ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಗೌತಮ್ !! ಯಾವ ಪಕ್ಷದಿಂದ ಗೊತ್ತಾ?

ಸದಾ ಸಮಾಜಸೇವಾ ಕೆಲಸಗಳಿಂದ ಸುದ್ದಿಯಲ್ಲಿರುವ ಗೌತಮ್ ಗಂಭೀರ್ ಅವರು ಹಲವು ಬಾರಿ ಸೇನೆಯ ಪರ ಧ್ವನಿ ಎತ್ತಿ ಎಲ್ಲೆಡೆ ಪ್ರಶಂಸೆ ಪಡೆದುಕೊಂಡಿದ್ದಾರೆ.  ಭಾರತ ಕ್ರಿಕೆಟ್ ತಂಡದ ಪ್ರಮುಖ ಓಪನರ್ ಎನಿಸಿಕೊಂಡಿದ್ದ ಗೌತಮ್ ಗಂಭೀರ್ ರವರ ಸಮಾಜ ಸೇವಾ ಕೆಲಸಗಳ ಬಗ್ಗೆ ನೀವು ತಿಳಿದುಕೊಂಡಿರುತ್ತೀರಿ.

ತಮ್ಮ ಹುಟ್ಟೂರಾದ ದೆಹಲಿಯಲ್ಲಿ ಮಧ್ಯಾಹ್ನದ ವೇಳೆ ಉಚಿತವಾಗಿ ಬಡವರಿಗೆ ಬಿಸಿಯೂಟ ನೀಡುತ್ತಾ ಬಂದಿರುವ ಗೌತಮ್ ಗಂಭೀರ್ ಅವರು  ಹಲವಾರು  ಬಾರಿ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೆರವಾಗಿರುವ ಗಂಭೀರ್ ರವರು, ಸುಕ್ಮಾ ನಕ್ಸಲ್ ದಾಳಿಗೆ ತುತ್ತಾಗಿ ನರಳಿದ 25 ಕುಟುಂಬಗಳಿಗೆ ಸಹ ನೆರವಾಗಿದ್ದರು . ಇನ್ನು ಹುತಾತ್ಮ ಯೋಧರ ಮಕ್ಕಳ ಶಿಕ್ಷಣ, ನಿರ್ಗತಿಕರಿಗೆ ಆಹಾರ ಒದಗಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ.

ಈಗ ಗೌತಮ್ ಗಂಭೀರ್ ಅವರು ರಾಜಕೀಯಕ್ಕೆ ಕಾಲಿಡುವ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗುತ್ತಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ದಿಲ್ಲಿಯಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಯೂ ಜೋರಾಗಿ ಹಬ್ಬಿದೆ.

ಮೂಲಗಳ ಪ್ರಕಾರ ಮುಂಬರುವ ದೆಹಲಿ ಚುನಾವಣೆಗೆ ಗೌತಮ್ ಗಂಭೀರ್ ಕಣಕ್ಕಿಳಿಸಲು ಬಿಜೆಪಿ ಸಿದ್ದತೆ ನಡೆಸಿದೆ. ಇದಕ್ಕಾಗಿ ಗಂಭೀರ್ ಮನವೊಲಿಸಲು ದೆಹಲಿ ಬಿಜೆಪಿ ಘಟಕ್ಕೆ ಜವಾಬ್ದಾರಿ ನೀಡಲಾಗಿದೆ. ಈ ಮೂಲಕ ದೆಹಲಿ ಯುವ ಜನತೆಯನ್ನ ಬಿಜೆಪಿ ಹಿಡಿದಿಟ್ಟುಕೊಳ್ಳಲು ಸಜ್ಜಾಗಿದೆ.

ಬಿಜೆಪಿ ಪಕ್ಷದ ಈ ನಡೆಯು ಆಮ್ ಆದ್ಮಿ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ಯಾಕೆಂದರೆ ದಿಲ್ಲಿಯಲ್ಲಿ ಹಲವಾರು ಯುವಕರು ಗೌತಮ್ ಗಂಭೀರ್ ಅವರನ್ನು ಫಾಲೋ ಮಾಡುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಒಂದು ವೇಳೆ ಗೌತಮ್ ಗಂಭೀರ್ ರವರು ಚುನಾವಣೆಗೆ ಸ್ಪರ್ಧಿಸಿದಲ್ಲಿ ಗೆಲುವು ಖಚಿತ ಎಂದು ಹೇಳಲಾಗುತ್ತಿದೆ.

Comments (0)
Add Comment