Business: ಒಂದು ರೂಪಾಯಿ ಕೂಡ ಬಂಡವಾಳ ಹಾಕದೆ, ಸ್ವಂತವಾಗಿ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವ ಬಿಸಿನೆಸ್ ಯಾವುದು ಗೊತ್ತೇ??

Business: ಬ್ಯುಸಿನೆಸ್ ಮಾಡುವ ಪ್ಲಾನ್ (Business Plan) ನಲ್ಲಿರುವವರಿಗೆ ಇಂದು ನಾವು ನಿಮಗೆ ಒಂದು ಹೊಸ ಬ್ಯುಸಿನೆಸ್ ಐಡಿಯಾ ಕೊಡಲಿದ್ದೇವೆ. ಈ ಬ್ಯುಸಿನೆಸ್ ನಲ್ಲಿ ನೀವು ಬಂಡವಾಳ ಕೂಡ ಹಾಕುವುದು ಬೇಡ. ಅಂತಹ ಬ್ಯುಸಿನೆಸ್ ಪ್ಲಾನ್ ಬಗ್ಗೆ ತಿಳಿಸಿಕೊಡುತ್ತೇವೆ. ಪ್ರಪಂಚದ ಎಲ್ಲೆಡೆ ಮದುವೆ ಎಂದರೆ ಒಂದು ದೊಡ್ಡ ಸಂಭ್ರಮ. ಎರಡು ಕುಟುಂಬಗಳು ಮಾತ್ರವಲ್ಲದೆ, ಅವರ ನೆಂಟರು ಇಷ್ಟರು ಎಲ್ಲರೂ ಸೇರಿ ಸಂಭ್ರಮಿಸುವ ಸಮಯ ಆಗಿದೆ. ಮದುವೆ ಎಂದರೆ ಬಹಳಷ್ಟು ಕೆಲಸಗಳು ಇರುತ್ತದೆ. ಮೊದಲೆಲ್ಲಾ ಕುಟುಂಬದಲ್ಲಿ ಎಲ್ಲರೂ ಸೇರಿ ಈ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಈಗ ಸಮಯ ಕಡಿಮೆ ಇದ್ದು, ಎಲ್ಲರೂ ಬ್ಯುಸಿ ಇರುವಾಗ ಮದುವೆ ನಡೆಸುವ ಜವಾಬ್ದಾರಿಯನ್ನು ವೆಡ್ಡಿಂಗ್ ಪ್ಲ್ಯಾನರ್ (Wedding Planner) ಗಳು ತೆಗೆದುಕೊಳ್ಳುಟ್ಟಿದ್ದಾರೆ.

ಮದುವೆಯ ಪ್ರತಿಯೊಂದು ಕೆಲಸವನ್ನು ಇವರು ನೋಡಿಕೊಳ್ಳುತ್ತಾರೆ, ಕುಟುಂಬದವರು ಒಂದು ವಿಚಾರಕ್ಕೂ ತಲೇಕೆಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ. ಯಾವುದೇ ಟೆನ್ಷನ್ ಇಲ್ಲದೆ ಮದುವೆಯ ದಿನ ನೇರವಾಗಿ, ಮದುವೆ ಮಂಟಪಕ್ಕೆ ಹೋದರೆ ಸಾಕು, ಎಲ್ಲವನ್ನು ವೆಡ್ಡಿಂಗ್ ಪ್ಲ್ಯಾನರ್ ಗಳು ಅಯೋಜಿರುತ್ತಾರೆ. ವೆಡ್ಡಿಂಗ್ ಪ್ಲ್ಯಾನರ್ ಗಳ ಕೆಲಸ ಯಾವುವು ಎಂದರೆ,.. ಅಲಂಕರಿಸುವ ಕೆಲಸ, ಅಡುಗೆ ಜವಾಬ್ದಾರಿ, ಆಮಂತ್ರಣ ಪತ್ರಿಕೆ ಮಾಡಿಸುವುದು, ವಧು ಮತ್ತು ವರನ ಸಮಾರಂಭಕ್ಕೆ ಬಟ್ಟೆಗಳನ್ನು ಆಯ್ಕೆ ಮಾಡಿ ಖರೀದಿ ಮಾಡಿ ರೆಡಿ ಮಾಡಿಸುವುದು, ಆರತಕ್ಷತೆ, ಅರಿಶಿನ ಶಾಸ್ತ್ರ, ಮೆಹೆಂದಿ ಶಾಸ್ತ್ರ ಮುಂತಾದ ವಿವಾಹ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸುವುದು, ಲೈಟಿಂಗ್ಸ್​​ / ಎಲೆಕ್ಸ್ಟ್ರಿಸಿಟಿ.. ಇದನ್ನು ಓದಿ.. Business: ಬರೋಬ್ಬರಿ 7 ಸಾವಿರ ಕೋಟಿಗೆ ಬಿಸ್ಲೇರಿ ಕಂಪನಿ ಯನ್ನು TATA ಗೆ ಮಾರಲು ನಿರ್ಧಾರ ಮಾಡಿದ ಘೋಷಣೆ. ಕಾರಣ ಏನು ಅಂತೇ ಗೊತ್ತೇ?

