ರಾಜ್ಯಗಳಿಗೆ ಬಂಪರ್ ಆಫರ್ ನೀಡಿದ ಮೋದಿ ! ಇದಲ್ಲವೇ ಅಚ್ಚೇ ದಿನ್

ದೇಶದ ಪ್ರತಿಯೊಂದು ರಾಜ್ಯಗಳಿಗೆ ಮೋದಿ ಬಂಪರ್ ಆಫರ್ ನೀಡಿದ್ದಾರೆ. ವಿಷಯವೆಂದು ಸಂಪೂರ್ಣ ತಿಳಿಯಲು ಕೆಳಗಡೆ ಓದಿ.

ಅಷ್ಟಕ್ಕೂ ವಿಷಯದ ಮೂಲವೇನು?

ನೀತಿ ನಿಯೋಗದ ಆಡಳಿತ ಮಂಡಳಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ರವರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು.ಪ್ರವಾಹ ಪೀಡಿತ ರಾಜ್ಯಗಳಲ್ಲಿನ ಪರಿಸ್ಥಿತಿ ನಿಭಾಯಿಸಲು ಬೇಕಾದ ಸಂಪೂರ್ಣ ಸಹಕಾರ  ಕೇಂದ್ರ ಬದ್ಧವಾಗಿದೆ ಎಂದು ತಿಳಿಸಿದರು. ಇದೇ ಸಮಯದಲ್ಲಿ ಪ್ರತಿಯೊಂದು ರಾಜ್ಯಗಳಿಗೆ ಭರ್ಜರಿ ಆಫರ್ ಒಂದು ನೀಡಿದ್ದಾರೆ.

ಅಷ್ಟಕ್ಕೂ ಆ ಆಫರ್ ಏನು?

ಪ್ರತಿ ಹಣಕಾಸಿನ ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಅನುದಾನ ಬರುತ್ತದೆ, ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಅನುದಾನ ಬರುತ್ತದೆ ಐದು ಲಕ್ಷ ಕೋಟಿ ಆಗಿತ್ತು. ಆದರೆ ಈ ಹಣಕಾಸಿನ ವರ್ಷದಿಂದ ಬರೋಬ್ಬರಿ ಹನ್ನೊಂದು ಲಕ್ಷ ಕೋಟಿಯಷ್ಟು ಹೆಚ್ಚಿನ ಅನುದಾನವನ್ನು ರಾಜ್ಯ ಸರ್ಕಾರಗಳು ಪಡೆಯಲಿವೆ ಎಂದು ಮೋದಿ ಹೇಳಿದರು. ಇಷ್ಟೆ ಅಲ್ಲದೆ ರೈತರ ಆದಾಯ ದ್ವಿಗುಣ ಗೊಳಿಸುವ ಬಗ್ಗೆ ಮತ್ತು ಜಿಲ್ಲೆಗಳ ಅಭಿವೃದ್ಧಿ ಅಪೌಷ್ಟಿಕತೆ ನಿವಾರಣೆ ಅಯುಷ್ಮಾನ್ ಭಾರತ್ ಮಿಷನ್ ಇಂದ್ರಧನುಷ್ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಈ ಅನುದಾನವನ್ನು ಬಳಸಿಕೊಂಡು ರಾಜ್ಯ ಸರ್ಕಾರಗಳು ಸರಿಯಾಗಿ ಕೆಲಸ ಮಾಡಿದ್ದಲ್ಲಿ ಇಡೀ ಭಾರತವೇ ಯಾವುದೇ ಪ್ರವಾಹ ಯಾವುದೇ ಬರಗಾಲ ಅಥವಾ ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಬಹುದಾಗಿದೆ. ರಾಜ್ಯ ಸರ್ಕಾರಗಳು ಈ ಅನುದಾನವನ್ನು ಹೇಗೆ ಬಳಸಿಕೊಳ್ಳುತ್ತವೆ ಎಂಬುದನ್ನು ಕಾದುನೋಡಬೇಕಿದೆ.

modiNarendra modiSc
Comments (0)
Add Comment