ಮೋದಿ ಹವಾ: ಭಾರತ ಹಾಗೂ ದಕ್ಷಿಣ ಕೊರಿಯಾದ ನಡುವೆ ನಡೆದ ಹನ್ನೊಂದು ಒಪ್ಪಂದಗಳು ಯಾವುವು ಗೊತ್ತಾ?

ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್‌ ಭಾರತ ಭೇಟಿಯ ಸಂದರ್ಭದಲ್ಲಿ ಭಾರತ ಹಾಗೂ ದಕ್ಷಿಣ ಕೊರಿಯಾದ ನಡುವೆ 11 ಒಪ್ಪಂದವೇರ್ಪಟ್ಟಿದೆ.ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಾರ, ಭಾರತ ದಕ್ಷಿಣ ಕೊರಿಯಾ ನಡುವೆ ಸಂಸ್ಕರಿಸಿದ ಮೀನು, ಸಿಗಡೆ ಮತ್ತಿತರ ಸಾಗರೋತ್ತರ ಉತ್ಪನ್ನಗಳ ಮುಕ್ತ ವ್ಯಾಪಾರ, ಸಮಗ್ರ ಆರ್ಥಿಕ ಸಹಕಾರ ಪ್ರಗತಿಯ ಒಪ್ಪಂದಕ್ಕೆ ಭಾರತದ ಕಡೆಯಿಂದ ವಾಣಿಜ್ಯ ಸಚಿವ ಸುರೇಶ್ ಹಾಗೂ ದಕ್ಷಿಣ ಕೊರಿಯಾದ ವ್ಯಾಪಾರ ಸಚಿವ ಹ್ಯುಅನ್- ಚೊಂಗ್ ಸಹಿ ಹಾಕಿದ್ದಾರೆ.

ನಾಲ್ಕನೇ ಕೈಗಾರಿಕಾ ಕ್ರಾಂತಿಯ ಪ್ರಯೋಜನವನ್ನು ಪಡೆದುಕೊಳ್ಳಲು ವಾಣಿಜ್ಯೀಕರಣಕ್ಕಾಗಿ ಉನ್ನತ ತಂತ್ರಜ್ಞಾನದ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಭವಿಷ್ಯದ ಕಾರ್ಯತಂತ್ರದ ಗುಂಪಿನ ನಡುವಿನ ಸಹಕಾರಕ್ಕಾಗಿ ಸಹಿ ಹಾಕಲಾಗಿದೆ. ಎಲೆಕ್ಟ್ರಾನಿಕ್ ವಾಹನ, 3 ಡಿ ಪ್ರಿಂಟಿಂಗ್, ಸ್ಮಾರ್ಟ್ ಕಾರ್ಖಾನೆ, ಅರ್ಟಿಪಿಸಿಯಲ್ ಇಂಟೆಲಿಜೆನ್ಸಿ , ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಭಾರತದ ಕಡೆಯಿಂದ ಕೇಂದ್ರ ಸಚಿವರಾದ ಸುರೇಶ್ ಪ್ರಭು ಹಾಗೂ ಹರ್ಷವರ್ಧನ್ ಸಹಿ ಹಾಕಿದರು.

2018ರಿಂದ 2022 ರ ಅವಧಿಯಲ್ಲಿ ಸಾಹಿತ್ಯ, ನೃತ್ಯ, ಥಿಯೇಟರ್, ಕಲಾ ಪ್ರದರ್ಶನ, ಸಂವಹನ ಮಾಧ್ಯಮ ಕಾರ್ಯಕ್ರಮ ಮತ್ತು ಸಂಗ್ರಹಾಲಯಕ್ಕಾಗಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಕ್ಕಾಗಿ ಒಪ್ಪಂದವೇರ್ಪಟ್ಟಿದೆ. ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ರಾಘವೇಂದ್ರ ಸಿಂಗ್ ಹಾಗೂ ದಕ್ಷಿಣ ಕೊರಿಯಾ ಭಾರತದ ರಾಯಭಾರಿ ಶಿನ್ ಬೊಂಗ್ ಕಿಲ್ ಈ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ವೈಜ್ಞಾನಿಕ ಹಾಗೂ ತಂತ್ರಜ್ಞಾನ ಸಂಶೋಧನೆ ಕ್ಷೇತ್ರದಲ್ಲಿನ ಸಹಕಾರಕ್ಕೆ ಸಂಬಂಧಿಸಿದಂತೆ ಸಿಎಸ್ ಐಆರ್ ಮತ್ತು ಎನ್ ಎಸ್ ಟಿ ನಡುವೆ ಒಪ್ಪಂದವೇರ್ಪಟ್ಟಿದೆ. ರೈಲ್ವೆ ಸಂಶೋಧನೆ, ರೈಲ್ವೆ ಕೈಗಾರಿಕೆಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ಆರ್ ಡಿಎಸ್ ಓ ಮತ್ತು ಕೊರಿಯಾ ರೈಲು ರೋಡ್ ಸಂಶೋಧನಾ ಸಂಸ್ಥೆಯ ನಡುವೆ ಒಪ್ಪಂದ ಆಗಿದೆ.

ಜೈವಿಕ ತಂತ್ರಜ್ಞಾನ, ಆರೋಗ್ಯ, ವೈದ್ಯಕೀಯ, ಕೃಷಿ ಉತ್ಪನ್ನ, ಡಿಜಿಟಲ್ ಹೆಲ್ತ್ ಕೇರ್, ಮೆದುಳು ಸಂಶೋಧನೆ ಮತ್ತಿತರ ಕ್ಷೇತ್ರಗಳಲ್ಲಿನ ಒಪ್ಪಂದಗಳಿಗೆ ಕೇಂದ್ರ ಸಚಿವ ಹರ್ಷವರ್ಧನ್ ಸಹಿ ಹಾಕಿದರು. 5 ಜಿ, ವಿಪತ್ತು ನಿರ್ವಹಣೆ, ತುರ್ತು ಪ್ರತಿಕ್ರಿಯೆ, ಸೈಬರ್ ಭದ್ರತೆ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಭಾರತ ಹಾಗೂ ದಕ್ಷಿಣ ಕೊರಿಯಾ ನಡುವೆ ಮಹತ್ವದ ಒಪ್ಪಂದವೇರ್ಪಟ್ಟಿದೆ.

Creadits: Kannada Prabha

Comments (0)
Add Comment