ದೇವೇಗೌಡರು ಮಾತು ತಪ್ಪಿದರೆ?? ಅಥವಾ ಕುಮಾರಸ್ವಾಮಿ ಅಪ್ಪನ ಮಾತು ಮೀರಿದರೆ? 

ದೇವೇಗೌಡರು ಮಾತು ತಪ್ಪಿದರೆ ಅಥವಾ ಕುಮಾರಸ್ವಾಮಿ ಅಪ್ಪನ ಮಾತು ಮೀರಿದರೆ? ಹೌದು ಈಗೊಂದು ಪ್ರಶ್ನೆ ಈಗ ಎಲ್ಲರಿಗೂ ಎದುರಾಗಿದೆ. ಒಮ್ಮೆ ಸಂಪೂರ್ಣ ಓದಿ ನಿಮ್ಮ ಉತ್ತರ ತಿಳಿಸಿ.

ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿ ಸಂಪುಟ ವಿಸ್ತರಣೆವರೆಗೂ ವಿಷಯ ಬಂದಿದೆ ಆದರೆ ಈಗ ದೇವೇಗೌಡರು ಮೈತ್ರಿಯಾ ನಂತರ ಆಡಿದ ಮಾತುಗಳು ಈಗ ಲೆಕ್ಕಕ್ಕೆ ತೆಗೆದುಕೊಳ್ಳುವಂತೆ ಆಗಿವೆ ಎಂದು ಅನಿಸುತ್ತಿದ್ದೆ.

ಸರ್ಕಾರ ರಚನೆ ನಂತರದ ಉಪ ಚುನಾವಣೆಗಳಲ್ಲಿ ನಮ್ಮ ಮೈತ್ರೀಯ್ ಸರ್ಕಾರ ಕೇವಲ ವಿಧಾನಸೌಧದಲ್ಲಿ ಮಾತ್ರ ಎಂದು ಹೇಳುವ ಮೂಲಕ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ನಿಲ್ಲಿಸಿದ್ದರು. ಆದರೆ ಈಗ ಜಯನಗರದಲ್ಲಿ ಇನ್ನು ಚುನಾವಣೆಗೆ ೫ ದಿನಗಳು ಇರುವಾಗ ಜೆಡಿಎಸ್ ಅಭ್ಯರ್ಥಿಯು ಕಾಂಗ್ರೆಸ್ ಅಭ್ಯರ್ಥಿ ಪರ ಬೆಂಬಲ ಘೋಷಿಸಿ ನಾಮಪತ್ರವನ್ನು ಹಿಂಪಡೆದಿದ್ದಾರೆ.

ಈ ಮೂಲಕ ಬಿಜೆಪಿ-ಕಾಂಗ್ರೆಸ್ ನೇರ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಜೆಡಿಎಸ್ ಪಕ್ಷ ಈ ಕುರಿತು ಅಧಿಕೃತವಾದ ಘೋಷಣೆ ಮಾಡಿದೆ. ಜಯನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಅವರು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರಿಗೆ ಬೆಂಬಲ ಘೋಷಣೆ ಮಾಡಿ ತಾವು ಹಿಂದೆ ಸರಿದಿದ್ದಾರೆ. ಇದು ಮಾಂಯ್ ಮುಖ್ಯಮಂತ್ರಿ ಕುಮಾರ ಸ್ವಾಮಿ ರವರ ನಿರ್ಧಾರವಾದರೆ ದೇವೇಗೌಡರ ಮಾತು ತಪ್ಪಿದಂತೆ ಆಗುತ್ತದೆ ಇಲ್ಲವಾದಲ್ಲಿ ದೇವೇಗೌಡರು ಮಾತು ತಪ್ಪಿದಂತೆ ಆಗುತ್ತದೆ.

ಅದೇನೇ ಇರಲಿ ಅಧಿಕಾರದಲ್ಲಿ ಇರುವ ಪಕ್ಷವು ಈ ರೀತಿ ಬೆಂಬಲ ಘೋಷಣೆ ಮಾಡುವುದು ಸರಿಯಲ್ಲ ಎಂದು ನಮ್ಮ ಅಭಿಪ್ರಾಯ ಬೇಕಿದ್ದರೆ ಕಾಂಗ್ರೆಸ್ ಸರ್ಕಾರ ಬೆಂಬಲ ಘೋಷಣೆ ಮಾಡಿ ಹಿಂದೆ ಸರಿಯಬಹುದಿತ್ತು. ಆದರೆ ಇಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಬಲಿಷ್ಠಗೊಂಡಂತೆ ಆಯಿತು ಮತ್ತು ಜೆಡಿಎಸ್ ಕೇವಲ ಹೆಸರಿಗೆ ಮಾತ್ರ ಎಂಬಂತೆ ಹೇಳುವವರಿಗೆ ಈ ವಿಷಯ ಪುಷ್ಠಿ ನೀಡುವಂತೆ ಕಾಣುತ್ತಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.

bjpCongressJayanagar ElectionJDS
Comments (0)
Add Comment