ಕಾಂಗ್ರೆಸ್ ಮುಕ್ತ ಭಾರತ ಮಾಡುವ ಬಿಜೆಪಿ ಕನಸು ನನಸಾಗುತ್ತಿದೆ. ಭಾರತದ 21 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ 22ನೇ ರಾಜ್ಯವಾದ ಕರ್ನಾಟಕದಲ್ಲಿಯೂ ಕೂಡ ಕಮಲ ಅರಳಿಸಲು ಸಜ್ಜಾಗಿದೆ.
ಈ ಮೂಲಕ ದೇಶದಾದ್ಯಂತ ಕಮಲ ಪಕ್ಷವು ಅಶ್ವಮೇಧ ಯಾಗವನ್ನು ಕೈಗೊಂಡು ಕೈ ವಶದಲ್ಲಿದ್ದ ರಾಜ್ಯಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ.
ಕರ್ನಾಟಕದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸದ್ಯ ಇಲ್ಲಿಯೂ ಕೂಡ ತನ್ನ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತ.
ಪುದುಚೆರಿ ಹಾಗೂ ಪಂಜಾಬ್ ನಲ್ಲಿ ಮಾತ್ರವೇ ಸದ್ಯ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ದೇಶದೆಲ್ಲೆಡೆ ಮೋದಿ ಅಲೆಯು ಹೆಚ್ಚಾಗಿದ್ದು, ಕರ್ನಾಟಕದಲ್ಲಿಯೂ ಕೂಡ ಗಾಳಿ ಬಲವಾಗಿ ಬೀಸಿದೆ.22ನೇ ರಾಜ್ಯವಾದ ಕರ್ನಾಟಕದಲ್ಲಿ ಕಮಲ ಪಾಳಯ ಆಡಳಿತ ನಡೆಸುವ ವಿಶ್ವಾಸದಲ್ಲಿದ್ದು, ನಾಯಕರು ಈ ನಿಟ್ಟಿನಲ್ಲಿ ಹೆಚ್ಚಿನ ಭರವಸೆ ಹೊಂದಿದ್ದಾರೆ.
ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಪಟ್ಟಿ
- ಅರುಣಾಚಲ ಪ್ರದೇಶ
- ಅಸ್ಸಾಂ
- ಬಿಹಾರ
- ಚತ್ತೀಸ್ ಗಢ
- ಗೋವಾ
- ಗುಜರಾತ್
- ಹರ್ಯಾಣ
- ಹಿಮಾಚಲ ಪ್ರದೇಶ
- ಜಮ್ಮು ಕಾಶ್ಮೀರ
- ಜಾರ್ಖಂಡ್
- ಮಧ್ಯ ಪ್ರದೇಶ
- ಮಹಾರಾಷ್ಟ್ರ
- ಮಣಿಪುರ
- ರಾಜಸ್ಥಾನ
- ಉತ್ತರ ಪ್ರದೇಶ
- ಉತ್ತರಾಖಂಡ್
- ನಾಗಾಲ್ಯಾಂಡ್
- ತ್ರಿಪುರ
- ಮೇಘಾಲಯ
ಮತ ಎಣಿಕೆ ಕಾರ್ಯ ಭರದಿಂದ ಸಾಗುತ್ತಿದ್ದು ಸದ್ಯದ ವರದಿಗಳ ಪ್ರಕಾರ ಬಿಜೆಪಿ ಮ್ಯಾಜಿಕ್ ನಂ ತಲುಪಿದೆ. ಸ್ವತಂತ್ರ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಿಎಸ್ ವೈರನ್ನು ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ. ಇಂದು ಸಂಜೆ ಬಿಎಸ್ ವೈ ದೆಹಲಿಗೆ ತೆರಳದ್ದಾರೆ. ಪ್ರಮಾಣ ವಚನಕ್ಕೆ ದಿನಾಂಕವನ್ನು ಫಿಕ್ಸ್ ಮಾಡಲಿದ್ದಾರೆ. ಮುಂದಿನ ರಾಜಕೀಯ ನಡೆಗಳ ಬಗ್ಗೆ ಅಮಿತ್ ಶಾ ಜೊತೆ ಚರ್ಚಿಸಲಿದ್ದಾರೆ.