ಮಹತ್ವದ ಪಂಜಾಬ್ ಪಂದ್ಯದಲ್ಲಿ ಆರ್ಸಿಬಿ ತಂಡ ಸೋಲಲು ಕಾರಣವಾದ ಇಬ್ಬರು ಆಟಗಾರರು ಯಾರು ಗೊತ್ತೇ?? ಕ್ರಿಕೆಟ್ ಪಂಡಿತರು ಹೇಳಿದ್ದು ಯಾರ ಹೆಸರು ಗೊತ್ತೇ??

ಮಹತ್ವದ ಪಂಜಾಬ್ ಪಂದ್ಯದಲ್ಲಿ ಆರ್ಸಿಬಿ ತಂಡ ಸೋಲಲು ಕಾರಣವಾದ ಇಬ್ಬರು ಆಟಗಾರರು ಯಾರು ಗೊತ್ತೇ?? ಕ್ರಿಕೆಟ್ ಪಂಡಿತರು ಹೇಳಿದ್ದು ಯಾರ ಹೆಸರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಲು ಸಾಕಷ್ಟು ಕಷ್ಟಗಳನ್ನು ಎದುರಿಸುವಂತಹ ಪರಿಸ್ಥಿತಿ ಒದಗಿ ಬಂದಿದೆ. ಮೊನ್ನೆ ನಡೆದ ಪಂದ್ಯವನ್ನು ಗೆದ್ದಿದ್ದರೆ ಆರ್ಸಿಬಿ ತಂಡ ಸುಲಭವಾಗಿ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಬಹುದಿತ್ತೇನೋ, ಆದರೆ ಪಂಜಾಬ್ ಕಿಂಗ್ಸ್ ತಂಡದ ಎದುರಿಗೆ ನಡೆದಿರುವಂತಹ ಪಂದ್ಯದಲ್ಲಿ ಡಾಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯವಾಗಿ ಸೋತಿದೆ. ಇನ್ನುಳಿದಿರುವ ಅಂತಹ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದೊಡ್ಡ ಅಂತರದಲ್ಲಿ ಗೆಲ್ಲಲೇ ಬೇಕಾಗಿರುವಂತಹ ಒತ್ತಡದಲ್ಲಿ ಸಿಲುಕಿದೆ.

ಇನ್ನು ಮೊನ್ನೆ ನಡೆದಂತಹ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಗಳು ಸಾಕಷ್ಟು ದುಬಾರಿಯಾದರು ಎಂದು ಹೇಳಬಹುದಾಗಿದೆ. ಅದರಲ್ಲಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇಬ್ಬರು ಆಟಗಾರರು ತಂಡದ ಸೋಲಿಗೆ ಕಾರಣರಾದರು ಎಂದು ಹೇಳಬಹುದಾಗಿದೆ. ಇವರಿಬ್ಬರೇ ಆರ್ಸಿಬಿ ತಂಡದ ಸೋಲಿಗೆ ಪ್ರಮುಖ ಕಾರಣ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಹೌದು ಗೆಳೆಯರೇ ಆರ್ಸಿಬಿ ತಂಡ ಪವರ್ ಪ್ಲೇ ಓವರ್ನಲ್ಲಿ ಬಿಟ್ಟು ಕೊಟ್ಟಂತಹ ರನ್ ಬರೋಬ್ಬರಿ 83 ಇದೆ ಲೆಕ್ಕಚಾರದಲ್ಲಿ ಪಂಜಾಬ್ ಕಿಂಗ್ಸ್ ತಂಡ ಪವರ್ ಪ್ಲೇ ನಲ್ಲಿ ಬಿಟ್ಟು ಕೊಟ್ಟಂತಹ ರನ್ ಕೇವಲ 44 ರನ್ ಮಾತ್ರ.

ಇನ್ನು ತಂಡದ ಸೋಲಿಗೆ ಕಾರಣ ಯಾರು ಎಂದು ಹೇಳುವುದಾದರೆ ತಂಡದ ಪ್ರಮುಖ ಬೌಲರ್ ಗಳಾಗಿ ಕಾಣಿಸಿಕೊಂಡಿರುವ ಜೋಶ್ ಹೆಝಲ್ ವುಡ್ ಹಾಗೂ ಮೊಹಮ್ಮದ್ ಸಿರಾಜ್. ಜೋಶ್ ನಾಲ್ಕು ಓವರ್ಗಳಲ್ಲಿ ಬರೋಬ್ಬರಿ 64 ರನ್ನುಗಳನ್ನು ನೀರಿನಂತೆ ಹರಿಸಿದ್ದಾರೆ. ಇನ್ನು ಮೊಹಮ್ಮದ್ ಸಿರಾಜ್ ರವರು ತಾವು ಎಸ್ಎಸ್ ಇರುವಂತಹ ಕೇವಲ ಎರಡೇ ವಾರಗಳಲ್ಲಿ ಬರೋಬ್ಬರಿ 36 ರನ್ನುಗಳನ್ನು ನೀಡಿದ್ದಾರೆ. ಅಂದರೆ ಒಟ್ಟಿಗೆ ಇಬ್ಬರೂ ಸೇರಿಕೊಂಡು ಆರು ಓವರ್ ಗಳಲ್ಲಿ 100 ರನ್ ನೀಡಿದ್ದಾರೆ. ಈ ಕಾರಣದಿಂದಾಗಿಯೇ ಪಂಜಾಬ್ ಕಿಂಗ್ಸ್ ತಂಡ 210 ರನ್ನುಗಳ ದೊಡ್ಡಮಟ್ಟದ ಗುರಿಯನ್ನು ಆರ್ಸಿಬಿ ತಂಡಕ್ಕೆ ನೀಡಿತು. ಆದರೆ ಆರ್ಸಿಬಿ ತಂಡದ ಗ್ರಹಚಾರ ಕಟ್ಟಿರುವಂತೆ ಕಾಣುತ್ತದೆ ಬ್ಯಾಟಿಂಗ್ ಕ್ರಮಾಂಕ ಕೂಡ ಕೈಕೊಟ್ಟಿದೆ. ಹೀಗಾಗಿ 54 ರನ್ನುಗಳ ದೊಡ್ಡ ಅಂತರದ ಸೋಲಿನಿಂದ ಸೋತಿದೆ. ಕೊನೆಯ ಪಂದ್ಯದಲ್ಲಾದರೂ ಈ ಕೊರತೆಗಳನ್ನು ಸರಿಪಡಿಸಿ ಮಾಡು ಇಲ್ಲವೇ ಮಡಿಯೆನ್ನುವಂತೆ ಆಡಿದರೆ ಮಾತ್ರ ಗೆಲ್ಲಲು ಸಾಧ್ಯವಿದೆ.