Kannada News: ಕನ್ನಡ ಮಾಧ್ಯಮ ಓದುಗರಿಗೆ ಸಿಹಿ ಸುದ್ದಿ ಕೊಟ್ಟ ಸಚಿವ ಅಶ್ವಥ್ ನಾರಾಯಣ್: ಮಹತ್ವದ ಘೋಷಣೆ ಮಾಡಿ ಹೇಳಿದ್ದೇನು ಗೊತ್ತೇ??

Kannada News: ಕನ್ನಡ ಮಾಧ್ಯಮದಲ್ಲಿ ಓದಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಓದಿನಲ್ಲಿ ಕಷ್ಟಪಡುತ್ತಿರುವವರಿಗೆ ಸಚಿವ ಅಶ್ವಥ್ ನಾರಾಯಣ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖ್ಯವಾದ ತೀರ್ಮಾನ ಕೈಗೊಳ್ಳಲಾಗಿದ್ದು, ಇದು ಎಲ್ಲಾ ವಿದ್ಯಾರ್ಥಿಗಳಿಗೆ ಬಹಳ ಸಂತೋಷ ತರುವ ವಿಷಯ ಆಗಿದೆ. ಕೆಲವು ವಿದ್ಯಾರ್ಥಿಗಳು ಇಂಗ್ಲಿಷ್ ಬಾಷೆಯಲ್ಲಿ ಪರೀಕ್ಷೆ ಬರೆಯಲು ಕಷ್ಟಪಡುತ್ತಿದ್ದರು, ಅದಕ್ಕೀಗ ಹೊಸ ನಿಯಮವನ್ನು ಜಾರಿಗೆ ತರುವ ನಿಯಮವನ್ನು ಕೈಗೊಳ್ಳಲಾಗಿದೆ. ಇನ್ನುಮುಂದೆ ಪದವಿ ಮತ್ತು ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎರಡು ಭಾಷೆಯಲ್ಲೂ ಬರೆಯಬಹುದು.

ಅಂದರೆ ಒಂದು ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿ, ಮತ್ತೊಂದು ಪ್ರಶ್ನೆಗೆ ಇಂಗ್ಲಿಷ್ ನಲ್ಲಿ ಬೇಕಾದರೂ ಉತ್ತರ ಬರೆಯಬಹುದು. ಅವರಿಗೆ ಯಾವ ಪ್ರಶ್ನೆಗೆ ಯಾವ ಭಾಷೆ ಸೂಕ್ತ ಎನ್ನಿಸುತ್ತದೆಯೋ, ಆ ಭಾಷೆಯಲ್ಲಿ ಉತ್ತರ ಬರೆಯಬಹುದು. ಈ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಆಗಲಿದೆ. ಪಾಲಿಟೆಕ್ನಿಕ್ ನಲ್ಲಿ ಈ ನಿಯಮ ಈಗಾಗಲೇ ಜಾರಿಯಲ್ಲಿದ್ದು, ಪದವಿ ಮತ್ತು ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಈ ನಿಯಮ ಜಾರಿಗ ಬರಲಿದೆ. ಇದಕ್ಕಾಗಿ ಹಲವು ಪ್ರಸಿದ್ಧ ಪಠ್ಯಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಬೇಕು, ಅದಕ್ಕಾಗಿ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಅಶ್ವಥ್ ನಾರಾಯಣ್ (Ashwath Narayan) ಅವರು ಆದೇಶ ನೀಡಿದ್ದಾರೆ. ಇದನ್ನು ಓದಿ..Post Office Recruitment: ನಿಮಗೆ ಕೇಂದ್ರದ ನೌಕರಿ ಬೇಕಾ? ಹಾಗಿದ್ದರೆ 8 ನೇ ತರಗತಿ ಆಗಿದ್ದರೆ, ಹೀಗೆ ಅರ್ಜಿ ಸಲ್ಲಿಸಿ, 63 ಸಾವಿರ ಸಂಬಳ.

“ಉನ್ನತ ಶಿಕ್ಷಣದಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಗರಿಷ್ಟವಾಗಿ ಹೆಚ್ಚಿಸಬೇಕು ಎಂದು ಈ ಒಮ್ಮತದ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ..ಹಾಗು ಬುಡಕಟ್ಟು ವಿಶ್ವವಿದ್ಯಾಲಯವನ್ನು ಹೊಸದಾಗಿ ಶುರು ಮಾಡುವುದಕ್ಕಿಂತ, ಪ್ರಸ್ತುತ ಇರುವ ಕರ್ನಾಟಕ ರಾಜ್ಯ ಜಾನಪದ ವಿಶ್ವವಿದ್ಯಾಲಯದಲ್ಲೇ ಬುಡಕಟ್ಟು ಸ್ಟಡಿಸ್ ಗೆ ಬೇಕಿರುವ ವ್ಯವಸ್ಥೆ ಮಾಡಲಾಗುತ್ತದೆ..” ಎಂದು ತಿಳಿಸಿದ್ದಾರೆ. ಜೊತೆಗೆ ವಿದ್ಯಾರ್ಥಿಗಳು ಆಯ್ಕೆ ಮಾಡುವ ಓಪನ್ ಎಲೆಕ್ಟಿವ್ ಸಬ್ಜೆಕ್ಟ್ಸ್ ಗಳ ಮೌಲ್ಯಮಾಪನವನ್ನು ಸರಿಯಾದ ರೀತಿಯಲ್ಲಿ ಮಾಡಬೇಕು, ಇದರಿಂದ ಉದ್ಯೋಗಾವಕಾಶ ಹೆಚ್ಚಾಗಬೇಕು ಎಂದು ಕೂಡ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನು ಓದಿ.. Investment Tips: ಕೇವಲ ದಿನಕ್ಕೆ 200 ರೂಪಾಯಿ ಉಳಿತಾಯ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ, ಲಕ್ಷ ಲಕ್ಷ ಲಾಭ ಗಳಿಸುವುದು ಖಚಿತ.