ಕಪ್ ಗೆಲ್ಲುತ್ತಾರೋ ಇಲ್ಲವೋ: ಆದರೆ ವಿಶ್ವಕಪ್ ನಲ್ಲಿ ಪಾಕಿಗಳ ವಿರುದ್ಧ ಗೆದ್ದೇ ಗೆಲ್ಲುತ್ತಾರೆ, ಅದಕ್ಕಿರುವ ಮೂರು ಕಾರಣಗಳೇನು ಗೊತ್ತೇ?

ಭಾರತ ಮತ್ತು ಪಾಕಿಸ್ತಾನ್ ಎರಡು ದೇಶಗಳು ಬದ್ಧ ವೈರಿಗಳು ಎಂದು ನಮಗೆ ಗೊತ್ತೇ ಇದೆ. ಟಿ20 ವಿಶ್ವಕಪ್ ನಲ್ಲಿ ಭಾರತದ ಮೊದಲ ಪಂದ್ಯ ನಡೆಯಲಿರುವುದು ಪಾಕಿಸ್ತಾನ್ ವಿರುದ್ಧ, ಅಕ್ಟೋಬರ್ 23ರಂದು ಈ ಪಂದ್ಯ ನಡೆಯಲಿದ್ದು, ಆಸ್ಟ್ರೇಲಿಯಾದ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ ತಂಡದ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಅವರು ತಂಡವನ್ನು ಮುನ್ನಡೆಸಲಿದ್ದು, ಬಾಬರ್ ಅಜಂ ಅವರು ಪಾಕಿಸ್ತಾನ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ವರ್ಷ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ್ ತಂಡದ ವಿರುದ್ಧ ಭಾರತ ತಂಡ ಮೊದಲ ಬಾರಿಗೆ ಸೋಲನ್ನು ಕಂಡಿತ್ತು, ಆದರೆ ಈ ವರ್ಷ ಭಾರತ ತಂಡ ಪಾಕಿಸ್ತಾನ್ ಸೋಲಿಸುತ್ತದೆ ಎನ್ನುವ ಆತ್ಮವಿಶ್ವಾಸದಲ್ಲಿದೆ. ಪಾಕಿಸ್ತಾನ್ ವಿರುದ್ಧ ಗೆಲ್ಲಲು 3 ಪ್ರಮುಖ ಕಾರಣಗಳಿವೆ.. ಅವುಗಳ ಯಾವುವು ಎಂದು ಇಂದು ನಿಮಗೆ ತಿಳಿಸುತ್ತೇವೆ..

1.ಸ್ಟ್ರಾಂಗ್ ಮಿಡ್ಲ್ ಓವರ್ :- ಭಾರತ ತಂಡದಲ್ಲಿ ಉತ್ತಮವಾದ ಮಿಡ್ಲ್ ಓವರ್ ಬ್ಯಾಟ್ಸ್ಮನ್ ಗಳಿದ್ದಾರೆ. ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ ಮತ್ತು ರಿಷಬ್ ಪಂತ್ ಎಲ್ಲರೂ ಸಹ ಒಳ್ಳೆಯ ಫಾರ್ಮ್ ನಲ್ಲಿದ್ದಾರೆ. ಕಳೆದ ಕೆಲವು ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನ ನೀಡುತ್ತಿದ್ದಾರೆ. ಉದಾಹರಣೆಗೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 71 ರನ್ ಗಳಿಸಿದ್ದರು. ಸೂರ್ಯಕುಮಾರ್ ಯಾದವ್ ಅವರು ಸೌತ್ ಆಫ್ರಿಕಾ ವಿರುದ್ಧದ ಪಂದ್ಯದ ಸೀರೀಸ್ ಮ್ಯಾನ್ ಆಫ್ ದಿ ಮ್ಯಾಚ್ ಸೀರೀಸ್ ಸಹ ಗೆದ್ದಿದ್ದರು. ದೀಪಕ್ ಹೂಡಾ ಅವರು ಆವರೇಜ್ 40 ಇದೆ. ಹಾಗಾಗಿ ಮಿಡ್ಲ್ ಓವರ್ ನ ಬ್ಯಾಟ್ಸ್ಮನ್ ಗಳ ಅತ್ಯುತ್ತಮ ಪ್ರದರ್ಶನದಿಂದ ಪಾಕ್ ವಿರುದ್ಧ ಗೆಲುವು ಸಾಧಿಸಲು ಭಾರತ ತಂಡಕ್ಕೆ ಸಹಾಯವಾಗುತ್ತದೆ.

