ಸಿಡಿದೆದ್ದ ಅನಂತ್ ಕುಮಾರ್: ಹಿಂದುತ್ವದ ವಿರೋಧಿಗಳ ವಿರುದ್ಧ ವಾಗ್ದಾಳಿ

ಅನಂತ್ ಕುಮಾರ್ ಹೆಗಡೆ ಅವರು ಇಂದು ನಗರದಲ್ಲಿ ಖ್ಯಾತ ಲೇಖಕ ಜಿ.ಬಿ ಹರೀಶ್ ಅವರು ಕನ್ನಡಕ್ಕೆ ತಂದಿರುವ ವೀರ ಸಾವರ್ಕರ್ ಅವರ ಹಿಂದುತ್ವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಇದೇ ವೇಳೆ ಅವರು ಮಾತನಾಡಿ ಬುದ್ಧಿಜೀವಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದುತ್ವ ಸಮುದ್ರವಿದ್ದಂತೆ, ಹಿಂದುತ್ವ ಸತ್ಯವನ್ನು ಒಪ್ಪಿಕೊಳ್ಳುತ್ತದೆ.

ಶ್ರೇಷ್ಠ ವಿಚಾರಗಳು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಅದನ್ನು ಹಿಂದುತ್ವ ಸ್ವೀಕರಿಸುತ್ತದೆ. ಆದರೆ ಈ ಹಿಂದುತ್ವವನ್ನು ಬುದ್ಧಿಜೀವಿಗಳು ಒಪ್ಪುವುದಿಲ್ಲ, ಏಕೆಂದರೆ ಅವರ ತಲೆಯಲ್ಲಿ ಮೂರ್ಖತನವನ್ನೇ ತಿಂಬಿಕೊಂಡಿದ್ದಾರೆ. ವಿದೇಶಿ ಬಂಡವಾಳಕ್ಕೆ ತಮ್ಮನ್ನು ಮಾರಿಕೊಂಡಿರುವ ಬುದ್ಧಿಜೀವಿಗಳು ಹಿಂದುತ್ವವನ್ನು ಕುಗ್ಗಿಸಲು ಯತ್ನಿಸುತ್ತಿದ್ದಾರೆ ಅಂತ ಆರೋಪಿಸಿರು.

ನಾವು ಗುರ್ರ್ ಅಂದ್ರೆ ಜಾತ್ಯಾತೀತತೆಗೆ ಅಪಚಾರ ಆಗುತ್ತದೆ ಅಪಮಾನ ಆಗುತ್ತೆ ಸಂವಿಧಾನ ವಿರೋಧಿಯಾಗುತ್ತೆ. ಮೀಯಾಂವ್ ಅಂತಾ ಹೇಳ್ತಾ ಇರ್ಬೇಕಾ? ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಭಾನುವಾರ ಮತ್ತೆ ಬುದ್ದಿಜೀವಿಗಳ ವಿರುದ್ಧ ಕಿಡಿ ಕಾರಿದ್ದಾರೆ.

‘ಹಿಂದುತ್ವ ಅಂದರೆ ರಾಜಕಾರಣದ ಕಾಲ್ಚೆಂಡು ಅಲ್ಲ. ಅದು ನಮ್ಮ ಸ್ವಭಾವ, ನಮ್ಮತನ, ನಮ್ಮ ಬದುಕು ನಮ್ಮ ಪರಂಪರೆ ಇದನ್ನು ಬುದ್ಧಿ ಜೀವಿಗಳು ಅರ್ಥ ಮಾಡಿಕೊಳ್ಳಬೇಕು’ ಎಂದರು.ಹಿಂದುತ್ವ ನಮ್ಮ ದೇಶದ ಬೆನ್ನೆಲುಬು. ಒಂದು ದೇಶ ನಾಶವಾಗಬೇಕಾದರೆ ಅದರ ಬೆನ್ನೆಲುಬು ನಾಶವಾಗಬೇಕು ಎಂದರು.

ಜಾತಿಯಿಂದ ದೇಶ ದೊಡ್ಡದಾಗಿಲ್ಲ. ಹಿಂದುತ್ವವಾದಿಗಳು ಜಾತಿಗೆ ಒತ್ತುಕೊಟ್ಟಿಲ್ಲ. ಕೃಷ್ಣ ಬ್ರಾಹ್ಮಣನೆ? ರಾಮ ಬ್ರಾಹ್ಮಣನೆ? ಮಣ್ಣಿನಿಂದ ಹುಟ್ಟಿಬಂದ ಗಣಪತಿ, ಹಾವಿನ ರೂಪದಲ್ಲಿರುವ ಸುಬ್ರಹ್ಮಣ್ಯ ಬ್ರಾಹ್ಮಣನೆ ಎಂದು ಪ್ರಶ್ನಿಸಿದರು.

ನಾವು ಈ ಮಣ್ಣಿನಲ್ಲೆ ಹುಟ್ಟಿ ಬೆಳೆದವರು.ನಮ್ಮದು ಅಲೆಮಾರಿ ಸಂಸ್ಕೃತಿ ಅಲ್ಲ ಎಂದರು.

Ananth kumarAnanth Kumar Hegde
Comments (0)
Add Comment