ನಿಮ್ಮ ಮನೆಯಲ್ಲಿ ಹಣ ಉಳಿಯುತ್ತಿಲ್ಲವೇ?? ಕೈಯಲ್ಲಿ ಕಾಸು ನಿಲ್ಲುತ್ತಿಲ್ಲವೇ?? ಹಾಗಿದ್ದರೆ ನೀವು ಮಾಡುತ್ತಿರುವ ತಪ್ಪುಗಳೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಆರ್ಥಿಕವಾಗಿ ಸಬಲರಾಗಿ ಇರಬೇಕು ಎನ್ನುವ ಕನಸು ಕಾಣುತ್ತಿರುತ್ತಾರೆ. ತಮ್ಮ ಬಳಿ ಸಾಕಷ್ಟು ಹಣ ಇರಬೇಕು ಐಷಾರಾಮಿ ಜೀವನ ನಡೆಸಬೇಕು ಎನ್ನುವ ಇರಾದೆ ಕೂಡ ಅವರ ಮನಸ್ಸಿನಲ್ಲಿ ಇರುತ್ತದೆ. ಇದಕ್ಕಾಗಿ ಅವರು ಶಕ್ತಿಮೀರಿ ಕೆಲಸವನ್ನು ಕೂಡ ಮಾಡುತ್ತಾರೆ ಆದರೆ ಅದರಿಂದ ಬರುವಂತಹ ಹಣ ಅವರ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುವುದಿಲ್ಲ. ಆದರೆ ನಾವು ಗಳಿಸುವ ಹಣ ನಮ್ಮ ಕೈಯಲ್ಲಿ ಇಲ್ಲದೆ ಇರಲು ನಾವು ಮಾಡುವಂತಹ ಕೆಲವೊಂದು ತಪ್ಪುಗಳು ಕಾರಣ ಎನ್ನುವುದನ್ನು ಕೂಡ ನಾವಿಲ್ಲಿ ಗಮನಿಸಿಕೊಳ್ಳಬೇಕು.

ಇದರಲ್ಲಿ ನಾವು ಇರುವಂತಹ ಮನೆಯ ವಾಸ್ತು ದೋಷ ವಿನಾಕಾರಣ ಕೂಡ ಇದ್ದೇ ಇರುತ್ತದೆ. ಹೀಗಾಗಿ ಇಲ್ಲಿ ನಾವು ಕೆಲವೊಂದು ಮಾಡುವ ತಪ್ಪು ಕಾರ್ಯಗಳಿಂದಾಗಿ ಆರ್ಥಿಕ ಸ್ಥಿತಿಯನ್ನು ವುದು ನಮ್ಮ ಜೀವನದಲ್ಲಿ ಅಧೋಗತಿಗೆ ಹೋಗಿರುತ್ತದೆ. ಇದು ನಮ್ಮ ಮನೆಯ ಸುತ್ತಮುತ್ತಲ ಇರುವಂತಹ ಕೆಲವೊಂದು ವಾಸ್ತುದೋಷವನ್ನು ತರುವಂತಹ ವಿಚಾರಗಳನ್ನು ನಾವು ಕಡೆಗಣನೆ ಮಾಡುವುದರಿಂದಾಗಿ ಕೂಡ ಆಗುತ್ತದೆ. ಹಾಗಿದ್ದರೆ ಇಂತಹ ದೋಷ ಉಂಟಾಗಲು ಕಾರಣವಾಗಿರುವ ಅಂತಹ ಸಮಸ್ಯೆಗಳಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮನೆಯ ಸುತ್ತಮುತ್ತ ಒಣಗಿರುವ ಮರ ಅಥವಾ ಮನೆಯಲ್ಲಿ ಒಣಗಿರುವ ಎಲೆಗಳು ಕಂಡುಬಂದರೆ ಅದು ನಿಜಕ್ಕೂ ಕೂಡ ನಿಮಗೆ ವಾಸ್ತುದೋಷವನ್ನು ತರುತ್ತವೆ. ಇದರಿಂದಾಗಿ ನಿಮ್ಮ ಮನೆಯಲ್ಲಿ ಯಾವುದೇ ಪ್ರಗತಿಗಳು ಕೂಡ ಕಂಡು ಬರುವುದಿಲ್ಲ. ಹೀಗಾಗಿ ನಿಮ್ಮ ಕಣ್ಣಿಗೆ ನಿಮ್ಮ ಮನೆಯ ಸುತ್ತಮುತ್ತ ಯಾವುದೇ ಒಣ ಮರಗಳು ಅಥವಾ ಒಣ ಎಲೆಗಳು ಕಂಡುಬಂದರೆ ಅವುಗಳನ್ನು ಕೂಡಲೇ ಅಲ್ಲಿಂದ ತೆಗೆಯುವುದು ನಿಮ್ಮ ಜೀವನಕ್ಕೆ ಉತ್ತಮ.

