ಸ್ಪೋಟಕ ಮಾಹಿತಿ: ಯೋಗಿ ಆದಿತ್ಯನಾಥ್ ಸಹೋದರಿಯ ಆಸ್ತಿ ಎಷ್ಟಿದೆ ಗೊತ್ತಾ..? ತಿಳಿದು ಬೆಚ್ಚಿಬೀಳ್ತೀರಾ ಹುಷಾರ್..!!

ಹೌದು!! ಈ ಕಾಲದಲ್ಲಿ ನಮಗೆ ಪರಿಚಯ ಇರುವ ವ್ಯಕ್ತಿಗಳು ಉತ್ತಮವಾದ ಹುದ್ದೆ ಹೊಂದಿದ್ದರೆ ನಾವು ಸಾಮಾನ್ಯವಾಗಿ ಗರ್ವದಿಂದ ಹೇಳಿಕೊಳ್ಳುತ್ತೇವೆ. ಅವರ ಸಹಾಯದಿಂದ ನಾವು ಏಳಿಗೆ ಕಾಣಲು ಬಯಸುತ್ತೇವೆ. ಹಾಗೆಯೇ ನಮ್ಮ ಜೀವನದ ಶೈಲಿ ಕೂಡ ಬದಲಾಗುತ್ತದೆ.

ನಾನು ನಿಮಗೆ ಹೇಳಲು ಹೊರಟಿರುವು ಒಂದು ಆದರ್ಶ ರಾಜಕಾರಣಿಯ ಕುಟುಂಬದ ಕಥೆ, ಹೌದು!! ನಮ್ಮ ಕುಟುಂಬದಲ್ಲಿ ಯಾರಾದರೂ ಮುಖ್ಯಮಂತ್ರಿ ಅಥವಾ ಮಂತ್ರಿ ಅಗಿದ್ದರೆ ನಾವು ಹಾಯ್ ಆಗಿ ಇರಲು ಬಯಸುತ್ತೇವೆ ಆದರೆ. ಆದರೆ ಅದು ತದ್ವಿರುದ್ಧವಾಗಿ ಇಲ್ಲಿ ಒಂದು ರಾಜ್ಯಕ್ಕೆ ಮುಖ್ಯಮಂತ್ರಿಯ ಸಹೋದರಿ ಇದ್ದರೆ.ಆ ಸಹೋದರಿ ಒಂದು ಪುಟ್ಟ ಟೀ ಸ್ಟಾಲ್ ಇಟ್ಟುಕೊಂಡು ಸರಳ ಜೀವನ ಸಾಗಿಸುತ್ತಿದ್ದಾರೆ.

ಸದ್ಯ ಉತ್ತರಪ್ರದೇಶ ರಾಜಕಾರಣದಲ್ಲಷ್ಟೇ ಅಲ್ಲ ಇಡೀ ಭಾರತದಾದ್ಯಂತ ಸೆಕ್ಯೂಲರ್ ಗಳ ಪಾಲಿಗೆ ನುಂಗಲಾರದ ತುತ್ತಾಗಿರುವ ಹಾಗೂ ರೌಡಿಗಳಿಗೆ ನಡುಕ ಹುಟ್ಟಿಸಿದವರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೋದರಿ ಶಶಿ ಪಾಲ್(ದೇವಿ).

ಈ ಹಿಂದೆ ಹಲವು ವರ್ಷಗಳ ಕಾಲ ಲೋಕಸಭಾ ಸದಸ್ಯರು ಆಗಿದ್ದರು ಮತ್ತು ಈಗ ಮುಖ್ಯಮಂತ್ರಿ ಹುದ್ದೆಯಲ್ಲಿದು 1 ವರ್ಷ ಕಳೆಯುತ್ತಿದ್ದರೂ ಯಾವುದೇ ಸ್ವಜನ ಪಕ್ಷಪಾತ ಮಡದೆ ಪ್ರಾಮಾಣಿಕತೆಯನ್ನು ಎತ್ತಿ ಹಿಡಿದಿದ್ದಾರೆ.

ತಮ್ಮ ಸೋದರಿ 23 ವರ್ಷಗಳಿಂದ ಉತ್ತರಾಖಂಡನಲ್ಲಿರುವ ಕೋಠಾರ್ ಗ್ರಾಮದಲ್ಲಿ ಸಾಮಾನ್ಯರಂತೆ ಇಂದಿಗೂ ಟೀ ಸ್ಟಾಲ್ ನಡೆಸುತ್ತಾ ಸಂಸಾರ ಸಾಗಿಸುತ್ತಿದ್ದಾರೆ.

