ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಮತ ಸಾಧ್ಯತೆ

ಹೌದು, ನೀವು ಓದುತ್ತಿರುವುದು ನಿಜ. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ನಿರ್ಧಾರ ಮಾಡಿ ಅಧಿಕಾರಕ್ಕೆ ಏರುತ್ತಿದ್ದಾರೆ. ಆದರೆ ಇನ್ನು ಸರ್ಕಾರವೇ ರಚನೆ ಆಗಿಲ್ಲ ಇಷ್ಟರಲ್ಲಾಗಲೇ ಭಿನ್ನಮತಗಳು ಸೃಷ್ಟಿ ಆಗಿವೆ.

ಚುನಾವಣೆ ಫಲಿತಾಂಶ ಹೊರಬರಲು ಇನ್ನು ಕೆಲವು ಗಂಟೆಗಳು ಬಾಕಿ ಇರುವಾಗ ಕಾಂಗ್ರೆಸ್ ಕುಮಾರಸ್ವಾಮಿರಾವರಿಗೆ ಬೆಂಬಲ ನೀಡುವುದಾಗಿ ಘೋಷಿಸಿ, ಬಿ ಜೆ ಪಿ ಗೆ ದೊಡ್ಡ ಶಾಕ್ ನೀಡಿತ್ತು. ಬಿ ಜೆ ಪಿ ಪಕ್ಷವು ಸಹ ಜೆಡಿಎಸ್ ಮೈತ್ರಿಗೆ ಪ್ರಯತ್ನಪಟ್ಟಿದ್ದು ಸುಳ್ಳಲ್ಲ.

ಆದರೆ ಕಾಂಗ್ರೆಸ್ ನೀಡಿದಷ್ಟು ಆಫರ್ ಗಳನ್ನೂ ಬಿಜೆಪಿ ಪಕ್ಷವು ನೀಡಲಿಲ್ಲ ಎಂಬುದು ತಿಳಿದಿರುವ ವಿಷಯ ಮತ್ತು ಬಿಜೆಪಿ ಪಕ್ಷಕ್ಕಿಂತ ಕಾಂಗ್ರೆಸ್ ಮುಂದಾಲೋಚನೆ ಮಾಡಿ ಬೆಂಬಲ ಘೋಷಿಸಿ ಸರ್ಕಾರ ರಚನೆ ಮಾಡಲು ನಿರ್ಧರಿಸಿತ್ತು.

ಮೈತ್ರಿಯ ಮೂಲಕ ಸರ್ಕಾರ ರಚಿಸಿ ಕುಮಾರಸ್ವಾಮಿರವರಿಗೆ 5 ವರ್ಷಗಳ ಕಾಲ ಮುಖ್ಯ ಮಂತ್ರಿ ಹುದ್ದೆಯನ್ನು ಬಿಟ್ಟು ಕೊಡುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ ಇನ್ನು ಅಧಿಕಾರದ ಗದ್ದುಗೆ ಏರುವ ಮುಂಚೆಯೇ ಕಾಂಗ್ರೆಸ್ ಜೆಡಿಎಸ್ ಗೆ ಶಾಕ್ ನೀಡಿದೆ.

ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕುಮಾರ ಸ್ವಾಮಿ 5 ವರ್ಷ ಮುಖ್ಯಮಂತ್ರಿ ಎಂಬ ಸೂತ್ರದಿಂದ ಕಾಂಗ್ರೆಸ್ ಹಿಂದೆ ಸರಿದಿದ್ದು, ತಲಾ ಎರಡೂ ವರೆ ವರ್ಷಗಳ ಕಾಲ ಮುಖ್ಯ ಮಂತ್ರಿ ಹುದ್ದೆಯನ್ನು ಉಭಯ ಪಕ್ಷಗಳು ಹಂಚಿಕೊಳ್ಳುವ ಹೊಸ ಸೂತ್ರವನ್ನು ಮೈತ್ರಿ ಪಕ್ಷ ಜೆಡಿಎಸ್‌ನ ಮುಂದಿಡಲಿದೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.

ಸಮ್ಮಿಶ್ರ ಸರ್ಕಾರದಲ್ಲಿ ಮೊದಲು ಮುಖ್ಯಮಂತ್ರಿ ಹುದ್ದೆ ಕುಮಾರಸ್ವಾಮಿ ಅವರಿಗೆ ಎಂಬುದಕ್ಕೆ ಮಾತ್ರ ಒಪ್ಪಿಕೊಳ್ಳಲಾಗಿತ್ತು.ಸಂಖ್ಯಾಬಲದಲ್ಲಿ ಜೆಡಿಎಸ್‌ಗಿಂತ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಕೋಮುವಾದಿ ಶಕ್ತಿಗಳನ್ನು ದೂರವಿಡ ಬೇಕು ಎಂಬ ಕಾರಣಕ್ಕೆ ಜೆಡಿಎಸ್‌ಗೆ ಮೊದಲ ಅವಧಿಗೆ ಸಿಎಂ ಹುದ್ದೆ ನೀಡಲು ಒಪ್ಪಿದೆ. ಆದರೆ, ಅದು ಪರಿ ಪೂರ್ಣ 5 ವರ್ಷಗಳಿಗೆ ಎಂದೇನೂ ಚರ್ಚೆ ವೇಳೆ ಬಂದಿ ರಲಿಲ್ಲ. ಸಹಜವಾಗಿಯೇ ಕಾಂಗ್ರೆಸ್ 2 ನೇ ಅವಧಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಯಸುತ್ತದೆ. ಎಂದು ಕಾಂಗ್ರೆಸ್ ನ ಉನ್ನತ ನಾಯಕರೊಬ್ಬರು ಕನ್ನಡ ಪ್ರಭ ಪತ್ರಿಕೆಗೆ ತಿಳಿಸಿದ್ದಾರೆ.

ಇದಕ್ಕೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Comments (0)
Add Comment