ಮನೆಯಲ್ಲಿ ನಲ್ಲಿಯಿಂದ ಅನಾವಶ್ಯಕವಾಗಿ ನೀರು ತೊಟ್ಟಿಕ್ಕುತ್ತಿರುವುದು ಮನೆಯ ನೀರಿನ ಟ್ಯಾಂಕ್ ಇಂದ ಅನಾವಶ್ಯಕವಾಗಿ ನೀರು ಹರಿಯುವುದು ಹೇಗೆ ನೀರು ಅನಾವಶ್ಯಕವಾಗಿ ಹರಿಯುತ್ತಲೇ ಇದ್ದರೆ ಅದು ನಿಮ್ಮ ರಾಶಿಯ ಚಂದ್ರಮನಿಗೆ ಒಳಿತಲ್ಲ. ನಿಮಗೆಲ್ಲರಿಗೂ ತಿಳಿದಿರುವಂತೆ ಚಂದ್ರಮ ಐಶ್ವರ್ಯ ಹಾಗೂ ಸಮೃದ್ಧಿಯ ಪ್ರತೀಕ. ಹೀಗಾಗಿ ನಿಮ್ಮ ವಾಸ್ತು ದೋಷದಲ್ಲಿ ಚಂದ್ರಮನ ಪ್ರಭಾವ ವ್ಯತಿರಿಕ್ತವಾಗಿ ಕಂಡುಬಂದರೆ ನಿಮ್ಮ ಜೀವನದಲ್ಲಿ ಸಾಕಷ್ಟು ಕೆಡುಕುಗಳನ್ನು ನೀವು ಎದುರಿಸಬೇಕಾಗುತ್ತದೆ. ಹೀಗಾಗಿ ಈ ಕುರಿತಂತೆ ನೀವು ಕೊಂಚಮಟ್ಟಿಗೆ ಜಾಗ್ರತೆ ವಹಿಸುವುದು ಉತ್ತಮ.

ಇನ್ನು ನಿಮ್ಮ ಮನೆಯ ಮುಂದೆ ಲೈಟ್ ಕಂಬ ಇರುವುದು ನಿಜಕ್ಕೂ ಕೂಡ ನಿಮ್ಮ ವಾಸು ದೋಷಕ್ಕೆ ಪ್ರಮುಖ ಕಾರಣವಾಗಿರುತ್ತದೆ. ಇದರಿಂದಾಗಿಯೇ ಮನೆಯಲ್ಲಿ ನಕಾರಾತ್ಮಕ ಶಕ್ತಿ ಗಳ ಓಡಾಟ ಹೆಚ್ಚಾಗಿರುತ್ತದೆ ಎಂಬುದಾಗಿ ತಿಳಿದುಬಂದಿದೆ. ಇದರಿಂದಾಗಿ ನಿಮ್ಮ ಜೀವನದಲ್ಲಿ ಆರ್ಥಿಕ ಕೊರತೆ ಹೆಚ್ಚಾಗಿರುತ್ತದೆ.

