ಮಮತಾ ರವರಿಗೆ ಪಶ್ಚಿಮ ಬಂಗಾಳದ ಜನರೇ ಉತ್ತರಿಸಿದ ರೀತಿ ನೋಡಿ

ಕೋಲ್ಕತಾ ನಗರದಲ್ಲಿ ಬಿಜೆಪಿ ಪಕ್ಷದ ರ‍್ಯಾಲಿಯನ್ನು ತಡೆಯಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿವೆ. ಹೌದು ಬಿಜೆಪಿ ಪಕ್ಷದ ಶಕ್ತಿ ಪ್ರದರ್ಶನವನ್ನು ತಡೆಯಲು ಮಮತಾ ರವರು ಮಾಡಿದ ಯೋಜನೆಗಳೆಲ್ಲವೂ  ವಿಫಲವಾಗಿವೆ.

ಮೊದಲಿಗೆ ಅಮಿತ್ ಶಾ ಬರುವುದಕ್ಕೆ ಪೊಲೀಸರ ಅನುಮತಿ ನಿರಾಕರಿಸುವಂತೆ ಮಾಡಿದ ಮಮತಾ ರವರು ಅದಕ್ಕೆ ಅಮಿತ್ ಶಾ ರವರು ಜಗ್ಗುವುದಿಲ್ಲ ಎಂಬುದು ತಿಳಿದ ತಕ್ಷಣ “ಬಂಗಾಳ ವಿರೋಧಿ ಬಿಜೆಪಿ ಹಿಂದಕ್ಕೆ ಹೋಗು” ಎನ್ನುವ ವಾಕ್ಯಗಳನ್ನು  ಬ್ಯಾನರ್ ಗಳನ್ನಾಗಿ ಮಾಡಿ ಅಮಿತ್ ಶಾ ರವರು ಓಡಾಡುವ ದಾರಿಗಳಲ್ಲಿ ನಿಲ್ಲಿಸಿದ್ದರು.ಆದರೆ ಈಗ ಈ ವಿಷಯಕ್ಕೆ ಸಂಬಂಧಪಟ್ಟಂತೆ ಸ್ವತಹ ಪಶ್ಚಿಮ ಬಂಗಾಳದ ಜನರೇ ಉತ್ತರಿಸಿದ್ದಾರೆ.

ಅಸ್ಸಾಂ NRC ವಿದ್ಯಮಾನದ ನಂತರ ಮೊದಲ ಬಾರಿಗೆ ಪಶ್ಚಿಮ ಬಂಗಾಳಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ರಾಜ್ಯದ ಜನತೆ ಭಾರೀ ಸ್ವಾಗತವನ್ನು ಕೋರಿದ್ದಾರೆ. ನಗರದ ಮಿಯಾ ರೋಡ್ ಮೈದಾನದಲ್ಲಿ ನಡೆದ ರ‍್ಯಾಲಿಗೆ ಜನಸಾಗರವೇ ಹರಿದು ಬಂದಿದ್ದು ಬೃಹತ್ ಶಕ್ತಿ ಪ್ರದರ್ಶನ ನಡೆಸಿ ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷವು ರಣಕಹಳೆಯನ್ನು ಊದಿದೆ.

ಸಮಾವೇಶದಲ್ಲಿ ಮಮತಾ ರವರ ವಿರುದ್ಧ ಹರಿಹಾಯ್ದ ಅಮಿತ್ ಶಾ ರವರು  ಹದಿಮೂರು ವರ್ಷಗಳ ಹಿಂದೆ ಮಮತಾರವರೇ ಅಕ್ರಮ ವಲಸಿಗರನ್ನು ಭಾರತ ಬಿಟ್ಟು ತೊಲಗು ವಂತೆ ಮಾಡಬೇಕು ಎಂದು ಒತ್ತಾಯಿಸಿದ್ದರು, ಈಗ ಕೇವಲ ಮತಬೇಟೆಗಾಗಿ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕಳೆದ ಬಾರಿ ಎರಡು ಸೀಟು ಗೆದ್ದಿದ್ದ ಬಿಜೆಪಿ ಪಕ್ಷವು ಈ ಬಾರಿ ಶೇಕಡಾ ಐವತ್ತರಷ್ಟು ಸೀಟುಗಳನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ  ನಡೆದ ಸಮಾರಂಭಕ್ಕೆ ಸಮಾರಂಭಕ್ಕೆ ಗೆಲ್ಲುವ ಸೀಟುಗಳ ಸಂಖ್ಯೆ ಹೆಚ್ಚಲಿದೆ ಎಂಬ ಮುನ್ಸೂಚನೆ ನೀಡಿದೆ.

2019electionamith shahelection 2019
Comments (0)
Add Comment