Car Driving Tips: ವಾಹನ ಚಲಿಸುವಾಗ, ಕ್ಲಚ್ ಹಿಡಿದು ಗೇರ್ ಹಾಕಬೇಕಾ? ಅಥವಾ ಕ್ಲಚ್ ಬಿಟ್ಟು ಹಾಕಬೇಕಾ? ಹೇಗೆ ಮಾಡಿದರೆ ಉತ್ತಮ??

Car Driving Tips: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಕಾರು ಖರೀದಿಸಬೇಕು ಎನ್ನುವಂತಹ ಆಸೆಯನ್ನು ಹೊಂದಿರುತ್ತಾರೆ, ಇನ್ನು ಕೆಲವರಿಗೆ ಕಾರನ್ನು ಚಲಾಯಿಸುವುದಕ್ಕೆ ಬರದೇ ಇದ್ದರೂ ಕೂಡ ಹೇಗಾದರೂ ಮಾಡಿ ಖರೀದಿಸಿ ಅದಕ್ಕಿಂತ ಮುಂಚೆ ಕಾರನ್ನು ಕಲಿತೀನಿ ಅಂತ ಭರವಸೆಯಿಂದ ಹೇಳ್ತಾರೆ. ಆದರೆ ಸಾಕಷ್ಟು ಜನರು ಕಾರನ್ನು ಚಲಾಯಿಸುವಾಗ(car driving tips) ಕೆಲವೊಂದು ತಪ್ಪುಗಳನ್ನು ಮಾಡ್ತಾರೆ. ವಾಹನ ಓಡಿಸುವಾಗ ಮಧ್ಯದಲ್ಲಿ ನಿಲ್ಲಿಸಬೇಕಾದಾಗ ಕ್ಲಚ್ ಒತ್ತಿ ಗೇರ್ ಬದಲಾಯಿಸುವುದು ಸರಿನಾ ತಪ್ಪಾ ಹಾಗೂ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

ಇದನ್ನು ಕೂಡ ಓದಿ: ಇಡೀ ಭಾರತದಲ್ಲಿಯೇ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳು. ಕಡಿಮೆ ಬೆಲೆಗೆ ಹೆಚ್ಚು ಓಡಾಟ. Top Mileage bikes

Car Driving Tips and techniques explained in Kannada: how to use clutch while driving a car

ಮೊದಲನೇದಾಗಿ ಟ್ರಾಫಿಕ್ ನಲ್ಲಿ ಇರಬೇಕಾದರೆ ಜರ್ಕಿಯಾಗಿ ಯಾವುದೇ ಕಾರಣಕ್ಕೂ ಕೂಡ ಕ್ಲಚ್(Clutch ) ಅನ್ನು ಜರ್ಕಿ ರೂಪದಲ್ಲಿ ರಿಲೀಸ್ ಮಾಡಬಾರದು ಎಂಬುದಾಗಿ ಹೇಳಲಾಗುತ್ತದೆ. ಕ್ಲಚ್ ಅನ್ನು ಜರ್ಕ್ ಮಾಡೋ ಮೂಲಕ ರೈಸ್ ಮಾಡಬಾರದು ಹಾಗೂ ಇದನ್ನು ನಿಯಮಿತವಾಗಿ ಮಾಡುವ ಮೂಲಕ ಸಂಪೂರ್ಣವಾಗಿ ಸವೆದು ಹೋಗುತ್ತದೆ ಎಂಬುದನ್ನು ಕೂಡ ನೆನಪಿನಲ್ಲಿಟ್ಟುಕೊಳ್ಳಬೇಕು.

ಸ್ನೇಹಿತರೆ ಇದೇ ಸಮಯದಲ್ಲಿ ನಿಮಗೆ ಒಂದು ವೇಳೆ ವ್ಯಾಪಾರಕ್ಕೆ ಯಾವುದೇ ಗ್ಯಾರಂಟಿ ಇಲ್ಲದೆ 10 ಲಕ್ಷ ಸಾಲ ಬೇಕು ಎಂದಾದಲ್ಲಿ, ಸರ್ಕಾರದ ಕಡೆ ಇಂದ ಹಣ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ- ಇದರಲ್ಲಿ ಸಂಪೂರ್ಣ ಮಾಹಿತಿ ಇದೆ. Loan

ಇನ್ನು ಸಾಕಷ್ಟು ಜನರು ಗೇರ್ ಅನ್ನು ಬದಲಾವಣೆ(Gear Change) ಮಾಡುವಾಗ ಕ್ಲಚ್ ಅನ್ನು ಕೇವಲ ಅರ್ಧಕ್ಕೆ ಮಾತ್ರ ಒತ್ತುತ್ತಾರೆ. ಈ ಸಂದರ್ಭದಲ್ಲಿ ನೀವು ಪ್ರಮುಖವಾಗಿ ಎದುರಿಸುವ ಸಮಸ್ಯೆ ಏನೆಂದರೆ ಆಗ ಗೇರ್ ಸರಿಯಾಗಿ ಚೇಂಜ್ ಆಗೋದಿಲ್ಲ. ಇಲ್ಲಿಂದ ನಿಮ್ಮ ಗೇರ್ ಬಾಕ್ಸ್ ನಲ್ಲಿ ವಿಚಿತ್ರ ವಿಚಿತ್ರವಾದ ಶಬ್ದಗಳು ಪ್ರಾರಂಭವಾಗುತ್ತವೆ ಎನ್ನುವುದನ್ನು ಕೂಡ ನೀವು ಈ ಸಂದರ್ಭದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುತ್ತದೆ. ಹೀಗಾಗಿ ಗೇರ್ ಚೇಂಜ್ ಮಾಡುವಾಗ ಪೂರ್ತಿಯಾಗಿ ಕ್ಲಚ್ ಅನ್ನು ಬಿಡುವುದನ್ನು ಕಲಿತುಕೊಳ್ಳಿ.

