಿಗಳನ್ನು ಪ್ರತಿಲೀಟರ್ ಗೆ ಕಡಿಮೆ ಮಾಡಲು ನಿರ್ಧರಿಸಿದೆ. ಪರ ರಾಜ್ಯ ಗಳು ಇಂತಹ ನಿರ್ದಾರಗಳನ್ನು ಕೈಗೊಳ್ಳುವಾಗ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರು ಯಾಕೆ ಇಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆ ಮೂಡುತ್ತಿದೆ.?

Comments (0)
Add Comment