ಭರ್ಜರಿ ಆಫರ್-ರೈತರು ಇನ್ನು ಮುಂದೆ ನಷ್ಟವನ್ನು ನೋಡಲು ಸಾಧ್ಯವಿಲ್ಲ: ಮೋದಿ ಮೇನಿಯಾ

ರೈತರನ್ನು ದೇಶದ ಬೆನ್ನೆಲುಬು ಎಂದು ಕರೆಯುತ್ತಾರೆ. ಆದರೆ ಭಾರತದ ಆರ್ಥಿಕ ಪರಿಸ್ಥಿತಿಯಲ್ಲಿ ರೈತನ ಸಂಕಷ್ಟ ಕೇಳೋರು ಯಾರು ಇರಲಿಲ್ಲ. ಇತ್ತ ಪ್ರತಿಪಕ್ಷಗಳು ರೈತ ವಿರೋಧಿ ಸರ್ಕಾರ ಎಂದು ಬೊಬ್ಬೆ ಹೊಡೆಯುತ್ತಿದ್ದರು ಕೇಂದ್ರ ಸರ್ಕಾರವು ಪ್ರತಿ ಬಾರಿಯೂ ರೈತರಿಗೆ ನ್ಯಾಯ ಒದಗಿಸುತ್ತಲೇ ಬಂದಿದೆ. ಆದರೆ ಈ ಬಾರಿ ಒಂದು ಹೆಜ್ಜೆ ಮುಂದೆ ಇಟ್ಟಿರುವ ಮೋದಿ ಸರ್ಕಾರವು ಹಿಂದೆಂದೂ ಕೇಳಿದಂತಹ ಆಫರ್ ಗಳನ್ನು ರೈತರಿಗೆ ನೀಡಿದೆ.

ಅಷ್ಟಕ್ಕೂ ರೈತರ ಸಮಸ್ಯೆಯಾದರೂ ಏನು? 

ಒಂದು ಬೆಳೆ ಬೆಳೆಯುವುದೆಂದರೆ ಅಷ್ಟು ಸುಲಭದ ಮಾತಲ್ಲ. ಹಲವು ತಿಂಗಳುಗಳ ಕಾಲ ರೈತರು ಕಷ್ಟಪಟ್ಟು ವ್ಯವಸಾಯ ಮಾಡುತ್ತಾರೆ. ಆದರೆ ಅವರ ಕೈಗೆ ಹಣ ಮಾತ್ರ ಸೇರುವುದಿಲ್ಲ ಬದಲಾಗಿ ಬೆಳೆಯುವ ಮಳೆಗೆ ತುತ್ತಾಗಿ ಅಥವಾ ಮಧ್ಯವರ್ತಿಗಳ ಪಾಲಾಗುತ್ತಿತ್ತು. ಇಲ್ಲವಾದಲ್ಲಿ ರೈತರಿಗೆ ಮಾರುಕಟ್ಟೆಯಲ್ಲಿ ತಮ್ಮ ಬೆಳೆಗೆ ಸೂಕ್ತ ಬೆಲೆ ದೊರೆಯುತ್ತಿರಲಿಲ್ಲ. ಸೂಕ್ತ ಬೆಲೆ ದೊರೆಯುತ್ತಿರಲಿಲ್ಲ ಇದನ್ನು ತಡೆಯಲೆಂದೇ ಮೋದಿ ರವರು ದೇಶದ ರೈತಾಪಿ ವಲಯಕ್ಕೆ ಭರ್ಜರಿ ಉಡುಗೊರೆಯೊಂದನ್ನು ನೀಡಿದ್ದಾರೆ.

ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರಕುತ್ತಿಲ್ಲ ಎಂಬ ರೈತರ ಕೂಗಿಗೆ ಮೋದಿ ಅವರು ಸ್ಪಂದಿಸಿ ದೇಶದ ರೈತಾಪಿ ವಲಯಕ್ಕೆ ಭರ್ಜರಿ ಉಡುಗೊರೆಯೊಂದನ್ನು ಘೋಷಿಸಿದ್ದಾರೆ.

