ಐ ಟಿ ಶಾಕ್ ಡಿಕೆಶಿ ಫಿನಿಷ್ ! ಕೇಂದ್ರ ಸರ್ಕಾರಕ್ಕೆ ಮತ್ತೊಂದು ಜಯ

ಕೆಲವು ತಿಂಗಳುಗಳ ಹಿಂದೆ ಸಚಿವರಾದ ಡಿ ಕೆ ಶಿವಕುಮಾರ್ ಅವರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು. ಯಾವುದೇ ದಾಖಲೆ ಇಲ್ಲದ ಹಣವನ್ನು ವಶಪಡಿಸಿಕೊಂಡಿದ್ದರೂ ಡಿ ಕೆ ಶಿವಕುಮಾರ್ ಅವರ ಮೇಲೆ ಯಾವುದೇ ತನಿಖೆ ನಡೆಸುತ್ತಿರಲಿಲ್ಲ.

ಇದನ್ನು ಕಂಡ ಜನ ಸಾಮಾನ್ಯರು ನ್ಯಾಯಾಲಯ ಮತ್ತು ನ್ಯಾಯ ಇರುವುದು ಕೇವಲ ಜನಸಾಮಾನ್ಯರಿಗೆ ಕುರಿತು ಸಚಿವರಿಗೆ ಅಲ್ಲ ಎಂದು ಕೇಂದ್ರ ಸರ್ಕಾರದ   ವಿರುದ್ಧ ಟೀಕೆಗಳ ಬಾಣಗಳನ್ನು ಬಿಟ್ಟಿದ್ದರು. ಅದಕ್ಕೆ ತಕ್ಕಂತೆ ಮೀಡಿಯಾಗಳು ಎರಡು ದಿನ ತೋರಿಸಿ ಮುಂದೆ ಏನಾಗಬಹುದು ಏನಾಗುತ್ತದೆ ಎಂಬುದನ್ನು ತೋರಿಸದೆ ಸುಮ್ಮನಾಗಿದ್ದರು.

ಅಷ್ಟಕ್ಕೂ ಪ್ರಕರಣವೇನು?

ಆದಾಯ ತೆರಿಗೆ ಅಧಿಕಾರಿಗಳು ದಿಲ್ಲಿಯ 4 ಫ್ಲಾಟ್‌ಗಳ ಮೇಲೆ ದಾಳಿ ನಡೆಸಿದ ವೇಳೆಯಲ್ಲಿ ಬಾರಿ ಅಕ್ರಮದ ಹಣ ಪತ್ತೆಯಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಡಿಕೆ ಶಿವಕುಮಾರ್ ಮತ್ತು ಅವರ ಐದು ಆಪ್ತರ ಮೇಲೆ ಪ್ರಕರಣ ದಾಖಲಾಗಿತ್ತು.  ಸಚಿವ ಡಿ ಕೆ ಶಿವಕುಮಾರ್ ಅವರು ಮೊದಲನೇ ಆರೋಪಿಯಾಗಿದ್ದರು.

ಅಷ್ಟಕ್ಕೂ ಇಷ್ಟು ದಿನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸದಿರಲು ಕಾರಣವೇನು?

ಕೇಂದ್ರ ಸರ್ಕಾರವು ತನಿಖೆಗೆ ಆದೇಶ ನೀಡಿದ್ದರೂ ಕರ್ನಾಟಕ ಹೈಕೋರ್ಟ್ ನಲ್ಲಿ ಡಿ ಕೆ ಶಿವಕುಮಾರ್ ಅವರ ಪರವಾಗಿ ವಾದ ಸಲ್ಲಿಸಿದ್ದ ವಕೀಲರು  ಆದಾಯ ತೆರಿಗೆ ಇಲಾಖೆಯ ತನಿಖೆಯೂ ಮುಂದುವರಿಯಬಾರದು ಎಂದು ಅರ್ಜಿ ಹಾಕಿ ಹೈಕೋರ್ಟ್ನಲ್ಲಿ ಗೆಲುವು ಸಾಧಿಸಿ ಸಚಿವರಿಗೆ ಬಿಗ್ ರಿಲೀಫ್ ನೀಡಿದ್ದರು.

