ಒಡಿಸ್ಸಾ: ಮೋದಿ ಅಲೆಯಲ್ಲ ಸುನಾಮಿ, ಮತ್ತೊಂದು ರಾಜ್ಯ ಬಿಜೆಪಿ ವಶಕ್ಕೆ?

ಹೌದು , ಇಡೀ ದೇಶವೇ ಈಗ ಕೇಸರಿಮಯವಾಗುತ್ತಿದೆ. ಪ್ರತಿ ರಾಜ್ಯದ ಚುನಾವಣೆಯಲ್ಲೂ ಬಿಜೆಪಿ ಭರ್ಜರಿ ಜಯಗಳಿಸಿ ಸರ್ಕಾರ ರಚಿಸುತ್ತ ಬಂದಿದೆ. ಬಿಜೆಪಿ ಪಕ್ಷ ಇಲ್ಲವಾದಲ್ಲಿ ಪ್ರಾದೇಶಿಕ ಪಕ್ಷಗಳ ಮುಂದೆ ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗುತ್ತಿದೆ.

ಅಷ್ಟಕ್ಕೂ ವಿಷಯದ ಮೂಲವೇನು?

ಒಡಿಸ್ಸಾ ಅಂದ ತಕ್ಷಣ ಅಧಿಕಾರಕ್ಕೆ ಅಲ್ಲಿ ಪೈಪೋಟಿಯೇ ಇರುವುದಿಲ್ಲ. ಬರೋಬ್ಬರಿ ೧೮ ವರ್ಷಗಳಿಂದ ಅಹಿಕಾರದಲ್ಲಿ ಇರುವುದು ಒಂದೇ ಪಕ್ಷ, ಅದೇ ಬೀಜು ಜನತಾ ದಳ ಈ ಮೊದಲು 1995 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಿದ್ದು ಬಿಟ್ಟರೆ ಆನಂತರ ಬೀಜು ಜನತಾ ದಳ ಪಕ್ಷದ್ದೇ ಹವಾ.

ಆದರೆ ಈಗ ಕಾಲ ಬದಲಾಗಿದೆ, ಬರೋಬ್ಬರಿ ೪ ಬಾರಿ ಅಧಿಕಾರಕ್ಕೆ ಏರಿದ ಪಕ್ಷ ಚಿಂತಿಸುವ ಕಾಲ ಬಂದಿದೆ. ಇಷ್ಟು ದಿನ ಬೀಜು ಜನತಾ ದಳ ಅಥವಾ ಕಾಂಗ್ರೆಸ್ ಎನ್ನುತ್ತಿದ್ದ ಜನ ಈಗ ಬಿಜೆಪಿ ಪಕ್ಷದ ಕಡೆ ಮುಖ ಮಾಡಿದ್ದಾರೆ.ಅದಕ್ಕೆ ಈ ನಿದರ್ಶನವೇ ಸಾಕ್ಷಿ.

ಅಷ್ಟಕ್ಕೂ ಆ ನಿದರ್ಶನ ಯಾವುದು?

ನೀವು ಒಬ್ಬರು ಇಬ್ಬರು ಪಕ್ಷ ಬದಲಾಯಿಸುವುದನ್ನು ಕೇಳಿದ್ದೀರಾ,ಆದರೆ ಈಗ ಬರೊಬ್ಬ್ಬರಿ ೨೦೦೦ ಕಾರ್ಯ ಕರ್ತೃ ಬಿಜೆಪಿ ಗೆ ಸೇರಿದ್ದಾರೆ.ಕೇಂದ್ರ ಸಚಿವ ಧರ್ಮೇಂದ್ರ ಪ್ರಸಾದ್ ಮತ್ತು ಮಾಜಿ ಐಎಎಸ್ ಅಧಿಕಾರಿ ಅಶೀಕ್ ಕುಮಾರ್ ತ್ರಿಪಾಟಿ ಕೂಡ ಬಿಜೆಪಿ ಪಕ್ಷಕ್ಕೆ ಬಲ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಎಲ್ಲರನ್ನೂ ಕೂಡ ಆತ್ಮೀಯವಾಗಿ ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಅಲ್ಲದೇ ತ್ರಿಪಾಟಿ ಹಾಗೂ ಕಾರ್ಯಕರ್ತರ ಸೇರ್ಪಡೆಯಿಂದ ಪಕ್ಷಕ್ಕೆ ಇನ್ನಷ್ಟು ಬಲ ದೊರಕಲಿದೆ ಎಂದು ಧರ್ಮೇಂದ್ರ ಪ್ರಧಾನ್ ಈ ವೇಳೆ ಹೇಳಿದ್ದಾರೆ.

ಈ ನಾಯಕರು ಮತ್ತು ಬೀಜು ಜನತಾ ದಳ ಕಟ್ಟಾಯುಗಳಾಗಿದ್ದ ಬೆಂಬಲಿಗರು ಬಿಜೆಪಿ ಸೇರಿರುವುದು ಮೋದಿ ಅಲೆಯನ್ನು ಮತ್ತಷ್ಟು ಜಾಸ್ತಿ ಮಾಡಿದೆ.ಇದನ್ನೆಲ್ಲ ನೋಡಿದರೆ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ ಎಂದು ಜನರು ಮಾತನಾಡುತ್ತಿರುವುದು ಈಗ ಸ್ಪಷ್ಟವಾಗಿದೆ.

bjpOdissa
Comments (0)
Add Comment