ಅಭಿಮಾನಿಗಳಿಗೆ ಕರೆ ನೀಡಿದ ಬಿ ಸ್ ವೈ. ಒಮ್ಮೆ ಓದಿ ಸಿದ್ಧರಾಗಿ

ಬೆಂಗಳೂರು, ಮೇ 19-ಶೇಕಡ ನೂರಕ್ಕೆ ನೂರರಷ್ಟು ಬಹುಮತ ಸಾಬೀತು ಪಡಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಮ್ಮ ಸರ್ಕಾರ ಉಳಿಯುತ್ತದೆ. ನಮ್ಮ ಕಾರ್ಯಕರ್ತರು ಸಂಜೆ ವಿಜಯೋತ್ಸವ ಆಚರಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅತ್ಯಂತ ಆತ್ಮವಿಶ್ವಾಸದಿಂದ ಹೇಳಿದರು. ಇಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಾಸ ಮತದಲ್ಲಿ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಂಜೆ 5 ಗಂಟೆ ನಂತರ ನಮ್ಮ ಕಾರ್ಯಕರ್ತರು ರಾಜ್ಯಾದ್ಯಂತ ವಿಜಯೋತ್ಸವ ಆಚರಿಸಿ ಎಂದು ಹೇಳಿದರು.

ಬಹುಮತ ಪಡೆಯಲು ರಾಜ್ಯಪಾಲರಿಂದ 15 ದಿನಗಳ ಕಾಲಾವಕಾಶ ಪಡೆದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟ್ ನಿರ್ದೇಶ ನದ ಹಿನ್ನೆಲೆಯಲ್ಲಿ ಇಂದು ಸಂಜೆ 4 ಗಂಟೆಗೆ ಬಹುಮತ ಸಾಬೀತುಪಡಿಸುವ ಸನ್ನಿವೇಶ  ಎದುರಾಗಿದ್ದರೂ ಬಿಜೆಪಿ ಪಾಳೆಯದಲ್ಲಿ ಮಾತ್ರ ಗೆಲುವಿನ ವಿಶ್ವಾಸ ಕಡಿಮೆಯಾಗಿಲ್ಲ.

ಬಹುಮತ ಸಾಬೀತಾಗುತ್ತಿದ್ದಂತೆ ಸಚಿವ ಸಂಪುಟ ಸಭೆ ಕರೆದು ರೈತರ ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ 1 ಲಕ್ಷದವರೆಗಿನ ಬೆಳೆ ಸಾಲಮನ್ನಾ, ಭಾಗ್ಯಲಕ್ಷ್ಮಿ ಬಾಂಡನ್ನು 2 ಲಕ್ಷ ರೂ. ಗಳಿಗೆ ಹೆಚ್ಚಳ, ನೇಕಾರರ ಸಾಲ ಮನ್ನಾ, ನೀರಾವರಿಗೆ ಒಂದೂವರೆ ಲಕ್ಷ ಕೋಟಿ ರೂ. ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದೇನೆ ಎಂದು ಹೇಳಿದರು. ಸುಪ್ರೀಂಕೋರ್ಟ್ ತೀರ್ಮಾನದಂತೆ ವಿಶ್ವಾಸ ಮತ ಯಾಚನೆ ಮಾಡುತ್ತೇವೆ. ಹೇಗೆ ಗೆಲ್ಲುತ್ತೇವೆ ಎಂಬುದನ್ನು ಕಾದು ನೋಡಿ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

bjpbsykarnatakamodi
Comments (0)
Add Comment