ಸಿದ್ದಾರ್ಥ್ ಬೇಡ, ಸಿರಾಜ್ ಅಂತೂ ಬೇಡವೇ ಬೇಡ. ಲಕ್ನೋ ವಿರುದ್ಧ ಗೆಲ್ಲಲು ಆರ್ಸಿಬಿ ಬಳಿ ಮತ್ತೊಂದು ಅಸ್ತ್ರ. ಈತನನ್ನು ಕರೆತರುವುದೇ ಆರ್ಸಿಬಿ ಬಲ. ಯಾರು ಗೊತ್ತೇ?

ಸಿದ್ದಾರ್ಥ್ ಬೇಡ, ಸಿರಾಜ್ ಅಂತೂ ಬೇಡವೇ ಬೇಡ. ಲಕ್ನೋ ವಿರುದ್ಧ ಗೆಲ್ಲಲು ಆರ್ಸಿಬಿ ಬಳಿ ಮತ್ತೊಂದು ಅಸ್ತ್ರ. ಈತನನ್ನು ಕರೆತರುವುದೇ ಆರ್ಸಿಬಿ ಬಲ. ಯಾರು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ನ ಆರಂಭದಲ್ಲಿ ಅತ್ಯುತ್ತಮವಾಗಿ ಸತತ ಗೆಲುವುಗಳ ಮೂಲಕ ಕೇಬಲ್ ಟಾಪರ್ ಆಗಿ ಕಾಣಿಸಿಕೊಳ್ಳುವ ಭರವಸೆಯನ್ನು ನೀಡಿತ್ತು. ಆದರೆ ಐಪಿಎಲ್ ನ ದ್ವಿತೀಯಾರ್ಧದಲ್ಲಿ ಸತತವಾಗಿ ಸೋಲುವ ಮೂಲಕ ಪ್ಲೇಆಫ್ ಹಂತಕ್ಕೆ ತೇರ್ಗಡೆ ಆಗುವ ಕುರಿತಂತೆ ಅನುಮಾನವನ್ನು ಮೂಡಿಸಿತ್ತು. ಸದ್ಯಕ್ಕೆ ನಿನ್ನೆ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ಡೆಲ್ಲಿ ತಂಡವನ್ನು ಸೋಲಿಸಿದ ನಂತರ ಪ್ಲೇಆಫ್ ಹಂತಕ್ಕೆ ತೇರ್ಗಡೆ ಆಗುವುದನ್ನು ದೃಢಪಡಿಸಿದೆ.

ಇದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ದಿದ್ದು ಕೂಡ ಒಂದು ಮೂಲ ಕಾರಣವಾಗಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರ ಪ್ರದರ್ಶನದ ಕುರಿತಂತೆ ನೋಡುವುದಾದರೆ ಕೆಲವು ಆಟಗಾರರು ಸತತವಾಗಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಇನ್ನು ಕೆಲವು ಆಟಗಾರರು ಕಳೆದು ಪ್ರದರ್ಶನವನ್ನು ಕೂಡ ನೀಡಿದ್ದಾರೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವಿರಾಟ್ ಕೊಹ್ಲಿ ರವರು ಟೂರ್ನಿಯ ಆರಂಭದಲ್ಲಿ ಸಾಕಷ್ಟು ಕಳಪೆ ಪ್ರದರ್ಶನವನ್ನು ನೀಡುತ್ತಿದ್ದರು ಹಾಗೂ ಮೂರು ಬಾರಿ ಸೊನ್ನೆ ರನ್ನಿಗೆ ಕೂಡ ಔಟಾಗಿದ್ದಾರೆ. ಆದರೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 73 ರನ್ನುಗಳನ್ನು ದಾಖಲಿಸುವ ಮೂಲಕ ವಿರಾಟ್ ಕೊಹ್ಲಿ ಅವರು ಇಂದಿಗೂ ಕೂಡ ಈ ಆಟದ ಕಿಂಗ್ ನಾನೇ ಎಂಬುದನ್ನು ಸಾಬೀತುಪಡಿಸಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ನಾಯಕ ಡುಪ್ಲೆಸಿಸ್ ರವರು ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದಾರೆ. ಅದರಲ್ಲೂ ಗ್ಲೆನ್ ಮ್ಯಾಕ್ಸ್ವೆಲ್ ರವರು ಪಾರ್ಟ್ ಟೈಮ್ ಬೌಲರ್ ಆಗಿ ಉತ್ತಮ ಸಹಕಾರವನ್ನು ತಂಡಕ್ಕೆ ನೀಡಿದ್ದಾರೆ.