ಪ್ರತಿಯೊಂದು ಕೆಲಸಕ್ಕೂ ಯಾವುದೇ ವಿವರಗಳೊಂದಿಗೆ ಸಹಾಯ ಮಾಡುವುದು, ಮದುವೆ ಶಾಸ್ತ್ರಗಳು, ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿದೆ ಎಂದು ಖಚಿತಪಡಿಸಿಕೊಳ್ಳುವುದು. ಇದಕ್ಕೆ ನೀವು ಬಂಡವಾಳ ಹೂಡಬೇಕಿಲ್ಲ, ಮದುವೆ ಆಗುತ್ತಿರುವವರ ಕುಟುಂಬದಿಂದ ಎಲ್ಲಾ ಶಾಸ್ತ್ರಗಳು ಮತ್ತು ಪ್ರತಿಯೊಂದಕ್ಕೂ ನೀವು ಹಣ ಪಡೆಯುತ್ತೀರಿ. ಈ ರೀತಿ ವೆಡ್ಡಿಂಗ್ ಪ್ಲ್ಯಾನರ್ ಗಳಾಗಲು ನೀವು ಕೋರ್ಸ್ ಮಾಡುವ ಅಗತ್ಯವೇನು ಇಲ್ಲ, ಆದರೆ ನೀವು ದಿ ಬೆಸ್ಟ್ ಎಂದು ಹೆಸರು ಮಾಡಬೇಕಾದರೆ ಕೆಲವು ಕೋರ್ಸ್ ಗಳಂತು ಇದೆ, ಅವುಗಳನ್ನು ಮಾಡಿ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು. ಈ ಬ್ಯುಸಿನೆಸ್ ಚೆನ್ನಾಗಿ ನಡೆಯಬೇಕು ಎನ್ನುವುದಾದರೆ ನೀವು ಎಲ್ಲರ ಜೊತೆಗೆ ನಗುನಗುತ್ತಾ ಮಾತನಾಡಿ, ಚೆನ್ನಾಗಿರಬೇಕು. ಅದು ಬಹಳ ಮುಖ್ಯವಾಗುತ್ತದೆ. ಇದನ್ನು ಓದಿ.. IPL 2023: ಒಂದು ಕಾಲದಲ್ಲಿ ಕೋಟಿ ಕೋಟಿ ರೂ ಗಳಿಸಿದ್ದ ಟಾಪ್ ಆಟಗಾರರು ಈ ಬಾರಿ ಹರಾಜಿನಲ್ಲಿ ಮಾರಾಟವಾಗೋದೇ ಡೌಟ್. ಟಾಪ್ 5 ಯಾರು ಗೊತ್ತೇ??