ವಿಪಕ್ಷ ನಾಯಕನಾದರೂ ತಾನೊಬ್ಬ ಜನನಾಯಕ ಎಂಬುದನ್ನು ಸಾಬೀತು ಪಡಿಸಿದ ಬಿ ಎಸ್ ವೈ

ನೀವು ಸಾಮಾನ್ಯವಾಗಿ ವಿರೋಧ ಪಕ್ಷ ನಾಯಕರು ಎಂದರೆ ಸರ್ಕಾರದ ಯೋಜನೆಗಳಿಗೆ ಅದರ ಉಪಯೋಗಗಳನ್ನು ಅವಲೋಕಿಸಿ ಯೋಜನೆಗಳಿಗೆ ಬೆಂಬಲಿಸುವುದೇ ಬೇಡವೇ ಎಂಬುದನ್ನು  ನಿರ್ಧಾರ ತೆಗೆದುಕೊಳ್ಳುವವರು ಎಂದುಕೊಂಡಿದ್ದೀರಾ ಅಲ್ಲವೇ ? ಆದರೆ ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ನವರು ತಾವು ವಿರೋಧ ಪಕ್ಷದ ನಾಯಕನಾದರೂ ಸಹ ಜನಪರ ನಾಯಕ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇದನ್ನು ಯಾವ ಮೀಡಿಯಾಗಳು ಸಹ ತೋರಿಸುವುದಿಲ್ಲ ಒಮ್ಮೆ ಓದಿ ಶೇರ್ ಮಾಡಿ ಎಲ್ಲರಿಗೂ ತಲುಪಿಸಿ.

ಸಾಮಾನ್ಯವಾಗಿ ವಿಧಾನಸಭಾ ಕಲಾಪದಲ್ಲಿ ಮುಖ್ಯಮಂತ್ರಿಗಳು ಅಥವಾ ಅಧಿಕಾರದ ಪಕ್ಷದ ಸಂಸದರು ತಮ್ಮ ತಮ್ಮ ಯೋಜನೆಗಳ ಬಗ್ಗೆ ವಿವರವನ್ನು ನೀಡುತ್ತಿರುತ್ತಾರೆ. ವಿವರಗಳನ್ನು ಕೇಳಿದ ವಿರೋಧ ಪಕ್ಷದವರು ತಮ್ಮ ತಮ್ಮ ಅಭಿಪ್ರಾಯವನ್ನು ಮಂಡಿಸಿ ರುತ್ತಾರೆ, ಆದರೆ ಯಡಿಯೂರಪ್ಪನವರು ಕಳೆದ ವಿಧಾನಸಭಾ ಕಲಾಪದಲ್ಲಿ ಮಂಡಿಸಿದ ಯೋಜನೆಯ ವಿವರವನ್ನು ಕೇಳಿದರೆ ಅಧಿಕಾರದ ಪಕ್ಷವು ಯಾವುದೇ ತಕರಾರಿಲ್ಲದೆ ಒಪ್ಪಿಕೊಳ್ಳಬೇಕಿತ್ತು. ಯಾಕೆಂದರೆ ಯಡಿಯೂರಪ್ಪನವರು ಮಂಡಿಸಿದ ರೀತಿ ಮತ್ತು ವಿವರಗಳನ್ನು ನೋಡಿದರೆ ಶಹಭಾಸ್ಎನ್ನಬೇಕಿತ್ತು. ಸಂಪೂರ್ಣ ಮಾತುಕತೆಯ ವಿವರವನ್ನು ಕೆಳಗಡೆ ತಿಳಿಸಲಾಗಿದೆ ದಯವಿಟ್ಟು ಸಂಪೂರ್ಣ ಓದಿ.

ಅಷ್ಟಕ್ಕೂ ಯಾವುದು ಆ ಯೋಜನೆ?

ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಯಡಿಯೂರಪ್ಪನವರು ಕೃಷ್ಣ ಮೇಲ್ದಂಡೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಬೇಕಾಗಿರುವ ಆರ್ಥಿಕ ಸಂಪನ್ಮೂಲ ಸಂಗ್ರಹಿಸಲು ನೀರಾವರಿ ಬಾಂಡ್ ತಂದರೆ ಸಹಕಾರ ಕೊಡುವುದಾಗಿ ಭರವಸೆ ನೀಡಿದರು.  ಇದೇ ವೇಳೆ ಕಾಂಗ್ರೆಸ್ ಸರ್ಕಾರದ ಮೇಲೆ ಹರಿಹಾಯ್ದ ಯಡಿಯೂರಪ್ಪನವರು ಕಳೆದ ಐದು ವರ್ಷಗಳಲ್ಲಿ ವಾರ್ಷಿಕ ಹತ್ತು ಸಾವಿರ ಕೋಟಿಯಂತೆ 50 ಕೋಟಿ ಖರ್ಚು ಮಾಡಬೇಕಿತ್ತು. ಆದರೆ ಕೇವಲ ಎಂಟೂವರೆ ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಇದೇ ರೀತಿ ಮುಂದುವರೆದರೆ 25 ವರ್ಷವಾದರೂ ಯೋಜನೆಗಳನ್ನು ಪೂರ್ಣಗೊಳಿಸಿ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇತರೆ ಯೋಜನೆಗಳನ್ನು ನಿಲ್ಲಿಸಿಯಾದರೂ ಈ ಯೋಜನೆಗಳನ್ನು ಪೂರ್ಣಗೊಳಿಸಬೇಕು. ನೆರೆಯ ರಾಜ್ಯದವರು ನೀರಿನ ಸದ್ಬಳಕೆ ಮಾಡಿಕೊಂಡಿದ್ದಾರೆ. ನಮ್ಮ ರಾಜ್ಯದಲ್ಲಿ ನಮ್ಮ ಪಾಲಿನ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡಿಲ್ಲ.

ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ಮಾಡುವ ಅಗತ್ಯವಿದೆ ಎಂದು ಸಲಹೆ ಮಾಡಿದರು. ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ನೀರಾವರಿ ಯೋಜನಗಳನ್ನು ಪೂರ್ಣಗೊಳಿಸಲು ರಾಜಕೀಯ ಇಚ್ಛಾಶಕ್ತಿ ಬೇಕು. ಮುಖ್ಯಮಂತ್ರಿ ನೇತೃತ್ವದಲ್ಲಿ ನೀರಾವರಿಗೆ ಸಂಬಂಧಪಟ್ಟ ಉನ್ನತ ಮಟ್ಟದ ಸಭೆಗಳು ಎಷ್ಟು ಬಾರಿ ನಡೆಸಲಾಗಿದೆ, ಎಷ್ಟು ನಿಖರ ತೀರ್ಮಾನ ಮಾಡಲಾಗಿದೆ ಎಂಬುದನ್ನು ಹೇಳಬೇಕು.

ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳದೆ, ಮುಳುಗಡೆ ಪ್ರದೇಶಗಳ ಸ್ಥಳಾಂತರವಾಗದೆ ಜನರು ಮಹಾರಾಷ್ಟ್ರ, ಗೋವಾ, ಬೆಂಗಳೂರಿಗೆ ಗುಳೇ ಹೋಗುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಗೋವಿಂದ ಕಾರಜೋಳ ತಿಳಿಸಿದರು. ದೇಶಕ್ಕಾಗಿ ಭೂಮಿ ತ್ಯಾಗ ಮಾಡಿದವರಿಗೆ ಬದುಕು ಕಟ್ಟಿಕೊಡುವ ಕೆಲಸ ಆಗುತ್ತಿಲ್ಲ ಎಂದಾಗ, ಈಗಿನ ಪರಿಸ್ಥಿತಿಯಲ್ಲಿ ಏನುಮಾಡಬಹುದು ಹೇಳಿ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರೋಧ ಪಕ್ಷದ ಸಲಹೆ ಕೇಳಿದರು.