ಇನ್ನು ವನಿಂದು ಹಸರಂಗ ಸೇರಿದಂತೆ ಹರ್ಷಲ್ ಪಟೇಲ್ ಜೋಷ್ ಹೆಝಲ್ ವುಡ್ ರವರು ಕೂಡ ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಶಾಬಾಜ್ ಅಹ್ಮದ್ ಹಾಗೂ ದಿನೇಶ್ ಕಾರ್ತಿಕ್ ರವರು ಕೂಡ ತಂಡದ ಕಷ್ಟದ ಸಂದರ್ಭದಲ್ಲಿ ನೆರವಿಗೆ ನಿಂತಿದ್ದಾರೆ. ಆದರೆ ತಂಡದಲ್ಲಿ ಮೊಹಮ್ಮದ್ ಸಿರಾಜ್ ರವರು ಸಾಕಷ್ಟು ಕಳಪೆ ಪ್ರದರ್ಶನವನ್ನು ನೀಡುತ್ತಿದ್ದರು. ಇದೇ ಕಾರಣಕ್ಕಾಗಿ ಲಾಸ್ಟ್ ಲೀಗ್ ಪಂದ್ಯಾವಳಿಯಲ್ಲಿ ಸಿದ್ದಾರ್ಥ್ ಕೌಲ್ ರವರಿಗೆ ಅವಕಾಶವನ್ನು ಟೀ ಮ್ಯಾನೇಜ್ಮೆಂಟ್ ನೀಡಿತ್ತಾದರೂ ಅವರು ಕೂಡ ಯಾವುದೇ ವಿಕೆಟ್ ಕಬಳಿಸಿದೆ 4 ಓವರ್ಗಳಲ್ಲಿ ಬರೋಬ್ಬರಿ 43 ರನ್ನುಗಳನ್ನು ಹರಿಬಿಟ್ಟಿದ್ದರು.

ಹೀಗಾಗಿ ಸಿರಾಜ್ ರವರ ಹಾಗೆ ಸಿದ್ಧಾರ್ಥ್ ಕೂಡ ತಂಡದ ಕೊರತೆಯ ಅಂಶವಾಗಿ ಕಾಣಿಸಿಕೊಳ್ಳಬಹುದು. ಹೀಗಾಗಿ ಇವರ ಬದಲಿಗೆ ಮತ್ತೊಬ್ಬ ಯುವ ಆಟಗಾರರಾಗಿರುವ ಚಾಮ ಮಿಲಿಂದ್ ರವರಿಗೆ ಆರ್ಸಿಬಿ ಮೇ 25 ರಂದು ನಡೆಯಲಿರುವ ಲಕ್ನೋ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಅವಕಾಶ ನೀಡಬಹುದಾಗಿದೆ. ಚಾಮ ಮಿಲಿಂದ ರವರನ್ನು ಹರಾಜಿನಲ್ಲಿ 25 ಲಕ್ಷ ರೂಪಾಯಿ ಖರೀದಿಸಲಾಗಿದೆ. ಇವರು ಇದುವರೆಗೂ 53 ಟಿ20 ಪಂದ್ಯಗಳನ್ನು ತಮ್ಮ ವೃತ್ತಿಜೀವನದಲ್ಲಿ ಆಡಿದ್ದಾರೆ.

ಇವುಗಳಲ್ಲಿ 83 ವಿಕೆಟ್ಗಳನ್ನು ಕಬಳಿಸಿರುವ ಚಾಮ ಮಿಲಿಂದ್ ರವರ ಬೆಸ್ಟ್ ಬೌಲಿಂಗ್ ಫಿಗರ್ ಐದು ವಿಕೆಟ್ ಗಳಿಗೆ 8ರನ್ ಆಗಿದೆ. ಇನ್ನು ಇವರ ಬೌಲಿಂಗ್ ಎಕಾನಮಿ ನೋಡಿದರೆ ಕೇವಲ ಓವರ್ ಗೆ 7.62 ರನ್ನುಗಳನ್ನು ನೀಡಿದ್ದಾರೆ. ಅದು ಅಲ್ಲದೆ ಅಂತರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ನಲ್ಲಿ ಖಂಡಿತವಾಗಿ ಈತನನ್ನು ಯಾರೂ ಕೂಡ ರೀಡ್ ಮಾಡಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ ಎಲಿಮಿನೇಟರ್ ನಲ್ಲಿ ಸಿರಾಜ್ ಹಾಗೂ ಸಿದ್ದಾರ್ಥ್ ಅವರ ಬದಲಿಗೆ ಚಾಮ ಮಿಲಿಂದ್ ರವರನ್ನು ತಂಡದಲ್ಲಿ ಆಯ್ಕೆ ಮಾಡಬಹುದಾಗಿದೆ. ಖಂಡಿತ ಆಟಗಾರ ತನ್ನ ಭರವಸೆಗೆ ತಕ್ಕಂತೆ ಪ್ರದರ್ಶನವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ನಿಮಗೆ ಈ ಕುರಿತಂತೆ ಯಾವ ಅಭಿಪ್ರಾಯ ಇದೆ ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.