ಅದುವೇ ಭತ್ತ ಸೇರಿದಂತೆ ಮುಂತಾದ ಮುಂಗಾರು ಬೆಳೆಗಳಿಗೆ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಮತ್ತು ಇನ್ನೆರಡು ವಾರಗಳಲ್ಲಿ ಕಬ್ಬು ಬೆಳೆಗೆ ನ್ಯಾಯೋಚಿತ ಮತ್ತು ಸಂಭಾವನೆ ಬೆಲೆಯನ್ನು ಘೋಷಿಸುವುದಾಗಿ ನರೇಂದ್ರ ಮೋದಿ ಆದೇಶ ಹೊರಡಿಸಿದ್ದಾರೆ.ಮುಂಗಾರಿನ ಹಂಗಾಮಿನ ಬೆಳೆಗಳಿಗೆ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚಿನ ಬೆಂಬಲ ಘೋಷಿಸಿ ರೈತರು ಯಾವುದೇ ಸಮಯದಲ್ಲೂ ಸಹ ನಷ್ಟವನ್ನು ಅನುಭವಿಸಿದಂತೆ ತಡೆಯಲು ಮೋದಿ ಸಿದ್ಧತೆ ನಡೆಸಿದ್ದಾರೆ. ಇದರಿಂದ ರೈತರ ಆದಾಯವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ಮೋದಿ ನಿರ್ಧರಿಸಿದ್ದಾರೆ.

ರೈತರಿಗೆ ಒಂದೂವರೆ ಪಟ್ಟು ಬೆಂಬಲ ಬೆಲೆ ಘೋಷಿಸುವುದರಿಂದ ರೈತರ ಬೆಳೆ ಕೈಗೆ ಬಂದಲ್ಲಿ ನಷ್ಟವಿಲ್ಲದೆ ಅದು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತದೆ. ರೈತರ ಬೆಳೆ ಕೈಗೆ ಬಂದಲ್ಲಿ ನಷ್ಟವಿಲ್ಲದೆ ಅದು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತದೆ.ಇದರಿಂದ ಇನ್ಯಾವ ರೈತರೂ ಸಹ ವ್ಯವಸಾಯವನ್ನು ಬಿಡಬಾರದು ಎಂದ ಮೋದಿ ರವರು ರೈತರಿಗೆ ಇದ್ದ ಸಂಕಷ್ಟ ದಿನಗಳನ್ನು ದೂರ ಮಾಡಲು ನಿರ್ಧರಿಸಿದ್ದಾರೆ.

ಇಷ್ಟು ಮಾತ್ರ ಗಳಿವೆ ರೈತರಿಗೆ ಕರೆ ನೀಡಿದ ಮೋದಿ ರವರು ಸೋಲಾರ್ ಪಂಪುಗಳು ಮತ್ತು ಸೋಲಾರ್ ಪ್ಯಾನಲ್ ಗಳನ್ನು ಬಳಸುವಂತೆ ಕರೆ ನೀಡಿದರು. 2022 ರ ಒಳಗೆ ರಾಸಾಯನಿಕ ಗೊಬ್ಬರಗಳ ಬಳಕೆ ಶೇಕಡ 10 ರಷ್ಟು ಇಳಿಕೆ ಮಾಡಲಾಗುತ್ತದೆ. ಇದರಿಂದ ರೈತರ ಆದಾಯ ಹೆಚ್ಚುವುದಲ್ಲದೆ ಉತ್ತಮ ಪೋಷಕಾಂಶಗಳುಳ್ಳ ಬೆಳೆಯನ್ನು ಬೆಳೆಯಬಹುದು ಎಂದರು.


ರೈತರ ಆದಾಯ ಹೆಚ್ಚಳಕ್ಕೆ ಸಂಬಂಧಿಸಿದ ಉದ್ಯಮಗಳಲ್ಲೂ ಹೂಡಿಕೆ ಮಾಡುವಂತೆ ಕಾರ್ಪೋರೇಟ್ ಸಂಸ್ಥೆಗಳಿಗೆ ಸೂಚಿಸಿದ್ದೇನೆ ಎಂದು ಮೋದಿ ಅವರು ಹೇಳಿದರು.ಇದೇ ನಡೆದಲ್ಲಿ ರೈತ ವಿರೋಧಿ ಎಂದು ಬೊಬ್ಬೆ ಹೊಡೆಯುವ ಪ್ರತಿಪಕ್ಷಗಳು ಹೊಸ ಟೀಕೆಯನ್ನು ಹುಡುಕಿಕೊಳ್ಳುವುದು ಸೂಕ್ತ ಎಂಬುದು ನಮ್ಮ ಅಭಿಪ್ರಾಯ. ಮೋದಿ ರವರ ಯೋಜನೆಗೆ ನಮ್ಮ ಬೆಂಬಲ ಬಿದ್ದಲ್ಲಿ ಶೇರ್ ಮಾಡಿ

modiModi SchemesNarendra modi
Comments (0)
Add Comment