ಮತ್ತೆ ಮಾತು ಮುಂದುವರೆಸಿದ ಗೋವಿಂದ ಕಾರಜೋಳ ಅವರು, ಹಿಂದಿನ ಸರ್ಕಾರ ಜಲಸಂಪನ್ಮೂಲ ಸಚಿವರು ನಾರ್ವೆ ಮಾದರಿಯಲ್ಲಿ ತಡೆಗೋಡೆ ನಿರ್ಮಿಸಿ ಮುಳುಗಡೆ ಗ್ರಾಮಗಳನ್ನು ಸ್ಥಳಾಂತರಿಸುವುದಿಲ್ಲ ಎಂದು ಹೇಳಿದ್ದರು. ಅದು ಸಾಧ್ಯವಾಗುವುದಿಲ್ಲ. ಮುಳುಗಡೆ ಗ್ರಾಮಗಳನ್ನು ಸ್ಥಳಾಂತರ ಮಾಡಿ ಪುನರ್ವಸತಿ ಕಲ್ಪಿಸಬೇಕು. ನಮಗೆ ನಾರ್ವೆ ಮಾದರಿ ಬೇಡ, ಆಲಮಟ್ಟಿ ಮಾದರಿ ಬೇಕು ಎಂದರು.

ಇದಕ್ಕೆ ದನಿಗೂಡಿಸಿದ ಬಸವರಾಜ ಬೊಮ್ಮಾಯಿ ಅರ್ಕಾವತಿಯನ್ನು ಥೇಲ್ಸ್ ನದಿ ಮಾದರಿಯಲ್ಲಿ ಪುನರುಜ್ಜೀವನ ಗೊಳಿಸುವುದಾಗಿ ಹೇಳಿದ್ದರು. ನಾರ್ವೆ ಮಾದರಿಯೂ ಇಲ್ಲ, ಥೇಲ್ಸ್ ಮಾದರಿಯೂ ಇಲ್ಲ. ಈ ಮುಳುಗಡೆ ಪ್ರದೇಶಗಳಿಗೆ ಆಲಮಟ್ಟಿ ಮಾದರಿಯಲ್ಲಿ ಪುನರ್ವಸತಿ, ಪುನರ್‍ನಿರ್ಮಾಣ ಮಾಡಿದರೆ ಸಾಕು ಎಂದು ಹೇಳಿದರು.

ಈ ವಿವರಗಳನ್ನು ಕೇಳಿ ಅಧಿಕಾರ ಪಕ್ಷದ ನಾಯಕರು ದಂಗಾಗಿ ಕುಳಿತರು. ಒಟ್ಟಿನಲ್ಲಿ ಯಡಿಯೂರಪ್ಪನವರು ಈ ಯೋಜನೆಯ ವಿವರಗಳನ್ನು ನೀಡಿದ್ದರಿಂದ ರಾಜ್ಯ ಸರ್ಕಾರವು ಇತ್ತ ಗಮನಹರಿಸಲು ಸೂಚನೆ ನೀಡಿದೆ, ಒಂದು ವೇಳೆ ಇವರ ಇಚ್ಚೆಯಂತೆ ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣಗೊಂಡಿದ್ದಲಿ ಹಲವಾರು ಜಿಲ್ಲೆಗಳ ರೈತರ ಮೊಗದಲ್ಲಿ ಸಂತಸ ಮೂಡಲಿದೆ.ದುಃಖದ ಸಂಗತಿ ಏನೆಂದರೆ ಇಷ್ಟೆಲ್ಲಾ ವಿಷಯವನ್ನು ಯಾವುದೇ ಮೀಡಿಯಾ ಸಹ ತೋರಿಸಿಲ್ಲ ಬದಲಾಗಿ ಯಾವುದೇ ಕ್ರಿಮಿನಲ್ ಪ್ರಕರಣಗಳನ್ನು ತೋರಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ.

bsyKarnataka BJP
Comments (0)
Add Comment