Home: ಬಾಡಿಗೆ ದುಡ್ಡು ಕಟ್ಟುವ ಬದಲು ಅದೇ ಹಣಕ್ಕೆ ಸ್ವಂತ ಮನೆ ಪಡೆಯುವುದು ಹೇಗೆ ಗೊತ್ತೇ? ಇದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಆರ್ಥಿಕ ತಜ್ಞರು ಹೇಳುವುದೇನು ಗೊತ್ತೇ?

Home: ನಮಸ್ಕಾರ ಸ್ನೇಹಿತರೇ ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಿಕೊಳ್ಳಬೇಕು ಎಂಬುದು ಕೋಟ್ಯಂತರ ಜನರ ಕನಸಾಗಿದೆ. ಬೆಂಗಳೂರಿನಲ್ಲಿ ಇರುವ ಜನರದ್ದು ಈ ಕನಸಾದರೆ ವಿವಿಧ ನಗರಗಳಲ್ಲಿ ಇರುವ ಜನರು ತಮ್ಮ ಸ್ವಂತ ಊರಿನಲ್ಲಿ ಮನೆ ಕಟ್ಟಿಕೊಳ್ಳಬೇಕು ಎಂಬ ಆಸೆ ಅವರದಾಗಿರುತ್ತದೆ. ಆದರೆ ಹಣಕಾಸಿನ ತೊಂದರೆಯಿಂದ ಅದೆಷ್ಟೋ ಜನರ ಕನಸುಗಳು ಈಡೇರುವುದಿಲ್ಲ, ಜೀವನಪೂರ್ತಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾರೆ, ಆದರೆ ನೀವು ಸ್ವಲ್ಪ ಬುದ್ಧಿವಂತರಾಗಿ ಆಲೋಚನೆ ಮಾಡಿದರೆ ಖಂಡಿತ ನೀವು ದುಡಿಯುವ ಹಣದಲ್ಲಿಯೇ ನೀವು ಸ್ವಂತ ಮನೆಯನ್ನು ಹೊಂದಬಹುದಾಗಿದೆ.

ಹೌದು ಆರ್ಥಿಕ ತಜ್ಞರ ಪ್ರಕಾರ ನೀವು ನಿಮ್ಮ ಹಣವನ್ನು ಸರಿಯಾಗಿ ಬಳಸಿದ್ದೆ ಆದಲ್ಲಿ ಖಂಡಿತಾ ಸ್ವಂತ ಮನೆಯ ಕನಸು ಬಹಳ ಸುಲಭವಾಗಿ ನೆರವೇರಲಿದೆ, ಹೌದು ಸ್ನೇಹಿತರೆ ಸಾಮಾನ್ಯವಾಗಿ ಬೆಂಗಳೂರಿನ ಲೆಕ್ಕಾಚಾರ ತೆಗೆದುಕೊಳ್ಳುವುದಾದರೆ ಒಂದು ಬೆಡ್ ರೂಮ್ (Home) ಇರುವ ಮನೆಯ ಬಾಡಿಗೆ ಬೆಲೆ ಕನಿಷ್ಠ ಎಂಟರಿಂದ ಹತ್ತು ಸಾವಿರ, ಹಳೆಯ ಮನೆಗಳಾದರೆ ಸ್ವಲ್ಪ ಕಡಿಮೆಯಾಗುತ್ತದೆ. ಆದರೆ ಸಾಮಾನ್ಯವಾಗಿ ಬಹುತೇಕ ಎಂಟರಿಂದ ಹತ್ತು ಸಾವಿರ ಪಾವತಿ ಮಾಡಬೇಕಾಗುತ್ತದೆ. ಇನ್ನು ಕೊಂಚ ಉತ್ತಮ ಏರಿಯಾ ಅಥವಾ ಡಬಲ್ ಬೆಡ್ರೂಮ್ ಮನೆ ಬೇಕು ಎಂದಾದರೆ ಕನಿಷ್ಠ ನೀವು 15 ಸಾವಿರ ಬಾಡಿಗೆಯನ್ನು ಪಾವತಿ ಮಾಡಲೇಬೇಕಾಗುತ್ತದೆ. ನೀವು ಕೂಡಿಟ್ಟುಕೊಂಡು ಸರಿಯಾದ ರೀತಿಯಲ್ಲಿ ಬಳಸಿದರೆ ಸ್ವಂತ ಮನೆಯ ಕನಸು ನನಸಾಗಲಿದೆ.

ಚಾಹಲ್ ಪರಿಸ್ಥಿತಿ ಯಾರಿಗೂ ಬೇಡ. ಟಿಕ್ ಟಾಕ್ ಹುಡುಗಿಯನ್ನು ಮದುವೆಯಾಗಿದ್ದ ಚಾಹಲ್ ಗೆ ಸ್ನೇಹಿತನೇ ಮುಳುವಾಗಿದ್ದಾನಾ?? ಅಸಲಿಗೆ ಧನುಶ್ರೀ ಮಾಡಿದ್ದೇನು ಗೊತ್ತೆ?