ಇನ್ನು ಮೂರನೆದಾಗಿ ಕ್ಲಚ್ ಅನ್ನು ಪೂರ್ತಿಯಾಗಿ ಬಿಡುವುದರಿಂದ ಕೂಡ ಸಮಸ್ಯೆಗಳು ಎದುರಾಗುತ್ತವೆ. ಸಂಪೂರ್ಣ ಬಾರವನ್ನು ನೀವು ಕ್ಲಚ್ ಮೇಲೆ ಇಟ್ಟರೆ ಕ್ಲಚ್ ಪ್ಲೇಟ್ ಗಳ ಜೊತೆಗೆ ಗೇರ್ ಬಾಕ್ಸ್ ಕೂಡ ಹಾನಿಗೆ ಒಳಗಾಗುತ್ತದೆ ಎನ್ನುವುದನ್ನು ಕೂಡ ನೀವು ತಿಳಿದುಕೊಳ್ಳಬೇಕು.

ವಾರಕ್ಕೆ ಎರಡು ಗಂಟೆ ಸಾಕು ಈ ಈ ಬಿಜಿನೆಸ್ ಮಾಡಿ, ಲಕ್ಷ ಲಕ್ಷ ಆದಾಯ. ಹಳ್ಳಿಯಲ್ಲಿ ಇದ್ದರೂ ಮಾಡಬಹುದು. Business Ideas

ಕಾರನ್ನು ಚಲಾಯಿಸುವಾಗ ಪದೇಪದೇ ನೀವು ಕ್ಲಚ್ ಅನ್ನು ಒತ್ತುವ ಅಭ್ಯಾಸವನ್ನು ಇಟ್ಟುಕೊಳ್ಳಬೇಡಿ ಇದರಿಂದಾಗಿ ನಿಮ್ಮ ಕಾರ್ ಪ್ರಯಾಣ ಕೂಡ ಹಾಳಾಗುತ್ತದೆ. ಟೆಕ್ನಿಕಲಿ ಹೇಳೋದಾದ್ರೆ ಗೇರ್ ಬಾಕ್ಸ್ ಹಾಳಾಗೋದಕ್ಕೆ ಕೂಡ ಇದು ಕಾರಣವಾಗಬಹುದು ಎನ್ನುವಂತಹ ವಿಚಾರವನ್ನು ಕೂಡ ನೀವು ಈ ಸಂದರ್ಭದಲ್ಲಿ ಪರಿಗಣಿಸಬೇಕಾಗುತ್ತದೆ. ಹೀಗಾಗಿ ಅಗತ್ಯ ಇಲ್ಲದಿದ್ದರೆ ಸುಖ ಸುಮ್ಮನೆ ಕ್ಲಚ್ ಅನ್ನು ಒತ್ತುವ ಕೆಲಸವನ್ನು ಮಾಡಬೇಡಿ.

ಕಾರಿನ ವೇಗವನ್ನು ಕಡಿಮೆ ಮಾಡ ಬೇಕು ಎನ್ನುವ ದೃಷ್ಟಿಯಿಂದ ನೀವು ಕ್ಲಚ್ ಅನ್ನು ಬಳಸುವುದು ನಿಜಕ್ಕೂ ಕೂಡ ಅನಗತ್ಯ ಎಂದು ಹೇಳಬಹುದು. ಗೇರ್ ಅನ್ನು ಬದಲಾಯಿಸುವಾಗ ಹಾಗೂ ಕಾರನ್ನು ನಿಲ್ಲಿಸುವಾಗ ಮಾತ್ರ ಇದರ ಉಪಯೋಗ ನಿಮಗೆ ಬೇಕಾಗಿರುತ್ತದೆ. ಕಾರಿನ ವೇಗವನ್ನು ಕಡಿಮೆ ಮಾಡಬೇಕು ಎನ್ನುವಂತಹ ಉದ್ದೇಶ ಮಾತ್ರ ಇದ್ರೆ ಬ್ರೇಕ್ ಮೂಲಕ ವೇಗವನ್ನು ತಗ್ಗಿಸಬಹುದು.

automobile karunaada vaani newsautomobile news in kannadaKannadaKannada automobile newsKannada karunaada vaaniKannada live newsKannada Newskannada news livekannada news paperkannada news paper todayKarunaada VaaniKarunaada vaani kannada newskarunaada vaani newstoday kannada newsಇಂದಿನ ವಾರ್ತೆಗಳು ಕನ್ನಡ liveನ್ಯೂಸ್ ಪೇಪರ್ today