ಮೋದಿ ಸರ್ಕಾರದ ೪ ವರ್ಷಗಳ ಸಾಧನೆಯನ್ನು ಅಮಿತ್ ಶಾ ವಿವರಿಸಿದ್ದನ್ನು ನೋಡಿ

ಮೋದಿ ಸರ್ಕಾರಕ್ಕೆ ನಾಲ್ಕು ವರ್ಷ ತುಂಬಿರುವುದು ತಿಳಿದಿರುವ ವಿಷಯ. ವಿರೋಧ ಪಕ್ಷಗಳು ಸರ್ಕಾರ ಯಾವುದೇ ಸಾಧನೆ ಮಾಡಿಲ್ಲ ಎಂದು ಹೇಳುತ್ತಿದ್ದರೆ ಆದರೆ ಅಮಿತ್ ಶಾ ಸರ್ಕಾರದ ಸಾಧನೆಗಳನ್ನು ಅವರ ಮಾತಿನ ಘಾಟಿಯಲ್ಲೇ ತಿಳಿಸಿದ್ದಾರೆ. ಒಮ್ಮೆ ಓದಿ ಅಮಿತ್ ಶಾ ರವರ ಮಾತುಗಳಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಅಭಿಪ್ರಾಯ ತಿಳಿಸಿ.

“ಬಿಜೆಪಿಯು ದಣಿವರಿಯದೆ ಕೆಲಸ ಮಾಡುವ ಮತ್ತು ಜಗತ್ತಿನ ಅತ್ಯಂತ ಜನಪ್ರಿಯ ಪ್ರಧಾನಿಯನ್ನು ದೇಶಕ್ಕೆ ನೀಡಿದೆ” ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದರು.

“ದಿನಕ್ಕೆ 15-18 ಗಂಟೆ ಕೆಲಸ ಮಾಡುವ ಪ್ರಧಾನಿ ಅವರು. ಈ ಪ್ರಧಾನಿ ಬಿಜೆಪಿಯ ನಾಯಕ ಎನ್ನಲು ನಮಗೆ ಹೆಮ್ಮೆಯಾಗುತ್ತದೆ” ಎಂದು ಮೋದಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಉಗ್ರರ ನುಸುಳಿಯುವಿಕೆಯನ್ನು ತಡೆಯಲು ಕೈಗೊಂಡ ಕ್ರಮಗಳು ಯಶಸ್ವಿಯಾಗಿವೆ. ಅತಿ ಹೆಚ್ಚು ಉಗ್ರರು ಹತರಾಗಿರುವುದು ಮೋದಿ ಸರ್ಕಾರದ ಅವಧಿಯಲ್ಲೇ ಎಂದು ತಿಳಿಯಿರಿ.

ಭ್ರಷ್ಠರ ಕಾಲು ಮುರುಯುವಂತೆ ಮಾಡಿದ ನಿರ್ಧಾರಗಳನ್ನು ಹೇಳುವ ಅಗತ್ಯವಿಲ್ಲ ಅದು ಎಲ್ಲರಿಗೆ ತಿಳಿದಿದೆ ಎಂದರು.

ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಜಗತ್ತಿನಲ್ಲೇ ಮುಂದಿರುವುದು ಭಾರತ ಅದಕ್ಕೆ ಮೋದಿ ಕಾರಣವೇ ಹೊರತು ಯಾವುದೇ ವಿರೋಧ ಪಕ್ಷದವರಲ್ಲ ಎಂಬುದು ನೆನಪಿರಲಿ.

 

Comments (0)
Add Comment