ಬೆಂಗಳೂರಿನಲ್ಲಿ ಭೂಮಿಯ ಬೆಲೆ ಗಗನಕ್ಕೆ ಏರಿದೆ ಇದು ಎಲ್ಲರಿಗೂ ತಿಳಿದಿರುವ ವಿಷಯ ಆದರೆ ಅದೇ ಸಮಯದಲ್ಲಿ ಕೆಲವೊಂದು ಏರಿಯಾಗಳಲ್ಲಿ ಕೆಲವೊಂದು ಏರಿಯಾಗಳಲ್ಲಿ ಈಗಲೂ ಕೂಡ 25 ರಿಂದ 30 ಲಕ್ಷಕ್ಕೆ ಅಪಾರ್ಟ್ಮೆಂಟ್ ಗಳನ್ನು ಮಾರಾಟಕ್ಕೆ ಇಡಲಾಗಿದೆ. ಸಿಟಿ ಮಧ್ಯದಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಅಪಾರ್ಟ್ಮೆಂಟ್ ಗಳು ಇದ್ದವೇ, ಆದರೆ ಕೊಂಚ ದೂರವಾದಂತೆ ಉದಾಹರಣೆಗೆ ನೆಲಮಂಗಲ, ಕನಕಪುರ ಮೇನ್ ರೋಡ್, ಉತ್ತರಹಳ್ಳಿ, ಹೀಗೆ ಬೆಂಗಳೂರು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ 30 ಲಕ್ಷಕ್ಕೆ ಅತ್ಯುತ್ತಮವಾದ (Home) ಅಪಾರ್ಟ್ಮೆಂಟ್ ಸಿಗುತ್ತದೆ. ಸಾಮಾನ್ಯವಾಗಿ ಪ್ರತಿಷ್ಠಿತ ಬ್ರಾಂಡ್ ಗಳಿಗೆ ಹೋದಷ್ಟು ಬೆಲೆ ಜಾಸ್ತಿ ಆದರೆ ಲೋಕಲ್ ಬಿಲ್ಡರ್ ಗಳು ನಿರ್ಮಾಣ ಮಾಡಿರುವ ಮನೆಗಳಿಗೆ ಬೆಲೆಗಳು ಕಡಿಮೆ ಇರುತ್ತದೆ.

ನೀವು ಕೊಂಚ ಹೆಚ್ಚು ಪ್ರಯತ್ನ ಪಟ್ಟರೆ ಖಂಡಿತ ಇನ್ನಷ್ಟು ಕಡಿಮೆ ಬೆಲೆಗೆ ಅಪಾರ್ಟ್ಮೆಂಟ್ ಗಳು ಸಿಗುತ್ತವೆ, ನೀವು ಶ್ರಮ ಹಾಕಿ ಇವುಗಳನ್ನು ಖರೀದಿ ಮಾಡಿದ್ದಲ್ಲಿ, ಖಂಡಿತ ನಿಮಗೆ ಹೊಸ ಮನೆಯ ಕನಸು ಈಡೇರುತ್ತದೆ, ಜೊತೆಗೆ ಅದೊಂದು ಉತ್ತಮ ಬಂಡವಾಳವಾಗಿರುತ್ತದೆ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೆ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮವಾಗಿ ಕಾಪಾಡಿಕೊಂಡು ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಲೋನುಗಳನ್ನು ತೆಗೆದುಕೊಳ್ಳಬೇಕು.

Business Idea : ಒಮ್ಮೆ ಹೂಡಿಕೆ ಮಾಡಿ, ಜೀವನ ಪೂರ್ತಿ ಕೂತುಕೊಂಡು ದುಡ್ಡು ಮಾಡುವ ಉದ್ಯಮ ಯಾವುದು ಗೊತ್ತೇ?? ಹೇಗೆ ಆರಂಭಿಸಬೇಕು ಗೊತ್ತೆ??

ನೆನಪಿರಲಿ ನೀವು ಪ್ರತಿಷ್ಠಿತ ಬ್ಯಾಂಕುಗಳಿಗೆ ಹೋದರೆ ಬಡ್ಡಿ ಕಡಿಮೆ ಇರುತ್ತದೆ ಅದೇ ಸಾಮಾನ್ಯ ಲೋಕಲ್ ಬ್ಯಾಂಕುಗಳಿಗೆ ಹೋದರೆ 14ರಿಂದ 15 ಪರ್ಸೆಂಟ್ ಕೇವಲ ಬಡ್ಡಿ ಬೀಳುತ್ತದೆ, ಅದೇ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಎಂಟರಿಂದ ಒಂಬತ್ತು ಪರ್ಸೆಂಟ್ ಒಳಗಡೆ ನಿಮಗೆ (Home Loan) ಗೃಹ ಸಾಲ ಸಿಗುತ್ತದೆ. ನೀವು 20 ಲಕ್ಷ ಲೋನ್ ತೆಗೆದುಕೊಂಡರು ಕೂಡ ಉಳಿದ ಐದರಿಂದ ಆರು ಲಕ್ಷವನ್ನು ಹೇಗಾದರೂ ಮಾಡಿ, ಅಡ್ಜಸ್ಟ್ ಮಾಡಿದ್ದಲ್ಲಿ ನೀವು ಪಾವತಿಸುತ್ತಿರುವ ಬಾಡಿಗೆ ಹಣವನ್ನು ಇಎಂಐ ರೂಪದಲ್ಲಿ ಬ್ಯಾಂಕುಗಳಿಗೆ ಮರುಪಾವತಿ ಮಾಡಬಹುದು. ಇದರಿಂದ ಸ್ವಂತ ಮನೆಯಲ್ಲಿ (Home) ಇದ್ದೇವೆ ಎಂದು ನೆಮ್ಮದಿ ಕೂಡ ಸಿಗುತ್ತದೆ ಹಾಗೂ ಬಾಡಿಗೆ ರೂಪದಲ್ಲಿ ನಿಮ್ಮ ಮನೆಯ ಸಾಲ ಕೂಡ ಇರುತ್ತದೆ. ಈ ಕುರಿತು ನಿಮಗೆ ಹೆಚ್ಚಿನ ಅನುಮಾನಗಳು ಇದ್ದಲ್ಲಿ ದಯವಿಟ್ಟು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿದರೆ ನಮ್ಮ ಆರ್ಥಿಕ ತಜ್ಞರು ಸರಿಯಾದ ಉತ್ತರವನ್ನು ನೀಡುತ್ತಾರೆ