ಟೊಂಕಕಟ್ಟಿ ನಿಂತ ಬಿ ಎಸ್ ವೈ: 28 ಕ್ಷೇತ್ರಗಳಲ್ಲಿ ಎಷ್ಟು ಕ್ಷೇತ್ರಗಳು ಬಿಜೆಪಿ ವಶಕ್ಕೆ ಗೊತ್ತಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿಯ ಲೋಕಸಭಾ ಚುನಾವಣೆ, ಈ ಎಲ್ಲಾ ಹಿಂದಿನ ಚುನಾವಣೆ ಗಳಿಗಿಂತಲೂ ಬಹುಮುಖ್ಯವಾಗಿದೆ ಯಾಕೆಂದರೆ ಇಷ್ಟು ದಿವಸ ಹಲವಾರು ಪಕ್ಷಗಳು ಚುನಾವಣೆಯಲ್ಲಿ  ಗೆಲ್ಲುವ ಉದ್ದೇಶದಿಂದ ಸ್ಪರ್ಧಿಸುತ್ತಿದ್ದವು. ಆದರೆ ಈ ಬಾರಿ ಪ್ರತಿ ಪಕ್ಷವು ಮೋದಿ ಅವರನ್ನು ಸೋಲಿಸುವ ಉದ್ದೇಶದಿಂದ ಕಣಕ್ಕಿಳಿಯಲಿವೆ.

ಆದ್ದರಿಂದ ಪ್ರತಿಯೊಂದು ಕ್ಷೇತ್ರವೂ ಬಿಜೆಪಿ ಪಕ್ಷಕ್ಕೆ ಬಹಳ ಮುಖ್ಯವಾಗಿರುತ್ತದೆ.  ಈಗಾಗಲೇ ಪ್ರಮುಖ ರಾಜ್ಯಗಳಲ್ಲಿ ಬಿಜೆಪಿಯು ತನ್ನ ಕಾರ್ಯಯೋಜನೆಗಳಲ್ಲಿ ತೊಡಗಿದೆ. ಅದೇ ರೀತಿ ಕರ್ನಾಟಕದಲ್ಲಿ ಮೋದಿ ರವರನ್ನು ಮತ್ತೊಮ್ಮೆ ಗದ್ದುಗೆ ಏರಿಸಲು  ಯಡಿಯೂರಪ್ಪನವರು ಟೊಂಕಕಟ್ಟಿ ನಿಂತಿದ್ದಾರೆ.

ಇದೇ ವಿಷಯವಾಗಿ ಮಾತನಾಡಿದ ಯಡಿಯೂರಪ್ಪನವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ. ಕನಿಷ್ಠ 23 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷವು ಗೆಲುವು ಸಾಧಿಸಲಿದೆ, ಎಂದು ಹೇಳಿದರು.

ಅಭ್ಯರ್ಥಿ ಆಯ್ಕೆಗೆ ಈಗಾಗಲೇ ಯಾವುದೇ ನಿರ್ಧಾರವನ್ನು ಮಾಡಿಲ್ಲ. ಕ್ಷೇತ್ರ ಬದಲಾವಣೆಯ ಕುರಿತು ಚರ್ಚೆಯೂ ಸಹ ಇನ್ನೂ ನಡೆದಿಲ್ಲ, ಪ್ರತಿ ನಿರ್ಧಾರವನ್ನು   ಹೈಕಮಾಂಡ್ ಜೊತೆಗೆ ಸಂವಾದ ನಡೆಸಿ ನಿರ್ಧರಿಸಲಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪ್ರತಿಯೊಂದು ಕ್ಷೇತ್ರದಲ್ಲಿಯೂ ಆಂತರಿಕ ಸಮೀಕ್ಷೆಯಿಂದ ಅಭ್ಯರ್ಥಿಗಳನ್ನು ನಿರ್ಧರಿಸಲಾಗುವುದು ಅಲ್ಲಿಯವರೆಗೂ ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ ಎಂದು ಸಲಹೆ ನೀಡಿದರು.

2019electionbjpBJP Karnatakabsyelection 2019modiNarendra modi
Comments (0)
Add Comment