ಬಿಗ್ ಬ್ರೇಕಿಂಗ್: ನವ ಅಯೋಧ್ಯ ನಿರ್ಮಾಣ ಮಾಡಲು ಸಿದ್ಧವಾದ ಯೋಗಿ

ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆ ಭಾರತದ ಧಾರ್ಮಿಕ ಕ್ಷೇತ್ರಗಳಲ್ಲಿ ಅತ್ಯಂತ ಪ್ರ ವಿತ್ರ ವಾದ ಸ್ಥಳಗಳಲ್ಲಿ ಒಂದಾಗಿದೆ. ಶ್ರೀರಾಮನ ಇಲ್ಲಿ ಆಡಳಿತ ನಡೆಸುತ್ತಿದ್ದ ಎಂಬ ಪ್ರತಿಕತೆ ಇದೆ. ಇಂತಹ ಇತಿಹಾಸ  ಹೊಂದಿರುವ ಅಯೋಧ್ಯೆಯನ್ನು ಎಲ್ಲ ಸರ್ಕಾರಗಳು ಕಡೆಗಣಿಸುತ್ತಾ ಬಂದಿದ್ದವು ಆದರೆ ಯೋಗಿ ಆದಿತ್ಯನಾಥ್ ರವರ ಸರ್ಕಾರ ಬಂದ ಮೇಲೆ ಹಿಂದೂಗಳಿಗೆ ಒಂದು ಭರವಸೆ ಮೂಡಿದೆ. ಅದೇ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಯೋಗಿ ಆದಿತ್ಯನಾಥ್. ಈಗ ಯೋಗಿ ಆದಿತ್ಯನಾಥ್ ರವರು ಮಾಡಲು ಹೊರಟಿರುವ ಯೋಜನೆ ಯೋಜನೆಯನ್ನು ಕೇಳಿದರೆ ನೀವು ಶಹಭಾಷ್ ಎನ್ನುತ್ತೀರಾ.

ಶ್ರೀರಾಮನ ಆಡಳಿತ ಸ್ಥಳವಾದ ಅಯೋಧ್ಯೆಯಲ್ಲಿ ನಯ ಅಯೋಧ್ಯೆ (ನವ ಅಯೋಧ್ಯೆ) ಎಂಬ ಯೋಜನೆಯ ಹೆಸರಿನಲ್ಲಿ ದುನಿಯಾ ಸರಯೂ ನದಿ ತೀರದಲ್ಲಿ  ವಿಶೇಷ ರೀತಿ ಸೌಲಭ್ಯಗಳನ್ನು ಹೊಂದಿರುವ ನಯ ಅಯೋಧ್ಯೆಯನ್ನು ಇಲ್ಲಿ ನಿರ್ಮಾಣಮಾಡಲು ಯೋಗಿ ಆದಿತ್ಯನಾಥ ರವರು ಮುಂದಾಗಿದ್ದಾರೆ. ಈ ಯೋಜನೆಯು ಅತ್ಯಂತ ವಿಶೇಷ ರೀತಿಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು  ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವೈಶಿಷ್ಟಗಳು ಸಾಕಷ್ಟು ಇವೆ. ಅವುಗಳನ್ನು ತಿಳಿದುಕೊಳ್ಳಲು ಕೆಳಗಡೆ ಓದಿ.

ಪ್ರಸಿದ್ಧ ಲಂಡನ್ ಥೇಮ್ಸ್ ನದಿಯ ಮಾದರಿಯಂತೆ ಈ ನಯ ಅಯೋಧ್ಯೆ ಇರಲಿದೆ.  ಈಗಾಗಲೇ ಜಗತ್ತಿನ ಪ್ರಸಿದ್ಧ ಸಲಹಾ ಸಂಸ್ಥೆ ಪ್ರೈಸ್ ವಾಟರ್ ಹೌಸ್ ಕೂಪರ್ಸ್ (ಪಿಡಬ್ಲ್ಯೂಸಿ) ನೀಲ ನಕ್ಷೆ ಸಿದ್ಧಪಡಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಯೋಜನೆ ಪ್ರಾರಂಭಗೊಳ್ಳಲಿದ್ದು  ಬರೋಬ್ಬರಿ 500 ಎಕರೆ ಜಾಗದಲ್ಲಿ ನೀಲಿ ನಕ್ಷೆಯನ್ನು ಸಿದ್ಧಪಡಿಸಲಾಗಿದೆ. 1200 ಕೋಟಿ ರು ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದ್ದು  ಪಂಚತಾರಾ ಹೊಟೇಲ್ಗಳು, ರೆಸಾರ್ಟ್ಗಳು, ಸುಸಜ್ಜಿತ ಒಳಚರಂಡಿ, ವಾಣಿಜ್ಯ ಮತ್ತು ವಾಸಕ್ಕಾಗಿ ಸಾಮಾನ್ಯ, ಐಷಾರಾಮಿ ಕೊಠಡಿಗಳ ಕಟ್ಟಡಗಳು ನಿರ್ಮಾಣಗೊಳ್ಳಲಿವೆ.

 

SriRamYogi
Comments (0)
Add Comment