ಬಿಜೆಪಿಗೆ ಭರ್ಜರಿ ಜಯಭೇರಿ: ಮೌನ ಮುರಿದ ಯೋಗಿ ಆದಿತ್ಯನಾಥ್

ಕಳೆದ ಕೆಲವು ದಿನಗಳ ಹಿಂದೆ ಯೋಗಿ ಆದಿತ್ಯನಾಥ್ ರವರು ಖಾಸಗಿ ವಾಹಿನಿಯೊಂದರ ಸಂದರ್ಶನಕ್ಕೆ ಭಾಗವಹಿಸಿದ್ದಾಗ ಮೈತ್ರಿಯ ಬಗ್ಗೆ ಮೌನ ಮುರಿದಿದ್ದಾರೆ. ಸಂದರ್ಶನದ ಸಂಪೂರ್ಣ ವಿವರವನ್ನು ಕೆಳಗಡೆ ಓದಿ.

ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ರವರು ಬಿಎಸ್ಪಿ ಮತ್ತು ಎಸ್ಪಿ ಪಕ್ಷಗಳ ಮೈತ್ರಿಯನ್ನು ಪ್ರಶ್ನಿಸಿದಾಗ ಈ ಮೈತ್ರಿಯ ನಡುವೆ ಸೂಕ್ತ ನೇತೃತ್ವ ಇಲ್ಲ ಮೊದಲು ಮೈತ್ರಿಯ ಹೊಣೆ ಯಾರು ವಹಿಸುತ್ತಾರೆ ಎಂಬುದನ್ನು ನಿರ್ಧರಿಸಲಿ ಅಖಿಲೇಶ್ ಅವರ ನೇತೃತ್ವದಲ್ಲಿ ಮಾಯಾವತಿ ರವರು ಕೆಲಸ ಮಾಡಲು ಸಿದ್ಧವಿದ್ದಾರಾ?  ಅಥವಾ ಮಾಯಾವತಿ ನೇತೃತ್ವದಲ್ಲಿ ಅಖಿಲೇಶ್ ರವರು ಸಿದ್ಧವಿದ್ದಾರಾ? ಈ ಪ್ರಶ್ನೆಗಳಿಗೆ ಉತ್ತರಿಸಿ ನಂತರ ಮೈತ್ರಿಯನ್ನು ಮುಂದುವರಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ಬಹುಶಃ ಆ ರಾಹುಲ್ ಗಾಂಧಿ ರವರು ಈ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಬಹುದು, ಆದರೆ ಅವರು ನೀಡುವುದಿಲ್ಲ ಎಂದು ವ್ಯಂಗ್ಯವಾಡಿದರು.

ಇದೇ ಸಮಯದಲ್ಲಿ ಬಿಹಾರದ ರಾಜಕೀಯದ ಬಗ್ಗೆ ಮಾತನಾಡಿದ ಯೋಗಿ ಆದಿತ್ಯನಾಥ್ ರವರು ಒಂದು ವೇಳೆ ಬಿಹಾರದ ಸಂದರ್ಭ ಎದುರಾದರೆ ಬಿಜೆಪಿ ಪಕ್ಷವು ಬೆದರಿ ಕೂರುವುದಿಲ್ಲ, ನಮ್ಮ ತಾಕತ್ತು ಏನು ಎಂಬುದು ಉತ್ತರಪ್ರದೇಶದಲ್ಲಿ ಸಾಬೀತಾಗಿದೆ ಖಂಡಿತ ನಾವು ಉತ್ತರಪ್ರದೇಶದಲ್ಲಿ ನರೇಂದ್ರ ಮೋದಿ ರವರ ನೇತೃತ್ವದಲ್ಲಿ ಬರೋಬ್ಬರಿ 75 ಕ್ಕಿಂತ ಹೆಚ್ಚು ಸೀಟುಗಳನ್ನು ಗೆದ್ದು ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡುತ್ತೇವೆ ಎಂದರು

2019electionelection 2019modiNarendra modiYogi
Comments (0)
Add Comment