ಶಶಿ ಪಾಲ್ ಪತಿಯೂ ಸಹಾ ಟೀ ಸ್ಟಾಲ್ ಬಳಿಯೇ ಚಿಕ್ಕದಾದ ಪೂಜಾ ಸಾಮಗ್ರಿ ಅಂಗಡಿ ಇಟ್ಟುಕೊಂಡಿದ್ದಾರೆ. ತಮ್ಮ ಅಣ್ಣ ಮುಖ್ಯಮಂತ್ರಿ ಆಗಿದ್ದರೂ ಆಡಂಬರದ ಜೀವನ ನಡೆಸದೆ ತುಂಬಾ ಸರಳವಾಗಿ ಜೀವನ ಸಾಗಿಸುತ್ತಿರುವ ಶಶಿಪಾಯಲ್ ಅವರನ್ನು ನೋಡಿದರೆ ಪ್ರತಿಯೊಬ್ಬರಿಗೂ ಹೆಮ್ಮೆ ಎನಿಸುತ್ತದೆ. ಇಂತಹ ಸರಳ ಜೀವನ ಸಾಗಿಸುವುವ ರಾಜಕಾರಣಿಯ ಕುಟುಂಬ ಅಪರೂಪ.

ಟೀ ಸ್ಟಾಲ್ ನಡೆಸುತ್ತಾ ಸಂಸಾರ ಸಾಗಿಸುತ್ತಿರುವ ಸಹೋದರಿ ಸಹ ಯೋಗಿ ಆದಿತ್ಯನಾಥ್ ಅವರಷ್ಟೇ ಸ್ವಾಭಿಮಾನಿಗಳಾಗಿರುವ ಇವರು ಯಾವುದೇ ಸಂದರ್ಭದಲ್ಲಿ ಯೋಗಿಯವರಿಂದ ಯಾವುದೇ ರೀತಿಯ ಸಹಾಯ ಪಡೆಯಲು ಹಸ್ತ ಚಾಚಿಲ್ಲ. ಯೋಗಿಯವರ ಸ್ಥಾನದ ದುರುಪಯೋಗದ ಮಾತು ಬಿಡಿ.ಉಪಯೋಗ ಸಹ ಮಾಡಿಕೊಂಡಿಲ್ಲ.

ಯೋಗಿಯವರ ಬಗ್ಗೆ ಎದುರಾಳಿಗಳು ರಾಜಕೀಯ ಕಾರಣಕ್ಕಾಗಿ ಪುಂಖಾನು ಪುಂಖವಾಗಿ ಅನವಶ್ಯಕ ಟೀಕೆಗಳನ್ನು ಮಾಡುತ್ತಿರುತ್ತಾರೆ. ಆದರೆ, ಯೋಗಿಯವರ ಪ್ರಾಮಾಣಿಕತೆ ಬಗ್ಗೆ ಮೆಚ್ಚುಗೆ ಬೇಡವೇ?

ಈ ಬರೆಹ ನನಗೆ ನನ್ನ ಆತ್ಮೀಯ ಮಿತ್ರರೊಬ್ಬರಿಂದ ಬಂದಿದ್ದು, ಅದನ್ನು ಸ್ವಲ್ಪ ಪರಿಷ್ಕರಿಸಿ ಹಾಗೂ ನನ್ನದೂ ಕೆಲವು ಶಬ್ದಗಳನ್ನು ಸೇರಿಸಿ ಬರೆದಿದ್ದೇನೆ. ಇದು ಸರಿ ಎನಿಸಿದರೆ, ದಯವಿಟ್ಟು ನಿಮ್ಮ ಆತ್ಮೀಯರಿಗೆ ಮುಂದುವರಿಕೆ ಮಾಡಿ. ಸ್ವಚ್ಛ ಆಡಳಿತ ನೀಡುವ ವ್ಯಕ್ತಿಗೆ ಬೆಂಬಲ ನೀಡಿ, ದೇಶ ಸೇವೆಗೆ ನಮ್ಮ ಅಳಿಲಸೇವೆ ಸಲ್ಲಿಸೋಣ! ಅಲ್ಲವೇ?

Comments (0)
Add Comment