ಮನೆಯಲ್ಲಿ ನಿಂತಿರುವ ಗಡಿಯಾರ ಇದ್ದರೆ ಖಂಡಿತವಾಗಿ ನಾವು ಮಾಡುವ ಯಾವುದೇ ಕೆಲಸಗಳಲ್ಲಿ ಕೂಡ ನನಗೆ ಯಶಸ್ಸು ಸಿಗುವುದಿಲ್ಲ. ಇಷ್ಟು ಮಾತ್ರವಲ್ಲದೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಕೂಡ ಹೆಚ್ಚಾಗಿ ಓಡಾಡಿಕೊಂಡಿರುತ್ತದೆ. ಇದರಿಂದಾಗಿ ನಮ್ಮ ಜೀವನದಲ್ಲಿ ನಾವು ಉನ್ನತಿ ಹೊಂದಲು ಸಾಧ್ಯವಿಲ್ಲ. ಹೀಗಾಗಿ ತಪ್ಪದೆ ಗಡಿಯಾರ ನಿಂತಿದ್ದರೆ ಅದಕ್ಕೆ ಬ್ಯಾಟರಿ ಹಾಕಿ ಸಕ್ರಿಯವಾಗಿರುವಂತೆ ಮಾಡಿ.

ಇನ್ನು ಪ್ರಮುಖವಾಗಿ ಮನೆಯನ್ನು ಸ್ವಚ್ಛವಿರಿಸುವುದು ಪ್ರಮುಖವಾಗಿರುತ್ತದೆ. ಆದರೆ ಅದರಲ್ಲೂ ಪ್ರಮುಖವಾಗಿ ಮನೆಯ ಮುಖ್ಯ ದ್ವಾರವನ್ನು ಸ್ವಚ್ಛವಾಗಿರಿಸಲೇಬೇಕು. ಅದರಲ್ಲೂ ಸಂಜೆ ಸಂದರ್ಭದಲ್ಲಿ ಮುಖ್ಯದ್ವಾರ ಸ್ವಚ್ಛವಾಗಿ ಹಾಗೂ ಅಲ್ಲಿ ಲೈಟ್ ಕೂಡ ಹಾಕಿರಬೇಕು. ಮುಖ್ಯದ್ವಾರದಲ್ಲಿ ಸ್ವಚ್ಛ ಹಾಗೂ ಬೆಳಕು ಇರುವುದು ನಾವು ಮುನ್ನಡೆಯನ್ನು ಪಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ವಾಸ್ತುವಿನ ಪ್ರಕಾರ ಮನೆಯ ಅಡುಗೆ ಮನೆ ಎನ್ನುವುದು ಬಾತ್ರೂಂಗೆ ಎದುರಾಗಿರಬಾರದು. ಹೀಗಿದ್ದಲ್ಲಿ ಮನೆಯಲ್ಲಿ ಸಾಕಷ್ಟು ನಕರಾತ್ಮಕ ಶಕ್ತಿಗಳು ಓಡಾಡಿಕೊಂಡಿರುತ್ತವೆ ಹಾಗೂ ಮನೆಯ ಪ್ರತಿಯೊಬ್ಬರು ಕಾರ್ಯದಲ್ಲಿ ಕೂಡ ನಕಾರಾತ್ಮಕ ಫಲಿತಾಂಶವೇ ಕಂಡುಬರುತ್ತದೆ. ಹೀಗಾಗಿ ಮನೆ ಕಟ್ಟುವ ಸಂದರ್ಭದಲ್ಲಿ ಕೆಲವೊಂದು ವಿಚಾರಗಳು ವಾಸ್ತುವಿನ ಪ್ರಕಾರ ಕೇಳಿ ತಿಳಿದುಕೊಂಡು ನಾವು ಮಾಡಬೇಕಾಗುತ್ತದೆ ಇಲ್ಲಿ ನಮ್ಮ ತಪ್ಪು ಕಂಡು ಬಂದರೆ ಮುಂದಿನ ದಿನಗಳಲ್ಲಿ ನಾವು ಕೆಲವೊಂದು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಇದರಿಂದ ಜೀವನದಲ್ಲಿ ನಾವು ಸಾಕಷ್ಟು ಕಳೆದುಕೊಳ್ಳಬೇಕಾಗುತ್ತದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೇ ಕೊಡು ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ.