MG Motors: ದಿಡೀರ್ ಎಂದು ಜಿಗಿತ ಕಂಡ MG ಮೋಟರ್ಸ್ ಕಾರುಗಳ ಮಾರಾಟ- ಜನರು ಮುಗಿಬಿದ್ದು ಖರೀದಿ ಮಾಡಲು ಕಾರಣವೇನು ಗೊತ್ತೇ?

MG Motors: MG ಮೋಟಾರ್ಸ್ ಇದು ಮೂಲತಃ ಬ್ರಿಟಿಷ್ ಅಸಂಸ್ಥೆ ಆಗಿದೆ, ಈ ಸಂಸ್ಥೆಯು ಈ ವರ್ಷ ಮೂರು ಹೊಸ ಮಾಡೆಲ್ ಗಳನ್ನು ಭಾರತದಲ್ಲಿ ಪರಿಚಯಿಸಿ, ತಮ್ಮ ಸೇಲ್ಸ್ ಅನ್ನು ಹೆಚ್ಚಿಸಿಕೊಂಡಿದ್ದಾರೆ. ಮೇ ತಿಂಗಳ ಸೇಲ್ಸ್ ನಲ್ಲಿ ಸುಮಾರು 14% ಜಾಸ್ತಿಯಾಗಿದೆ ಎಂದು ಮಾಹಿತಿ ಸಿಕ್ಕಿದೆ. ಈ ಕಂಪನಿ ಜೂನ್ ನಲ್ಲಿ 5125 ಯುನಿಟ್ಸ್ ಸೇಲ್ಸ್ ಮಾಡಿದೆ, 2022 ಈ ಸಮಯದಲ್ಲಿ 4504 ಯುನಿಟ್ಸ್ ಮಾರಾಟ ಮಾಡಿತ್ತು. ಭಾರತದಲ್ಲಿ ಈ ಸಂಸ್ಥೆಯ ಅತ್ಯುತ್ತಮ ಮಾಡೆಲ್ ಹೆಕ್ಟರ್ SUV ಕಾರ್ ನ ಫೇಸ್ ಲಿಫ್ಟ್ ವೇರಿಯಂಟ್ ಅನ್ನು ಲಾಂಚ್ ಮಾಡಿದರು. ಕಾರ್ ತಯಾರಕರು ಹೇಳಿರುಗ ಹಾಗೆ..

reason-why-mg-motors-sales-are-increased Automobile news in Kannada

MG ಮೋಟಾರ್ಸ್ (MG Motors) ಸಂಸ್ಥಾಯ ಕಳೆದ ವರ್ಷ ಈ ಸಮಯದ ತ್ರೈಮಾಸಿಕ ಸೇಲ್ಸ್ ನೋಡಿದರೆ, ಏಪ್ರಿಲ್ ಇಂದ ಜೂನ್ ವರೆಗು 40% ಏಳಿಗೆ ಕಂಡಿದೆ. ಒಟ್ಟಾರೆಯಾಗಿ MG ಮೋಟಾರ್ಸ್ ಸಂಸ್ಥೆಯು ಈ ಮೂರು ತಿಂಗಳಲ್ಲಿ 14,682 ಯುನಿಟ್ಸ್ ಮಾರಾಟ ಮಾಡಿದೆ. 2022ರ ಇದೇ ಸಮಯದಲ್ಲಿ 10,519 ಯುನಿಟ್ಸ್ ಮಾರಾಟ ಮಾಡಿತ್ತು. ಈ ವರ್ಷ ಮೇ ಗಿಂತ ಜೂನ್ ನಲ್ಲಿ ಸೇಲ್ಸ್ ಚೆನ್ನಾಗಿ ನಡೆದಿದೆ. ಇನ್ನು ಹೆಚ್ಚು ಬೆಳವಣಿಗೆಯನ್ನು ಸಂಸ್ಥೆ ನಿರೀಕ್ಷೆ ಮಾಡಿದೆ. ಆದರೆ ಇತ್ತೀಚಿನ ಸೈಕ್ಲೋನ್ ಸೇಲ್ಸ್ ಗೆ ತೊಂದರೆ ನೀಡಿದೆ, ಮುಂಬರುವ ಸಮಯದಲ್ಲಿ ಬೇಡಿಕೆ ಜಾಸ್ತಿಯಾಗುವ ನಿರೀಕ್ಷೆ ಇದೆ. ಇದನ್ನು ಓದಿ: Maruthi Suzuki eVx: ಮೊದಲ ಎಲೆಕ್ಟ್ರಿಕ್ SUV ಯನ್ನು ಅನಾವರಣಗೊಳಿಸಿದ ಮಾರುತಿ ಸುಜುಕಿ- ವಿಶೇಷತೆಯ ಜೊತೆ ಸಂಪೂರ್ಣ ಡೀಟೇಲ್ಸ್.

