ಮೋದಿಗೆ ಜೈ- ಬಲ ತೋರಿಸಲು ಸಿದ್ದವಾದ ಭಜರಂಗದಳ ಮತ್ತು ಹಿಂದು ಮಹಾಪರಿಷತ್

ಒಂದುಕಡೆ ಲೋಕಸಭಾ ಚುನಾವಣೆಗೆ ಪ್ರತಿಯೊಂದು ಪಕ್ಷಗಳು ತಮ್ಮದೇ ಆದ ಕಸರತ್ತುಗಳನ್ನು ನಡೆಸುತ್ತಿದೆ.  ತೃತಿಯ ರಂಗ ರಚನೆ ಮಾಡಿ ಮೋದಿ ಅವರನ್ನು ಸೋಲಿಸಲು ಪಣತೊಟ್ಟಿರುವ ವಿರೋಧ ಪಕ್ಷಗಳಿಗೆ ಸೆಡ್ಡು ಹೊಡೆಯಲು ನಮೋ ಭಕ್ತರು ಮತ್ತು ಹಲವು ಸಂಘಟನೆಗಳು ಬಿಜೆಪಿ ಪಕ್ಷದ ಪರವಾಗಿ ಕೈಜೋಡಿಸಿವೆ. ಈಗ ಅದೇ ಸಾಲಿನಲ್ಲಿ ತನ್ನ ಬಲ ಏನು ಎಂಬುದನ್ನು ತೋರಿಸಲು ಭಜರಂಗದಳ ಮತ್ತು ಹಿಂದೂ ಮಹಾಪರಿಷತ್ ಮೋದಿ ಅವರಿಗೆ ಬೆಂಬಲ ಘೋಷಿಸಿವೆ.

ಮೋದಿ ರವರನ್ನು ಮತ್ತು ಮೇ ಪ್ರಧಾನಿಯಾಗಿಸಲು ಪಣತೊಟ್ಟಿರುವ ಬಜರಂಗದಳ ಮತ್ತು ಹಿಂದೂ ಮಹಾ ಪರಿಷತ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತನ್ನ ಕಾರ್ಯಕ್ರಮಗಳನ್ನು ಪ್ರಾರಂಭಿಸಿವೆ. ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಭಜನೆ ಆರಂಭಿಸಿ ಬಳಿಕ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಶ್ರೀ ರಾಮ ಮಂದಿರ ದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿದಾನಕ್ಕೆ ಕಾಲ್ನಡಿಗೆ ಯಲ್ಲಿ ತೆರಳಿ‌ ಪ್ರಾರ್ಥನೆ ಸಲ್ಲಿಸಿದರು.

ಬಂಟ್ವಾಳ ತಾಲೂಕಿನ ಕಲ್ಲಡ್ಕ ವಲಯದ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಹಾಗೂ ಅಯೋಧ್ಯೆಯಲ್ಲಿ ಶ್ರೀ ರಾಮ‌ಮಂದಿರ ನಿರ್ಮಾಣ ಹಾಗೂ ಅಖಂಡ ಭಾರತ ಸಂಕಲ್ಪದೊಂದಿಗೆ ಮೋದಿ ರವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಈ ಸಂಘಟನೆಗಳು ನಿರ್ಧರಿಸಿದ್ದಾರೆ.

 

ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಎರಡು ಸಂಘಟನೆಗಳ ಬಲ ಮೋದಿ ರವರಿಗೆ ದೊರಕಿರುವುದು ಬಿಜೆಪಿ ಪಕ್ಷಕ್ಕೆ ಸಂತಸವನ್ನು ತಂದಿದ್ದರೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ವಿರೋಧ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

2019electionBajarangdalelection 2019modiNarendra modi
Comments (0)
Add Comment