ಈ ಮಹತ್ವದ ನಿರ್ಧಾರದಿಂದ ಖಾಸಗಿ ಶಾಲೆಗಳಿಗೆ ಬಿಗ್ ಶಾಕ್ ಕೊಡಲು ಮುಂದಾದ ಯೋಗಿ ಸರ್ಕಾರ..!!

ಖಾಸಗಿ ಶಾಲೆಗಳು ಎಂದರೆ ಸಾಕು ಅಲ್ಲಿ ಮಕ್ಕಳನ್ನು ಸೇರಿಸಲು ಲಕ್ಷ ಲಕ್ಷ ಬೇಕು, ಖಾಸಗಿ ಶಾಲೆಗಳ ಶುಲ್ಕ ಸರ್ಕಾರಿ ಶಾಲೆಗಳಿಗಿಂತ ದುಪ್ಪಟ್ಟು‌‌. ಶಾಲೆಗಳು ವಿದ್ಯಾದಾನ ಮಾಡಲು ನಡೆಸುತ್ತಾರೋ ಅಥವಾ ಅದೊಂದು ಉದ್ಯಮವೋ? ಎಂಬ ಪ್ರಶ್ನೆ ಎಲ್ಲರಿಗೂ ಮುಡುತ್ತದೆ.

ದಿನ ದಿನಕ್ಕೆ ಖಾಸಗಿ ಶಾಲೆಗಳು ಶುಲ್ಕಗಳ ಹೆಸರಿನಲ್ಲಿ ಮಕ್ಕಳ ಹೆತ್ತವರನ್ನು ಸುಲಿಗೆ ಮಾಡುವ ಕೆಟ್ಟ ಸಂಸ್ಕೃತಿಗೆ ಹೆಚ್ಚಾಗುತ್ತಿದೆ. ಇದನ್ನ ಕಡಿವಾಣ ಹಾಕಲು ನಿರ್ಧರಿಸಿರುವ ಉತ್ತರ ಪ್ರದೇಶ ಸರಕಾರ.ಈ ಮಹತ್ವದ ನಿರ್ಧಾರದಿಂದ ಖಾಸಗಿ ಶಾಲೆಗಳಿಗೆ ಬಿಸಿ ಮುಟ್ಟಿಸಲು ಹೊರಟಿದೆ ಯೋಗಿ ಸರ್ಕಾರ..!!

ಅಷ್ಟಕು ಏನದು ಮಹತ್ವದ ನಿರ್ಧಾರ..!!

ಸದ್ಯದಲ್ಲೇ ಖಾಸಗಿ ಶಾಲೆಗಳ ಶುಲ್ಕವನ್ನು ಸರಕಾರವೇ ನಿಗದಿಗೊಳಿಸುವ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಿದೆ. “ಸ್ವವಿತಾ ಪೋಷಿತ್‌ ಸ್ವತಂತ್ರ ವಿದ್ಯಾಲಯ (ಶುಲ್ಕ ನಿರ್ಧರಣ್‌) ಅಧ್ಯಾದೇಶ್‌-2018′ ಎಂಬ ಹೆಸರಿನ ಈ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅನುಮತಿ ಸಿಕ್ಕರೆ, ಆ ರಾಜ್ಯದಲ್ಲಿ ವಿದ್ಯಾರ್ಥಿ ಗಳಿಂದ ವರ್ಷಕ್ಕೆ ಕನಿಷ್ಟ 20 ಸಾವಿರ ರೂ.ಗಳಷ್ಟು ಶುಲ್ಕವನ್ನು ವಸೂಲಿ ಮಾಡುತ್ತಿರುವ ಖಾಸಗಿ ಶಾಲೆಗಳಿಗೆ ಕಡಿವಾಣ ಬೀಳಲಿದೆ.

ರಾಜ್ಯದ ಪ್ರತಿ ವಲಯದಲ್ಲಿಯೂ ಶುಲ್ಕ ನಿಯಂತ್ರಣ ಸಮಿತಿಗಳು ಅಸ್ತಿತ್ವಕ್ಕೆ ಬರಲಿದ್ದು, ಆ ಸಮಿತಿಗಳು 1ನೇ ತರಗತಿಯಿಂದ ಪ್ರೌಢ ಶಾಲೆಗಳವರೆಗಿನ ಶಿಕ್ಷಣ ನೀಡುವ ಎಲ್ಲಾ ಶಿಕ್ಷಣ ಸಂಸ್ಥೆಗಳ ಶುಲ್ಕಗಳನ್ನು ನಿರ್ಧರಿಸುತ್ತವೆ, ಐಸಿಎಸ್‌ಇ ಪಠ್ಯಕ್ರಮ ಅಳವಡಿಸಿಕೊಂಡಿರುವ ಶಾಲೆಗಳು ಮಾತ್ರವಲ್ಲ, ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳೂ ಈ ಸಮಿತಿಗಳ ವ್ಯಾಪ್ತಿಯೊಳಗೆ ಬರಲಿವೆ.

ಈ ಸಮಿತಿಯಲ್ಲಿ ಶಿಕ್ಷಣ ತಜ್ಞರು ಸೇರಿದಂತೆ, ವಿದ್ಯಾರ್ಥಿಗಳ ಪೋಷಕರ ವಲಯದ ಪ್ರತಿನಿಧಿಗಳೂ ಸದಸ್ಯರಾಗಿ ಇರಲಿದ್ದಾರೆ. ಈ ಪ್ರಾದೇಶಿಕ ಸಮಿತಿಗಳಿಗೆ ಎಲ್ಲಾ ಖಾಸಗಿ ಶಾಲೆಗಳೂ ತಮ್ಮ ವಾರ್ಷಿಕ ಆದಾಯದ ವರದಿಯನ್ನು ಸಲ್ಲಿಸಬೇಕಿರುತ್ತದೆ. ವರದಿ ಸಲ್ಲಿಸುವಲ್ಲಿ ಮೊದಲ ಬಾರಿ ವಿಫ‌ಲವಾದರೆ, 1 ಲಕ್ಷ ರೂ., ಪುನಃ ಪುನಃ ವಿಫ‌ಲವಾದರೆ ಅಂಥ ಪ್ರತಿ ಸಂದರ್ಭದಲ್ಲಿಯೂ 5 ಲಕ್ಷ ರೂ. ದಂಡ ವಿಧಿಸುವ ಅಧಿಕಾರವನ್ನು ಸಮಿತಿಗೆ ನೀಡಲಾಗಿದೆ.

ಕೃಪೆ: ಉದಯ ವಾಣಿ

Comments (0)
Add Comment