2023ರ ಶುರುವಿನಲ್ಲಿ, ಕಾರ್ ತಯಾರಿಕರು ಹೊಸದಾದ ಹೆಕ್ಟರ್ SUV ಅನ್ನು ಪರಿಚಯಿಸಿದ ಬಳಿಕ MG ಮೋಟಾರ್ಸ್ ನ ಸೇಲ್ಸ್ ಹೆಚ್ಚಾಗಿದೆ. 2023ರ ಹೆಕ್ಟರ್ ಹಾಗೂ ಹೆಕ್ಟರ್ ಪ್ಲಸ್ ಕಾರ್ ಅನ್ನು ಜನವರಿ ತಿಂಗಳಿನಲ್ಲಿ ಬಿಡುಗಡೆ ಮಾಡಿದರು. ಈ SUV ಈ ವಿಶೇಷತೆ ಇರುವ ಭಾರತದ ಮೊದಲ ಕಾರ್ ಆಗಿದ್ದು, MG ಮೋಟಾರ್ಸ್ ಸಂಸ್ಥೆಯಲ್ಲಿ ಅತ್ಯುತ್ತಮವಾಗಿ ಮಾರಾಟವಾದ ಕಾರ್ ಆಗಿದೆ.

ಕಾಮೆಟ್ EV :- MG ಮೋಟಾರ್ಸ್ (MG Motors) ಸಂಸ್ಥೆಯು ಕಾಮೆಟ್ EV ಕಾರ್ ಅನ್ನು ಕೂಡ ಪರಿಚಯಿತು. ಇದು ನಮ್ಮ ದೇಶದ ಅತ್ಯಂತ ಕಡಿಮೆ ಬೆಲೆಯ ಕಾರ್ ಆಗಿದ್ದು, ಈ ಕಾರ್ ನ ಎಕ್ಸ್ ಶೂರೂಮ್ ಬೆಲೆ 7.98 ಲಕ್ಷ ರೂಪಾಯಿಯ ಬೆಲೆಗೆ ಈ ಕಾರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಕಾಮೆಟ್ ZS EV ಬಳಿಕ MG ಮೋಟಾರ್ಸ್ ಸಂಸ್ಥೆ ಮೋಟಾರ್ ಫ್ಲೀಟ್ ನಲ್ಲಿ ಬಿಡುಗಡೆ ಮಾಡಿದ ಎರಡನೇ ಎಲೆಕ್ಟ್ರಿಕ್ ಕಾರ್ ಇದಾಗಿದೆ. ಇದನ್ನು ಓದಿ: ಅತಿ ಸುಲಭವಾಗಿ, ಮೊಬೈಲ್ ಅಥವಾ ಕಂಪ್ಯೂಟರ್ ಎಲ್ಲಿಂದ ಬೇಕಾದರೂ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ??

ಗ್ಲೋಸ್ಟರ್ ಬ್ಲ್ಯಾಕ್ ಸ್ಟಾರ್ಮ್ :- ಮೇ ತಿಂಗಳಿನಲ್ಲಿ ಗ್ಲೋಸ್ಟರ್ SUV ಕಾರ್ ನ ಬ್ಲ್ಯಾಕ್ ಸ್ಟಾರ್ಮ್ ಆವೃತ್ತಿಯನ್ನು ₹40.29 ಲಕ್ಷ ರೂಪಾಯಿಗೆ ಬಿಡುಗಡೆ ಮಾಡಿತು. 2WD ಹಾಗೂ 4WD ವೇರಿಯಂಟ್ ಗಳಲ್ಲಿ ಸಿಗುತ್ತದೆ. ಈ ಕಾರ್ ನಲ್ಲಿ 7 ಡ್ರೈವಿಂಗ್ ಮೋಡ್ ಇರುತ್ತದೆ, 2.0 ಲೀಯರ್ ಡೀಸೆಲ್ ಇಂಜಿನ್ ಹಿಂದಿದೆ. ಈ ಕಾರ್ ನಲ್ಲಿ 30 ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ. ಲೆವೆಲ್ 1 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟನ್ಸ್ ಸಿಸ್ಟಮ್ (ADAS) ಈ ಕಾರ್ ನಲ್ಲಿದೆ. MG ಮೋಟಾರ್ಸ್ ಸಂಸ್ಥೆ ಹೆಕ್ಟರ್ SUV ಕಾರ್ ಅನ್ನು ಬಿಡುಗಡೆ ಮಾಡುವ ಮೂಲಕ 2019ರಲ್ಲಿ ಭಾರತ ತಂಡಕ್ಕೆ ಪರಿಚಯವಾಯಿತು, ಬಳಿಕ ZS EV, Gloster ಹಾಗೂ Aster ಕಾರ್ ಅನ್ನು ಪರಿಚಯಿಸಿತು.

auto carauto expo 2023automobileautomobile industryautomotive economic newscar newslatest autoMG motors