2.ಫಾರ್ಮ್ ನಲ್ಲಿರುವ ಟಾಪ್ ಆರ್ಡರ್ ಬ್ಯಾಟ್ಸ್ಮನ್ ಗಳು :- ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಕಣಕ್ಕೆ ಇಳಿಯುತ್ತಾರೆ, ಇನ್ನು ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೋಹ್ಲಿ ಅವರಿದ್ದಾರೆ. ಈ ಮೂವರು ಆಟಗಾರರು ಸಹ ಕೆಲ ಸಮಯದಿಂದ ಕಳಪೆ ಫಾರ್ಮ್ ನಲ್ಲಿದ್ದರು, ಆದರೆ ಈಗ ಈ ಮೂವರು ಆಟಗಾರರು ಸಹ ಒಳ್ಳೆಯ ಫಾರ್ಮ್ ನಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಸೀರೀಸ್ ನಲ್ಲಿ 71 ರನ್ ಗಳನ್ನು ಸಿಡಿಸಿದ್ದರು, ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಸಹ ಪಡೆದಿದ್ದರು. ಕೆ.ಎಲ್.ರಾಹುಲ್ ಅವರು ಎರಡು ಅರ್ಧಶತಕ ಭಾರಿಸಿದರು, ಇನ್ನು ವಿರಾಟ್ ಕೋಹ್ಲಿ ಅವರು ಮ್ಯಾಚ್ ವಿನ್ನಿಂಗ್ಸ್ ನೀಡುತ್ತಿದ್ದಾರೆ. ಈ ಮೂವರು ಆರಂಭಿಕ ಆಟಗಾರರು ಒಳ್ಳೆಯ ಫಾರ್ಮ್ ನಲ್ಲಿರುವುದು, ಭಾರತ ತಂಡಕ್ಕೆ ಪಾಕಿಸ್ತಾನ್ ವಿರುದ್ಧ ಗೆಲ್ಲಲು ಸಹಾಯ ಮಾಡುತ್ತದೆ ಎನ್ನಲಾಗುತ್ತಿದೆ.

3.ಪವರ್ ಫುಲ್ ಬೌಲಿಂಗ್ ಅಟ್ಯಾಕ್ :- ಪೇಸರ್ ಗಳಾದ ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಮೂವರು ಸಹ ಸ್ಕ್ವಾಡ್ ನಲ್ಲಿದ್ದಾರೆ. ಇನ್ನು ಜಸ್ಪ್ರೀತ್ ಬುಮ್ರ ಅವರ ಬದಲಾಗಿ ಮೊಹಮ್ಮದ್ ಶಮಿ ಅವರು ಆಡಬಹುದು ಎನ್ನಲಾಗಿದೆ. ಇನ್ನು ಹಾರ್ದಿಕ್ ಪಾಂಡ್ಯ ಅವರು ಸಹ ಆಲ್ ರೌಂಡರ್ ಆಗಿ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ. ಹಿಂದಿನ ಟಿ20 ಸೀರಿಸ್ ನಲ್ಲಿ 5 ವಿಕೆಟ್ಸ್ ಪಡೆದರು, ಭುವನೇಶ್ವರ್ ಕುಮಾರ್ ಅವರು ಹಲವು ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದಿದ್ದಾರೆ. ಹರ್ಷಲ್ ಪಟೇಲ್ ಅವರು ಸಹ ಉತ್ತಮ ಪ್ರದರ್ಶನ ನೀಡಿ, ಎಲ್ಲರನ್ನು ಆಕರ್ಷಿಸಿದರು. ಮೊಹಮ್ಮದ್ ಶಮಿ ಅವರು ಟೆಸ್ಟ್ ಕ್ರಿಕೆಟ್, ಒನ್ ಡೇ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಭಾರತ ತಂಡದ ಎಕ್ಸ್ ಫ್ಯಾಕ್ಟರ್ ಆಗಿದ್ದಾರೆ. ಈ ಮೂರು ಕಾರಣಗಳಿಂದ ಭಾರತ ತಂಡ ಗೆಲ್ಲುತ್ತದೆ ಎನ್ನುವ ನಂಬಿಕೆ ಅಭಿಮಾನಿಗಳಿಗೆ ಮತ್ತು ಕ್ರಿಕೆಟ್ ತಜ್ಞರಿಗೆ ಇದೆ.