ಕೇವಲ 399 ರೂಪಾಯಿ ಕಟ್ಟಿ ಬರೋಬ್ಬರಿ 10 ಲಕ್ಷದ ವಿಮೆ ಪಡೆಯುವುದು ಹೇಗೆ ಗೊತ್ತೇ?? ಕುಟುಂಬ ಸೇಫ್ ಆಗುವುದು ಕೇವಲ 399 ರೂಪಾಯಿಗೆ..

ಜೀವನದಲ್ಲಿ ನಮಗೆ ಬಹಳ ಮುಖ್ಯವಾದದ್ದು ಆರೋಗ್ಯ, ಎಲ್ಲರೂ ಈಗ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ವಿಶೇಷವಾಗಿ ಕೋವಿಡ್ ಸೋಂಕು ಬಂದ ಬಳಿಕ, ಯಾರ ಜೀವಕ್ಕೂ ಗ್ಯಾರಂಟಿ ಇಲ್ಲ, ಮುಂಚಿತವಾಗಿಯೇ ಜಾಗ್ರತೆಯಿಂದ ಇರಬೇಕು ಎಂದು ಹೆಲ್ತ್ ಪಾಲಿಸಿಗಳನ್ನು ಅಂದರೆ ಜೀವವಿಮೆಗಳನ್ನು ಮಾಡಿಸಲು ಶುರು ಮಾಡಿದ್ದಾರೆ. ಈ ರೀತಿ ಆರೋಗ್ಯ ಜೀವವಿಮೆ ಮಾಡಿಸಿಕೊಡುವ ಹಲವು ಕಂಪನಿಗಳಿವೆ, ಅದರಲ್ಲಿ ನಮ್ಮ ಭಾರತದ ಅಂಚೆ ಸಂಸ್ಥೆ ಸಹ ಒಂದು. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಇಂದ ಟಾಟಾ AIG ಜೊತೆಗೂಡಿ ಅಫಘಾತ ವಿಮಾ ಪಾಲಿಸಿ ಒಂದನ್ನು ಹೊರತಂದಿದ್ದಾರೆ.

ಈ ಹೊಸ ಯೋಜನೆಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ಖಾತೆ ತೆರೆದಿರುವವರಿಗೆ ಲಭ್ಯವಿದೆ. ಈ ಯೋಜನೆಯ ಪ್ರಕಾರ ಒಂದು ವರ್ಷಕ್ಕೆ ₹299 ರೂಪಾಯಿ ಕಟ್ಟಬೇಕು, ಇದರಿಂದ ನಿಮಗೆ ₹10 ಲಕ್ಷ ರೂಪಾಯಿ ವಿಮೆ ಪಡೆಯಬಹುದು. ಒಂದು ವೇಳೆ ಅಪಘಾತ ಆದರೆ, ಚಕಿತ್ಸೆಗಾಗಿ 60,000 ರೂಪಾಯಿ ನೀಡಲಾಗುತ್ತದೆ, ದಿಢೀರ್ ಎಂದು ಗಾಯವಾದರೆ ಅದರ ಒಪಿಡಿಗೆ 30 ಸಾವಿರ ನೀಡಲಾಗುತ್ತದೆ. ಒಂದು ವೇಳೆ ಅಪಘಾತದಲ್ಲಿ ಸತ್ತು ಹೋದರೆ, 5000 ಪರಿಹಾರ, ಮಕ್ಕಳ ಶಿಕ್ಷಣಕ್ಕೆ 1 ಲಕ್ಷ ಪರಿಹಾರ ನೀಡುತ್ತಾರೆ. ಅಪಘಾತದಲ್ಲಿ ಅಂಗಗಳಿಗೆ ಸಮಸ್ಯೆ ಉಂಟಾದರೆ, 10 ಲಕ್ಷ ರೂಪಾಯಿ ಪರಿಹಾರ ನೀಡುತ್ತಾರೆ. 299 ಮತ್ತು 399 ರೂಪಾಯಿಯ ವಿಮೆಯಲ್ಲಿ ಈ ಸೌಲಭ್ಯದಲ್ಲಿ ಸಿಗುತ್ತದೆ. ಈ ಎರಡು ಯೋಜನೆಗಳಲ್ಲಿ ಒಂದು ವ್ಯತ್ಯಾಸ ಇದೆ. ಅದೇನೆಂದರೆ, 299 ರೂಪಾಯಿಯ ವಿಮೆಯ ಯೋಜನೆಯಲ್ಲಿ ಅಪಘಾತ ಆದ ವ್ಯಕ್ತಿಯ ಮಕ್ಕಳ ಓದಿಗೆ ಪರಿಹಾರ ನೀಡುವುದಿಲ್ಲ.

ಆದರೆ 399 ರೂಪಾಯಿಯ ವಿಮೆಯಲ್ಲಿ, ಅಪಘಾತದಲ್ಲಿ ಮೃತರಾದರೆ 10 ಲಕ್ಷರೂಪಾಯಿ ಪರಿಹಾರ ನೀಡಲಾಗುತ್ತದೆ, ಒಂದು ವೇಳೆ ಯಾವುದಾದರೂ ಒಂದು ಅಂಗ ಪೂರ್ತಿಯಾಗಿ ವೈಫಲ್ಯ ಉಂಟಾದರೆ, 10 ಲಕ್ಷ ಪರಿಹಾರ, ಪೂರ್ತಿ ಅಂಗ ವೈಫಲ್ಯಕ್ಕೆ ಒಳಗಾಗದೆ ಇದ್ದರೆ 10 ಲಕ್ಷ ರೂಪಾಯಿ ಪರಿಹಾರ. ವೈದ್ಯಕೀಯ ಖರ್ಚಿಗೆ 60 ಸಾವಿರ ಪರಿಹಾರ, ವಿದ್ಯಾಭ್ಯಾಸಕ್ಕೆ 1 ಲಕ್ಷ ಪರಿಬಾರ ಸಿಗುತ್ತದೆ. ಈ ಯೋಜನೆಯನ್ನು ಬಹಳಷ್ಟು ಜನರು ಮಾಡಿಸಿಕೊಳ್ಳುತ್ತಿದ್ದಾರೆ, ಹಾವು ಕಚ್ಚಿ ಸಾವಿಗೆ ಒಳಗಾಗುವವರು, ಕರೆಂಟ್ ಶಾಕ್ ಇಂದ ಮೃತರಾದವರಿಗೆ ಈ ವಿಮೆ ಲಭ್ಯವಾಗುತ್ತದೆ. ಆಸ್ಪತ್ರೆಗೆ ಸೇರುವುದಕ್ಕು ವಿಮೆಯಲ್ಲಿ ಅವಕಾಶ ಇದೆ. 18 ರಿಂದ 65 ವರ್ಷ ಇರುವವರು ಈ ವಿಮೆ ಮಾಡಿಸಿಕೊಳ್ಳಬಹುದು. ಈ ಎಲ್ಲಾ ಉಪಯೋಗ ಆಗಿರುವುದರಿಂದ ಹೆಚ್ಚು ಜನರು ಮಾಡಿಸಿಕೊಳ್ಳುತ್ತಿದ್ದಾರೆ.