ಬಿಜೆಪಿ ಪಕ್ಷದ ವಶವಾದ ಬೀದರ್ ಲೋಕಸಭಾ ಕ್ಷೇತ್ರಗಳು: ಚುನಾವಣೆಗೂ ಮುನ್ನವೇ ಫಲಿತಾಂಶ

2019ರ ಲೋಕಸಭಾ ಚುನಾವಣೆಯ ಬೀದರ್ ಕ್ಷೇತ್ರಗಳ ಫಲಿತಾಂಶ ಹೊರ ಬಿದ್ದಂತಿದೆ. ಇನ್ನು ಚುನಾವಣೆಯ ನಡೆದಿಲ್ಲ ಫಲಿತಾಂಶ ಹೇಗೆ ಎಂಬುದನ್ನು ಯೋಚನೆ ಮಾಡುತ್ತಿರುವಿರಾ? ಸಂಪೂರ್ಣ ಓದಿ ಈ ಲೇಖನ ಓದಿದ ನಂತರ  ಬೀದರ್ ಲೋಕಸಭಾ ಕ್ಷೇತ್ರಗಳು ಬಿಜೆಪಿ ಪಕ್ಷದ ವಶವಾಗಿದೆ ಎಂದು ನೀವು ಹೇಳುತ್ತೀರ.

ಪ್ರತಿಯೊಂದು ಪಕ್ಷಗಳು ಚುನಾವಣೆಗೆ ತಮ್ಮದೇ ಆದ ಕಸರತ್ತುಗಳನ್ನು ನಡೆಸುತ್ತಿವೆ, ಲೋಕಸಭಾ ಚುನಾವಣೆಗೆ ಇನ್ನು ಹಲವು ತಿಂಗಳುಗಳು ಬಾಕಿ ಇದ್ದರೂ ಪಕ್ಷಗಳು ಈಗಿನಿಂದಲೇ ಕಾರ್ಯತಂತ್ರ ಮತ್ತು  ಪ್ರಚಾರಗಳಲ್ಲಿ ತೊಡಗಿವೆ. ಇತ್ತ ಕರ್ನಾಟಕದಲ್ಲಿ ಕುಮಾರಸ್ವಾಮಿರವರ ಕೆಲವು ಹೇಳಿಕೆಗಳನ್ನು ಉತ್ತರ ಕರ್ನಾಟಕದ ಜನರು ಗಂಭೀರವಾಗಿ ಪರಿಗಣಿಸಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಇದು ತಲೆನೋವಾಗಿದೆ.

ಹಾಗಾಗಿ ಇನ್ನು ಹಲವು ತಿಂಗಳುಗಳು ಬಾಕಿ ಇದ್ದರೂ ಪಕ್ಷದ ಪ್ರಧಾನಿ ಅಭ್ಯರ್ಥಿಯಾದ ರಾಹುಲ್ ರವರು  ಇದೇ ತಿಂಗಳ 13 ರಂದು ರೈತರ ಬೃಹತ್ ಸಮಾವೇಶವನ್ನು ನಡೆಸಿ ಬಲ ಪ್ರದರ್ಶನವನ್ನು ಮಾಡಲು ನಿರ್ಧರಿಸಿದ್ದಾರೆ. ಡ್ಯಾಮೇಜ್ ಕಂಟ್ರೋಲ್ ಮಾಡಲು ನಿರ್ಧರಿಸಿರುವ ಕಾಂಗ್ರೆಸ್ ಪಕ್ಷವು ಉತ್ತರ ಕರ್ನಾಟಕದ ಭಾಗದಲ್ಲಿ ಅತಿ ಹೆಚ್ಚು ಸಮಾರಂಭಗಳನ್ನು ನಡೆಸಲು ನಿರ್ಧರಿಸಿದೆ.

ಕಾಂಗ್ರೆಸ್ ಪಕ್ಷ ಸಮಾವೇಶಗಳನ್ನು ನಡೆಸಿದರೆ ಹೇಗೆ ಬಿಜೆಪಿಯ ವಶವಾಗುತ್ತದೆ ಎಂದು ಯೋಚಿಸುತ್ತಿದ್ದೀರಾ?

ನಮೋ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಬೀದರ್ ಲೋಕಸಭಾ ಕ್ಷೇತ್ರಗಳು ಬಿಜೆಪಿ ಪಕ್ಷದ ವಶವಾಗಿವೆ ಎಂದು ಹೇಳುತ್ತಿರುವುದಕ್ಕೆ ಅರ್ಥವಿದೆ.  ಕಾರಣವೇನೆಂದರೆ ಅಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ರಾಹುಲ್ ರವರು ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರು ಎಂಬ ಮಾತಿದೆ.

ಅದಕ್ಕೆ ತಕ್ಕಂತೆ ರಾಹುಲ್ ಗಾಂಧಿ ರವರು ಪ್ರಚಾರ ಮಾಡಿದ ಕ್ಷೇತ್ರಗಳೆಲ್ಲ ವೂ ಬಿಜೆಪಿಯ ಕೈವಶವಾಗಿತ್ತು,  ಇದನ್ನೇ ಮುಂದಿಟ್ಟುಕೊಂಡು ರಾಹುಲ್ ಗಾಂಧಿ ರವರನ್ನು ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರು ಎಂದು  ಕರೆಯುತ್ತಾರೆ. ಆ ಕಾರಣದಿಂದಲೇ ನಮೋ ಭಕ್ತರು ಬೀದರ್ ಲೋಕಸಭಾ ಕ್ಷೇತ್ರಗಳು ಬಿಜೆಪಿ ಪಕ್ಷದ ವಶವಾಗಿವೆ ಎಂದು ಹೇಳುತ್ತಿದ್ದಾರೆ.

2019electionbjpCongresselection 2019Narendra modiRGSocial Media Troll
Comments (0)
Add Comment