ಸರ್ಕಾರ ಸತ್ತು ಹೋಗಿದೆಯೇ? ರಾಜ್ಯ ಸರ್ಕಾರಕ್ಕೆ ಯುವಕನ ಬಹಿರಂಗ ಪತ್ರ

ಹೌದು, ಈಗೊಂದು ಪ್ರಶ್ನೆಯನ್ನು ಕೇಳಿ ಯುವಕನೊಬ್ಬ ಕರುನಾಡ ವಾಣಿ ಪೇಜ್ ಗೆ ಸಂದೇಶವೊಂದನ್ನು ಕಳುಹಿಸಿದ್ದಾನೆ. ಅಷ್ಟಕ್ಕೂ ಇಷ್ಟು ನೊಂದ ಮನಸ್ಸಿನಿಂದ ಈ ಪ್ರಶ್ನೆಯನ್ನು ಕೇಳಲು ಕಾರಣವಿದೆಯೇ? ಹೌದು ಈ ಯುವಕನ ಪ್ರಶ್ನೆಗೆ ಒಂದು ಬಲವಾದ ಕಾರಣವಿದೆ..ದಯವಿಟ್ಟು ಸಂಪೂರ್ಣ ಓದಿ ಇದು ಒಂದು ಅರ್ಥ ಪೂರ್ಣವಾದ ಮಾತುಗಳು.

ಕಾರಣವನ್ನು ಅವನ ಮಾತುಗಳಲಿಯ್ಯೇ ಕೇಳಿ !

ಮಾನ್ಯ ಮುಖ್ಯ ಮಂತ್ರಿಗಳೇ ಮತ್ತು ರಾಜ್ಯದ ಇತರ ಜನ ಪ್ರತಿನಿಧಿಗಳೇ, ಕರಾವಳಿ ಭಾಗದಲ್ಲಿ ಮಹಾ ಮಳೆಯಿಂದಾಗಿ ಸಾಕಷ್ಟು ಹನಿ ಉಂಟಾಗಿದೆ ಮತ್ತು ಇಲ್ಲಿ ಸರಿಯಾದ ರೀತಿಯಾದ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಇದಕ್ಕೆ ಕಾರಣ ನಿಮಗೆ ತಿಳಿದಿರಬಹುದು, ಹೌದು ಸರ್ಕಾರ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಮತ್ತು ಪೂರ್ವ ಮುನ್ಸೂಚನೆ ಇದ್ದರೂ ಯಾವುದೇ ಸುರಕ್ಷಾ ಕ್ರಮಗಳನ್ನು ಕೈಗೊಂಡಿಲ್ಲ.

ಇದರಿಂದ ನನಗೆ ಅನ್ನಿಸುತ್ತಿದೆ ನಮ್ಮ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಅನ್ನೋದು ಸತ್ತುಹೋಗಿದೆ ಎಂದು. ನೀವು ರಾಜ್ಯದಲ್ಲಿ  ಕೇವಲ ಖಾತೆ ಹಂಚಿಕೆ ಮತ್ತು ಕಾಲಹರಣ ಮಾಡುತ್ತಿದ್ದೀರ ಇದಕ್ಕಾಗಿಯೇ ರಾಜ್ಯದ ಜನ ನಿಮಗೆ ಮತ ನೀಡಿದ್ದು?

ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕರಾವಳಿ ಭಾಗದಲ್ಲಿ ಸರಿಯಾದ ರೀತಿಯಾದ ಚರಂಡಿ ವ್ಯವಸ್ಥೆ ಮಾಡಿಲ್ಲ ಹಾಗೂ ರಸ್ತೆಯ ಕಾಮಗಾರಿ ಸಹ ಸರಿಯಾದ ರೀತಿಯಲ್ಲಿ  ನಡೆದಿಲ್ಲ. ಆದರೆ ನಿಮಗೆ ಈ ಮಹಾ ಮಳೆಯ ಬಗ್ಗೆ ಮುನ್ಸೂಚನೆ ಸಿಕ್ಕ ಕೂಡಲೇ ಕತ್ತೆ ಹಂಚಿಕೆಯ ವಿಷಯ ತೊರೆದು ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದರೆ ಇಂದು ನಾವು ಅಣ್ಣ ತಮ್ಮ ತಂಗಿ ಎಂದು ಕರೆಯುವ ಸಂಭಂದಿಗಳನ್ನು ಕಳೆದು ಕೊಳ್ಳುವ ಪರಿಸ್ಥಿತಿಯನ್ನು ಎದುರಿಸಬೇಕಾದ ಸಂದರ್ಭ ಬರುತ್ತಿರಲಿಲ್ಲ.

ವಿದೇಶಿ ಪ್ರವಾಸದಲ್ಲಿರುವ ಮೋದಿರವರು ಕೂಡ ನಮ್ಮ ಬಗ್ಗೆ ಕಾಳಜಿ ತೋರಿಸಿ ಅಧಿಕಾರಿಗಳಿಗೆ ಆದೇಶವನ್ನು ನೀಡಿದ್ದಾರೆ, ತಾವು ಏನು ಮಾಡಿದ್ದೀರಾ? ಎಂದು ಕೇಳಬಹುದೇ? ಕೇಳುತ್ತೇನೆ, ಯಾಕೆಂದರೆ ನಾನು ಪ್ರಜೆ, ಇರುವುದು ಹೆಮ್ಮೆಯ ಭಾರತದಲ್ಲಿ , ಪ್ರಜಾಪ್ರಭುತ್ವದ ದೇಶವಿದು. ನಿಮಗೆ ಮತ ನೀಡಿದ ಪ್ರತಿಯೊಬ್ಬರು ಕೊರಗುವಂತೆ ಮಾಡಬೇಡಿ, ದಯವಿಟ್ಟು ನಮ್ಮ ಕೂಡ ಕಡೆ ಸ್ವಲ್ಪ ಗಮನ ಹರಿಸಿ.

ಜನರು ನಿಮ್ಮ ಲಕ್ಷ ಲಕ್ಷ ಪರಿಹಾರಕ್ಕಾಗಿ ಎದುರು ನೋಡುತಿಲ್ಲ ಕೇವಲ ಕಷ್ಟಕ್ಕೆ ಹೆಗಲು ಕೊಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.ಈಗಲಾದರೂ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದನ್ನು ನಿಲ್ಲಿಸಿ ದಯವಿಟ್ಟು ಕರಾವಳಿ ಭಾಗದ ಜನರಿಗೆ ಬೆಂಬಲ ನೀಡಿ, ಜನರ ಕಣ್ಣೀರನ್ನು ತಪ್ಪಿಸಿ.

ಇಂತಿ: ಪ್ರತಾಪ್

ನೋಡಿದಿರಲ್ಲ ಈ ಯುವಕನ ನೊಂದ ಮಾತುಗಳು ಪ್ರತಿಯೊಬ್ಬರನ್ನು ಅಣ್ಣ ತಂಗಿ ಸಂಬಂಧಿಗಳೆಂದು ಕರೆದ ಮಾತುಗಳು ನನಗೆ ಇಷ್ಟವಾಯಿತು. ಮಾನ್ಯ ಮುಖ್ಯ ಮಂತ್ರಿಗಳಲ್ಲಿ ಒಂದೇ ಒಂದು ಕೋರಿಕೆ ದಯವಿಟ್ಟು ಕರಾವಳಿ ಜನರ ಕಷ್ಟಕ್ಕೆ ಹೆಗಲು ಕೊಡಿ, ನಿಮ್ಮ ಲಕ್ಷ ಲಕ್ಷ ಪರಿಹಾರವೇನು ಬೇಡ.

ಶೇರ್ ಮಾಡಿ ಪ್ರತಿಯೊಬ್ಬರಿಗೂ ತಿಳಿಯಲಿ

Comments (0)
Add Comment