TVS Apache RTR 310: ಇತ್ತೀಚಿಗೆ ಲಾಂಚ್ ಆಗಿರುವ TVS Apache RTR 310 ನಲ್ಲಿ ಏನೆಲ್ಲಾ ಇದೆ ಬೆಲೆ ಎಷ್ಟು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

TVS Apache RTR 310: ನಮಸ್ಕಾರ ಸ್ನೇಹಿತರೇ, ನಮ್ಮ ಭಾರತದ ವಾಹನ ಮಾರಾಟ ಕ್ಷೇತ್ರದಲ್ಲಿ ಕಳೆದ ಕೆಲವು ವರ್ಷಗಳಿಂದಲೂ ಕೂಡ ಗ್ರಾಹಕರ ಸಂಖ್ಯೆ ಹೆಚ್ಚಿದ್ದು ಜಾಗತಿಕವಾಗಿ ಕೂಡ ಈ ವೇಗ ಎನ್ನುವುದು ಮೆಚ್ಚುಗೆಗೆ ಒಳಗಾಗಿದೆ. ಇನ್ನು ಈಗ TVS ಹಾಗೂ BMW ಸಹಭಾಗಿತ್ವದಲ್ಲಿ ಮಾರುಕಟ್ಟೆಗೆ ಇಂದು ಲಾಂಚ್ ಆಗಿರುವಂತಹ TVS Apache RTR 310 ಬೈಕ್ ಬಗ್ಗೆ ಕೆಲವೊಂದು ಪ್ರಮುಖ ವಿಚಾರಗಳನ್ನು ಕೂಡ ನೀವು ತಿಳಿದುಕೊಳ್ಳಬೇಕಾಗಿದ್ದು ಬನ್ನಿ ಈ ಬೈಕಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

TVS Apache RTR 310 BS6:Price, Mileage, Images, Colors Explained in Kannada news by best automobile news team.

TVS Apache RTR 310 ಬೈಕಿನ ಡಿಸೈನ್.
TVS Apache RTR 310 ಬೈಕನ್ನು ಫುಲ್ ಸ್ಪೋರ್ಟ್ಸ್ ಬೈಕ್ ಲುಕ್ ನಲ್ಲಿ ಡಿಸೈನ್ ಮಾಡಲಾಗಿದೆ. ಇದರ ಲುಕ್ ಸಂಪೂರ್ಣವಾಗಿ ಅಗ್ರೆಸ್ಸಿವ್ ಆಗಿ ಕಾಣಿಸಿಕೊಳ್ಳಲಿದೆ. ಇದರ ಮೇಲೆ ಇರುವಂತಹ ಫ್ಯೂಲ್ ಟ್ಯಾಂಕ್ ಕಾರಣದಿಂದಾಗಿ ಕೂಡ ಇದು ಸಾಕಷ್ಟು ಮಸ್ಕ್ಯುಲರ್ ಆಗಿ ಕಾಣಿಸಿಕೊಳ್ಳುತ್ತದೆ. ಇದರ ಮೇಲೆ ಅಗಲವಾದ ಹೆಡ್ ಲ್ಯಾಂಪ್ ಅನ್ನು ಕೂಡ ಅಳವಡಿಸಲಾಗಿದೆ. ಹಿಂಬದಿಯ ಸ್ವೀಟ್ ಶಾರ್ಪ್ ಆಗಿ ಕಾಣಿಸಿಕೊಳ್ಳಲಿದ್ದು ರೈಡರ್ ಸೀಟ್ ನಲ್ಲಿ ಸಾಕಷ್ಟು ಸ್ಪೇಸ್ ಅನ್ನು ಕೂಡ ನೀವು ಕಾಣಬಹುದಾಗಿದೆ.

TVS Apache RTR 310 ಇಂಜಿನ್ ಡೀಟೇಲ್ಸ್.
ಈ ಬೈಕಿನ ಇಂಜಿನ್ ಅಪಾಚೆ RR 310 ಹಾಗೂ BMW 310 ಅನ್ನು ಶೇರ್ ಮಾಡಿಕೊಂಡಿದೆ ಎಂದು ಹೇಳಬಹುದಾಗಿದೆ. 312.2cc ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಇಂಜಿನ್ ಅನ್ನು ನೀವು ಈ ಬೈಕಿನಲ್ಲಿ ಕಾಣಬಹುದಾಗಿದೆ. 9700rpm ನಲ್ಲಿ 33.5Bhp ಪವರ್ ಹಾಗೂ 7700rpm ನಲ್ಲಿ 27.3Nm ಟಾರ್ಕ್ಅನ್ನು ಜನರೇಟ್ ಮಾಡುತ್ತದೆ. ಟಿವಿಎಸ್ ಸಂಸ್ಥೆ ಇದರ ಟ್ಯೂನ್ ಮೇಲೆ ಕೂಡ ಬದಲಾವಣೆ ಮಾಡುವುದಕ್ಕೆ ಕೆಲಸವನ್ನು ಪ್ರಾರಂಭಿಸಬಹುದಾಗಿದೆ ಎಂದು ತಿಳಿದುಬಂದಿದೆ.

TVS Apache RTR 310 ಬೈಕಿನ ಮುಂಭಾಗದಲ್ಲಿ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್(Disc Brake) ಅನ್ನು ಅಳವಡಿಸಲಾಗಿದೆ. ಎದುರುಗಡೆಯಲ್ಲಿ ಫೋರ್ಕ್ಸ್ ಸಸ್ಪೆನ್ಷನ್ ಹಾಗೂ ಹಿಂಬದಿಯಲ್ಲಿ ಮೋನೋ ಶಾರ್ಕ್ ಸಸ್ಪೆನ್ಷನ್ ಅನ್ನು ಅಳವಡಿಸಲಾಗಿದೆ. LED ಲೈಟಿಂಗ್ ಅನ್ನು ಕೂಡ ಬೈಕ್ ಹೊಂದಿದೆ. ಬ್ಲೂಟೂತ್ ಕನೆಕ್ಟ್ ಟೆಕ್ನಾಲಜಿಯನ್ನು ಕೂಡ ನೀವು ಈ ಬೈಕಿನಲ್ಲಿ ಕಾಣಬಹುದಾಗಿದೆ. ವಿಭಿನ್ನವಾದ ರೈಟಿಂಗ್ ಮೋಡ್ ಗಳನ್ನು ಕೂಡ ನೀವು ಈ ಬೈಕಿನಲ್ಲಿ ಕಾಣಬಹುದು.

TVS Apache RR 310 BS6:Price, Mileage, Images, Colors Explained

TVS Apache RTR 310 ಇಂದು ಅಂದರೆ ಸೆಪ್ಟೆಂಬರ್ 6 ರಂದು ಅಧಿಕೃತವಾಗಿ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು 3100 ರೂಪಾಯಿಗಳಿಗೆ ಅಡ್ವಾನ್ಸ್ ಬುಕಿಂಗ್ ಮಾಡಬಹುದಾದಂತಹ ಆಯ್ಕೆಯನ್ನು ಕೂಡ ಈಗಾಗಲೇ ಕಂಪನಿ ಮಾರುಕಟ್ಟೆಯಲ್ಲಿಟ್ಟಿದೆ. ಇನ್ನು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ TVS Apache RTR 310 ಬೈಕ್ 2.20 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಿ 2.29 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ ಎಂಬುದಾಗಿ ಕೂಡ ತಿಳಿದುಬಂದಿದೆ. ಸ್ಪೋರ್ಟ್ಸ್ ಬೈಕ್ ಖರೀದಿಸುವಂತಹ ಪ್ರತಿಯೊಬ್ಬ ಬೈಕ್ ಪ್ರಿಯರ ನೆಚ್ಚಿನ ಆಯ್ಕೆಯಾಗಿ ಇದು ಕಾಣಿಸಿಕೊಳ್ಳಲಿದೆ.

ಇವುಗಳನ್ನು ಕೂಡ ಓದಿ:
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
 ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ಮ್ಯಾಕ್ ಬುಕ್ ರೀತಿ ಕಾಣುವ ಆದರೆ ಮ್ಯಾಜಿಕ್ ಕೀ ಬೋರ್ಡ್ ಇರುವ iPad ಮಾರುಕಟ್ಟೆಗೆ. ಬೆಲೆ ಕೂಡ ಜಾಸ್ತಿನೇ. ಹೊಸ iPad ಸಂಪೂರ್ಣ ವಿವರ.. Next iPad Pro

automobile news in kannadaKannada automobile newsKannada karunaada vaaniKannada live newsKannada NewsKarunaada VaaniKarunaada vaani kannada newskarunaada vaani newstvs apache rtr 160tvs apache rtr 310 2023tvs apache rtr 310 launch date and timetvs apache rtr 310 launch date in indiatvs apache rtr 310 launch timetvs apache rtr 310 new model 2023tvs apache rtr 310 price in indiatvs apache rtr 310 top speed