ಬಿಜೆಪಿ ಕೈ ತಪ್ಪಲಿದೆಯೇ ಒಂದು ಲೋಕಸಭಾ ಕ್ಷೇತ್ರ? ಶಾಕ್ ನಲ್ಲಿ ಬಿ ಜೆ ಪಿ

ಬಿಜೆಪಿ ಪಕ್ಷವು ಮತ್ತೊಮ್ಮೆ ಅಧಿಕಾರದ ಗಗದ್ದುಗೆ ಏರಬೇಕಾದರೆ ಕರ್ನಾಟಕದಲ್ಲಿನ 28 ಸೀಟುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಒಂದು ಕಡೆ ಬಿಎಸ್ವೈ ರವರು 28 ಲೋಕಸಭಾ ಚುನಾವಣೆಗಳನ್ನು ಗೆದ್ದು ಕೊಡುತ್ತೇವೆ ಎಂದು ಮಾಡಿದ ಭಾಷಣ ಇನ್ನು ಜನರ ಮನದಲ್ಲಿ ಉಳಿದಿದೆ ಅಷ್ಟರಲ್ಲಾಗಲೇ  ಒಂದು ಲೋಕಸಭಾ ಚುನಾವಣೆಯ ಕ್ಷೇತ್ರದ ಅಧಿಕಾರ ಕೈತಪ್ಪುವ ಭೀತಿ ಈಗ ಬಿಜೆಪಿ ಪಕ್ಷಕ್ಕೆ ಎದುರಾಗಿದೆ. 2014ರ ಚುನಾವಣೆಯಲ್ಲಿ ಬರೋಬ್ಬರಿ 6 ಲಕ್ಷ ಮತ ಪಡೆದು ಭರ್ಜರಿಯಾಗಿ ಗೆಲುವು ಪಡೆದಿದ್ದ ಶೋಭಾ ಕರಂದ್ಲಾಜೆ ರವರು ಬಿಜೆಪಿ ಪಕ್ಷಕ್ಕೆ ಶಾಕ್ ನೀಡಿದ್ದಾರೆ.

ಆಂತರಿಕ ಸಮೀಕ್ಷೆಯಿಂದ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಶೋಭಾ ಕರಂದ್ಲಾಜೆ ಅವರನ್ನು ಬಿಟ್ಟರೆ ಮತ್ಯಾವ ಸ್ಪರ್ಧಿಯು ಇವರಷ್ಟು ಮತ ಗಳಿಸಲು ಸಾಧ್ಯವಿಲ್ಲ ಎಂಬುದು ತಿಳಿದು ಬಂದಿದೆ. ಕಾರಣ ಯಾವುದೇ ಇತರ ಬಿಜೆಪಿ ವಕ್ತಾರರು ಇಲ್ಲಿ ಪ್ರಭಾವವನ್ನು ಹೊಂದಿಲ್ಲ. ಈ ವಿಷಯ ಚೆನ್ನಾಗಿ ತಿಳಿದಿದ್ದರು ಶೋಭಾ ಕರಂದ್ಲಾಜೆ ರವರು ಬಿಜೆಪಿ ಪಕ್ಷಕ್ಕೆ ಶಾಕ್ ನೀಡಿದ್ದಾರೆ.

ಅಷ್ಟಕ್ಕೂ ಏನದು ಶಾಕ್?

ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳಿರುವ ಶೋಭಾ ಕರಂದ್ಲಾಜೆ ರವರು ಕಾರಣವನ್ನು ಬಿಟ್ಟುಕೊಟ್ಟಿಲ್ಲ. ಒಂದು ವೇಳೆ ಬಿಜೆಪಿ ಹೈಕಮಾಂಡ್ ಇವರನ್ನು ಒಪ್ಪಿಸಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡದಿದ್ದರೆ ಬಹುತೇಕ ಬಿಜೆಪಿ ಒಂದು ಸ್ಥಾನವನ್ನು ಕಳೆದುಕೊಂಡಂತೆ ಎಂದು ಎಲ್ಲೆಡೆ ವಿಷಯ ಹರಿದಾಡುತ್ತಿದೆ.

ಈ ನಿರ್ಧಾರಕ್ಕೆ ಯಾವುದೇ ಕಾರಣಗಳನ್ನು ನೀಡದಿರುವ ಶೋಭಾ ಕರಂದ್ಲಾಜೆ ಅವರ ಮುಂದಿನ ನಡೆ ಏನು ಎಂಬುದನ್ನು ನಾವು ಕಾದು ನೋಡಬೇಕಿದೆ. ಇದರಿಂದ ಒಂದು ಕಡೆ ಕಾಂಗ್ರೆಸ್ ಪಾಳೆಯದಲ್ಲಿ ಸಂತಸ ಮೂಡಿದೆ ಎಂದರೆ ತಪ್ಪಾಗಲಾರದು.

2019electionbjpelection 2019
Comments (0)
Add Comment