ಆದರೆ ಕೇಂದ್ರ ಸರ್ಕಾರದ ಪರ ಮೊನ್ನೆಯಷ್ಟೇ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವದಗಿ ಅವರು, ‘ಅರ್ಜಿದಾರರು ವಾಸ್ತವಾಂಶ  ಮುಚ್ಚಿಟ್ಟು ತಡೆ ಪಡೆದಿದ್ದಾರೆ. ಆದ್ದರಿಂದ, ಪ್ರಕರಣದ ತನಿಖೆಗೆ ಇರುವ ತಡೆಯಾಜ್ಞೆ ತೆರವು ಮಾಡಬೇಕು’ ಎಂದು ವಾದ ಮಂಡನೆ ಮಾಡಿದರು.

ಇದಕ್ಕೆ ಅಸ್ತು ಎಂದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ಪೀಠ ತನಿಖೆಗೆ ಇದ್ದ ತಡೆಯಾಜ್ಞೆಯನ್ನು  ತೆರವು ಮಾಡಿದೆ. ತಡೆ ಆದೇಶ ಸಚಿನ್ ನಾರಾಯಣ್‌ಗೆ ಮಾತ್ರ ಅನ್ವಯವಾಗುತ್ತದೆ. ಉಳಿದ ಆರೋಪಿಗಳಾದ ಡಿ.ಕೆ.ಶಿವಕುಮಾರ್, ಶರ್ಮಾ ಟ್ರಾನ್ಸ್‌ಪೋರ್ಟ್‌ನ ಸುನಿಲ್ ಕುಮಾರ್ ಶರ್ಮಾ, ದೆಹಲಿ ಕರ್ನಾಟಕ ಭವನದ ನೌಕರ ಆಂಜನೇಯ, ಸುಖದೇವ್ ವಿಹಾರ ನಿವಾಸಿ ರಾಜೇಂದ್ರ ಅವರಿಗೆ ಅನ್ವಯವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಇದರಿಂದ ಒಂದು ವೇಳೆ ಪ್ರಕರಣದ ಸಾಬೀತಾದಲ್ಲಿ ಜಲಸಂಪನ್ಮೂಲ ಸಚಿವರಾದ ಡಿಕೆ ಶಿವಕುಮಾರ್ ಅವರಿಗೆ ಮತ್ತಷ್ಟು ಸಂಕಷ್ಟಗಳು ಎದುರಾಗಲಿದೆ.  ತಮ್ಮ ಮೇಲೆ ಐಟಿ ರೈಡ್ ಆದಾಗ ಇದು ಕೇಂದ್ರ ಸರ್ಕಾರದ  ಕುತಂತ್ರ ನೀತಿ ಎಂದು  ಡಿ ಕೆ ಸಹೋದರರು ಆರೋಪಿಸಿದ್ದನ್ನು ನಾವು ಇಂದು ಸ್ಮರಿಸಬಹುದು.

ಪ್ರಕರಣ ಮರುಜೀವ ಪಡೆದುಕೊಂಡಿರುವುದು ಡಿಕೆಶಿ ಕುಮಾರ್ ಅವರಿಗೆ ತಲೆ ನೋವಾದರೆ ಜನಸಾಮಾನ್ಯರಿಗೆ ನ್ಯಾಯಾಲಯದ ಮೇಲೆ ಸ್ವಲ್ಪ ನಂಬಿಕೆ ಬಂದಿದೆ. ತಪ್ಪು ಮಾಡಿರಲಿ ಮಾಡದೇ ಇರಲಿ ತನಿಖೆ ಮಾಡಲು ತಡೆಯಾಗಿ ನೀಡುವುದು ವಿಷಾದಕರ ಸಂಗತಿ.

Comments (0)
Add Comment